Advertisement

ಮಾಟಮಂತ್ರದ ಕಾಟ: ಕುಟುಂಬದ ವಿರುದ್ಧವೇ ದೂರು ನೀಡಲು ಮುಂದಾದ ಉದ್ಯಮಿ ವಿಜಯ ಸಂಕೇಶ್ವರ ಪುತ್ರಿ

01:27 PM Jul 02, 2024 | Team Udayavani |

ಬೆಳಗಾವಿ: ಆಸ್ತಿ ಕಬಳಿಸಲು ಮಾಟಮಂತ್ರ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಷ್ಠಿತ ಉದ್ಯಮಿ ವಿಜಯ ಸಂಕೇಶ್ವರ ಅವರ ಪುತ್ರಿ ದೀಪಾ ಸಿದ್ನಾಳ ಅವರು ತಮ್ಮ ಕುಟುಂಬದ ಸದಸ್ಯರ ವಿರುದ್ಧವೇ ದೂರು ದಾಖಲಿಸಿದ್ದಾರೆ.

Advertisement

ಉದ್ಯಮಿ ಶಶಿಕಾಂತ ಸಿದ್ನಾಳ, ಪತ್ನಿ ವಾಣಿ ಸಿದ್ನಾಳ ಹಾಗೂ ಪುತ್ರ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ದಿಗ್ವಿಜಯ ಸಿದ್ನಾಳ ವಿರುದ್ಧ ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಾಜಿ ಸಂಸದ ಎಸ್.ಬಿ. ಸಿದ್ನಾಳ ಅವರ ಪುತ್ರ ದಿ. ಶಿವಕಾಂತ ಸಿದ್ನಾಳ ಇತ್ತೀಚೆಗೆ ನಿಧನರಾಗಿದ್ದಾರೆ. ಇವರ ಒಡೆತನದ ವಿಜಯಕಾಂತ ಡೈರಿಯನ್ನು ಶಶಿಕಾಂತ ಸಿದ್ನಾಳ ಕುಟುಂಬ ಕಬಳಿಸಲು ಹುನ್ನಾರ ನಡೆಸಿದ್ದು, ಇದಕ್ಕಾಗಿ ತಮ್ಮ ವಿರುದ್ಧ ಮಾಟಮಂತ್ರ ನಡೆಸಲಾಗಿದೆ. ಜತೆಗೆ ತಮ್ಮ ಪತಿ ಶಿವಕಾಂತ ಅವರ ಸಮಾಧಿ ಮೇಲೂ ವಾಮಾಚಾರ ನಡೆಸಲಾಗಿದೆ. ವಿಜಯಕಾಂತ ಡೈರಿ ಪಾಲುದಾರಿಕೆ ಹಾಗೂ ಅದರ ಆಸ್ತಿ ಕಬಳಿಸುವ ಕುತಂತ್ರ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.

ಇದನ್ನೂ ಓದಿ: Conversion: ಮತಾಂತರದಿಂದ ಬಹುಸಂಖ್ಯಾತರು…ಅಲ್ಪಸಂಖ್ಯಾತರಾಗಬಹುದು; ಅಲಹಾಬಾದ್‌ ಕೋರ್ಟ್

Advertisement

Udayavani is now on Telegram. Click here to join our channel and stay updated with the latest news.

Next