Advertisement

ಕೊನೆಗೂ ಪೊದೆಗಳ ತೆರವು ಕಾರ್ಯ; ಜಕ್ರಿಬೆಟ್ಟಿನ ಜಲ ಶುದ್ಧೀಕರಣ ಘಟಕ

10:55 AM Jul 22, 2022 | Team Udayavani |

ಬಂಟ್ವಾಳ: ಬಂಟ್ವಾಳ ನಗರದ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುವ ಬಂಟ್ವಾಳ ಪುರಸಭೆಯ ಜಕ್ರಿಬೆಟ್ಟಿನ ಜಲ ಶುದ್ಧೀಕರಣ ಘಟಕದ ಸುತ್ತಲೂ ಬೆಳೆದಿದ್ದ ಪೊದೆಗಳನ್ನು ಕೊನೆಗೂ ತೆರವುಗೊಳಿಸಲಾಗಿದ್ದು, ಈ ಹಿಂದೆ ಸಾಕಷ್ಟು ಬಾರಿ ದೂರು ನೀಡಿದರೂ ತೆರವುಗೊಳಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

Advertisement

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೂಲಕ ಜಕ್ರಿಬೆಟ್ಟಿನಲ್ಲಿ ಅನುಷ್ಠಾನಗೊಂಡಿರುವ 24.16 ಎಂಎಲ್‌ಡಿ ಸಾಮರ್ಥ್ಯದ ಜಲ ಶುದ್ಧೀಕರಣ ಘಟಕದ ಸುತ್ತಲೂ ಪೊದೆ ಬೆಳೆದಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಉದಯವಾಣಿ ಸುದಿನದಲ್ಲಿ ಜೂ. 29ರಂದು ಜಕ್ರಿಬೆಟ್ಟಿನ ಜಲ ಶುದ್ಧೀಕರಣ ಘಟಕ, ಸುತ್ತಲೂ ಬೆಳೆದು ನಿಂತ ಪೊದೆ ಎಂಬ ಶೀರ್ಷಿಕೆಯಲ್ಲಿ ಜನಪರ ಕಾಳಜಿಯ ವರದಿ ಪ್ರಕಟಗೊಳಿಸಿತ್ತು.

ಅದಕ್ಕೆ ಸ್ಪಂದನೆ ಎಂಬಂತೆ ಘಟಕದ ಬಹುತೇಕ ಪ್ರದೇಶದ ಪೊದೆಗಳನ್ನು ತೆರವು ಮಾಡಲಾಗಿದ್ದು, ಇನ್ನೂ ಒಂದಷ್ಟು ಪ್ರದೇಶದಲ್ಲಿ ಪೊದೆಗಳು ಹಾಗೇ ಉಳಿದುಕೊಂಡಿವೆ. ಅದನ್ನು ಕೂಡ ತೆರವು ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ತೆರವಿನ ಕಾರ್ಯವನ್ನು ಪುರಸಭೆ ನಡೆಸಿದ್ದು, ಬಳಿಕ ಅರ್ಧಕ್ಕೆ ನಿಲ್ಲಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಘಟಕದ ಸುತ್ತಲೂ ಆವರಣ ಗೋಡೆ ಇದ್ದು, ಹಿಂದೆ ಅದರ ಒಳಭಾಗದಲ್ಲಿ ಪೂರ್ತಿ ಪೊದೆಗಳು ತುಂಬಿಕೊಂಡಿದ್ದವು. ಇದೀಗ ಒಂದು ಬದಿಯಲ್ಲಿ ಪೊದೆಗಳು ಹಾಗೇ ಇವೆ. ನೀರು ಶುದ್ಧ ಮಾಡುವ ಘಟಕದ ಪರಿಸರವೇ ಶುದ್ಧವಾಗಿಲ್ಲ ಎಂಬ ಆರೋಪ ಕೂಡ ಕೇಳಿಬಂದಿತ್ತು. ಪ್ರಸ್ತುತ ಉಳಿದುಕೊಂಡಿರುವ ಪೊದೆಗಳ ತೆರವಿಗೂ ಪುರಸಭೆ ಕ್ರಮಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next