Advertisement

ವ್ಯಾಪಾರದ ಬಂಡವಾಳ

05:27 PM Jan 06, 2020 | Sriram |

ತನ್ನ ಕಾಲಕ್ಕಿಂತ ಹಿಂದೆ ಗಣಿತಜ್ಞರು ಕಂಡುಹಿಡಿದ, ಬರೆದ ಗಣಿತವನ್ನೆಲ್ಲ ಶಿಸ್ತುಬದ್ಧವಾಗಿ ಮತ್ತು ಅತ್ಯಂತ ಶಾಸ್ತ್ರೀಯವಾಗಿ ಜೋಡಿಸಿದ ಕೀರ್ತಿ ಯೂಕ್ಲಿಡನದು. ಅವನು ತನ್ನ ಕಾಲದ ಅತ್ಯಂತ ಪ್ರಾಮಾಣಿಕ ಮತ್ತು ಬುದ್ಧಿವಂತ ಸಂಪಾದಕ ಮಾತ್ರವಲ್ಲ, ಅತ್ಯಂತ ಯಶಸ್ವಿ ಶಿಕ್ಷಕನೂ ಕೂಡ. ಮೊದಲಿಗೆ, ಅವನಿಗೆ ತಾನು ಸಂಕಲಿಸಿದ ವಿಷಯಗಳ ಅನುಕ್ರಮಣಿಕೆ ಸರಿಯಾಗಿದೆಯೇ ಇಲ್ಲವೇ ತಿಳಿಯಬೇಕಾಗಿತ್ತು. ಹಾಗಾಗಿ, ಜ್ಯಾಮಿತಿಯನ್ನು ಸಂಕಲಿಸಿದ ಕ್ರಮದಲ್ಲೇ ಇನ್ನೊಬ್ಬನಿಗೆ ಕಲಿಸುವುದಕ್ಕಿಂತ ಬೇರೆ ಉಪಾಯವಿರಲಿಲ್ಲ. ಆದರೆ, ಯೂಕ್ಲಿಡ್‌ನ‌ ಕಾಲದ ಜನರಿಗೂ, ಈಗಿನಂತೆಯೇ ಗಣಿತ ಎಂದರೇನೆ ಅಲರ್ಜಿ!

Advertisement

ಅಷ್ಟೆಲ್ಲ ತಲೆನೋವು ಬರಿಸಿಕೊಂಡು ಈ ಗಣಿತವನ್ನು ಯಾಕಾದರೂ ಕಲಿಯಬೇಕು ಎಂಬ ಅಸಡ್ಡೆ ಬೇರೆ. ಇದಕ್ಕೆ ಯೂಕ್ಲಿಡ್‌ ಒಂದು ಉಪಾಯ ಮಾಡಿದ. ತನ್ನ ಗಣಿತದ ತರಗತಿಗಳಿಗೆ ಬರುವವರಿಗೆ ಪ್ರತಿಯೊಬ್ಬರಿಗೂ ಪ್ರತಿ ಅಧ್ಯಾಯದ ಕೊನೆಗೂ ಒಂದೊಂದು ಚಿನ್ನದ ನಾಣ್ಯ ಕೊಡುತ್ತೇನೆ ಎಂದು ಡಂಗುರ ಹೊಡೆಸಿದ. ಚಿನ್ನದ ಆಸೆಗಾಗಿ ಗಣಿತದ ಕಷಾಯ ಕುಡಿಯಲು ಸಾಕಷ್ಟು ಜನ ಬಂದರು. ಮೊದಮೊದಲಿಗೆ ಉಡಾಫೆ ತೋರಿದವರೂ ಬಳಿಕ ಆಸಕ್ತಿಯಿಂದ ಕಲಿಯುತ್ತಿದ್ದಾರೆ ಎಂದು ಯೂಕ್ಲಿಡ್‌ ಖಚಿತಪಡಿಸಿಕೊಂಡ. ಹಲವಾರು ಅಧ್ಯಾಯಗಳ ಪಾಠ ಮುಗಿಯಿತು. ಕೊನೆಗೊಂದು ದಿನ," ಇಂದಿಗೆ ನನ್ನ ಗಣಿತ ಪಾಠಗಳು ಮುಗಿದವು. ಆದರೆ, ಈ ತರಗತಿಗಳು ಮುಗಿದದ್ದರ ದ್ಯೋತಕವಾಗಿ ಒಂದು ಪ್ರಶ್ನೆಯನ್ನು ನಿಮ್ಮೆದುರು ಇಡುತ್ತೇನೆ. ಉತ್ತರ ತೆಗೆಯುವುದು ಬಿಡುವುದು ನಿಮಗೆ ಬಿಟ್ಟದ್ದು|; ಎಂದು ಹೇಳಿ ಒಂದು ಸಮಸ್ಯೆಯನ್ನು ಕೊಟ್ಟ. ಅವನ ವಿದ್ಯಾರ್ಥಿಗಳಿಗೆ ಗಣಿತದ ಹುಚ್ಚು ಎಷ್ಟೊಂದು ತೀವ್ರವಾಗಿತ್ತೆಂದರೆ, ಆ ಸಮಸ್ಯೆಗೆ ಉತ್ತರ ತೆಗೆಯಲು ಹಗಲುರಾತ್ರಿ ಒದ್ದಾಡಿದರು. ಏನೇನೇ ತಿಪ್ಪರಲಾಗ ಹೊಡೆದರೂ ಸಮಸ್ಯೆ ಒಡೆಯುವುದಕ್ಕಾಗಲಿಲ್ಲ.

ಉತ್ತರಕ್ಕಾಗಿ ಯೂಕ್ಲಿಡ್‌ ಬಳಿ ಬಂದರು. ಆಗ ಯೂಕ್ಲಿಡ್‌, -quot ಸಮಸ್ಯೆಯೇನೋ ಪರಿಹರಿಸಬಲ್ಲೆ. ಆದರೆ, ಅದಕ್ಕೆ ಒಂದು ಚಿನ್ನದ ನಾಣ್ಯ ಖರ್ಚು ಮಾಡಬೇಕಾಗುತ್ತಲ್ಲ! -quot ಎಂದು ಮುಗುಳ್ನಕ್ಕ. ಹೀಗೆ, ಗಣಿತದ ರುಚಿ ಹತ್ತಿಸಿ, ಕೊನೆಗೆ ಅತ್ಯಂತ ಸ್ವಾರಸ್ಯಕರ ಪ್ರಶ್ನೆಗಳನ್ನು ನೀಡುತ್ತ ತಾನು ಖರ್ಚು ಮಾಡಿದ್ದ ಎಲ್ಲ ಚಿನ್ನದ ನಾಣ್ಯಗಳನ್ನು ಯೂಕ್ಲಿಡ್‌ ವಾಪಸ್‌ ಪಡೆದನಂತೆ.

ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next