Advertisement

ಮಂಗಳೂರು: ಇಡಿಯಿಂದ ಉದ್ಯಮಿಯ ಮನೆ ಜಪ್ತಿ

12:39 AM Apr 01, 2022 | Team Udayavani |

ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ಮಂಗಳೂರಿನ ಅತ್ತಾವರದ ಇಕ್ಬಾಲ್‌ ಅಹ್ಮದ್‌ ಅವರಿಗೆ ಸೇರಿದ 8.3 ಕೋಟಿ ರೂ. ಮೌಲ್ಯದ ಮನೆಯನ್ನು ಜಪ್ತಿ ಮಾಡಿದ್ದಾರೆ.

Advertisement

ಇನ್ಫ್ರಾ ಪ್ರಾಜೆಕ್ಟ್ ಪ್ರೈವೇಟ್‌ ಲಿ. ಮತ್ತು ಶರೀಫ್ ಮರೀನಿ ಪ್ರಾಡಕ್ಟ್ಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಇಕ್ಬಾಲ್‌ ಅಹ್ಮದ್‌ ಅವರು ಫೆಮಾ ಕಾಯ್ದೆ ಉಲ್ಲಂಘಿಸಿ ವಿದೇಶದಲ್ಲಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ದುಬಾೖ, ಯುಎಇನಲ್ಲಿ 53.09 ಲಕ್ಷ ರೂ.ಯುಎಇ ದಿರಂಗಳ (ಭಾರತದ 8.03 ಕೋಟಿ ರೂ.ಗೆ ಸಮಾನಾದ) ಸ್ಥಿರಾಸ್ತಿ ಸಂಪಾದಿದ್ದರು.

ಈ ಹಿನ್ನೆಲೆಯಲ್ಲಿ ಅವರ ಮನೆಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ. ಫೆಮಾ ಕಾಯ್ದೆ ಉಲ್ಲಂ ಸಿ ವಿದೇಶದಲ್ಲಿ ಸ್ಥಿರಾಸ್ತಿ ಸಂಪಾದಿಸಿದ್ದರೆ, ಅಲ್ಲಿನ ಮೌಲ್ಯಕ್ಕೆ ಸಮಾನವಾಗಿ ಭಾರತದಲ್ಲಿರುವ ಆರೋಪಿತ ವ್ಯಕ್ತಿಯ ಆಸ್ತಿಯನ್ನು ಜಪ್ತಿ ಮಾಡುವ ಅಧಿಕಾರ ಇದೆ ಎಂದು ಇಡಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next