ಮೆಲ್ಬೋರ್ನ್: ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಕಾಡ್ಗಿಚ್ಚಿನಲ್ಲಿ ಸಂತ್ರಸ್ಥರಿಗೆ ನೆರವಾಗುವ ದೃಷ್ಟಿಯಿಂದ ನಡೆದ ಸಹಾಯಾರ್ಥ ಪಂದ್ಯದಲ್ಲಿ ಪಾಂಟಿಂಗ್ ತಂಡ ಗಿಲ್ ಕ್ರಿಸ್ಟ್ ತಂಡದ ವಿರುದ್ಧ ಒಂದು ರನ್ ಗಳ ಅಂತರ ಜಯ ಸಾಧಿಸಿತು.
ಹತ್ತು ಓವರ್ ಗಳ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಂಟಿಂಗ್ ಇಲೆವೆನ್ ತಂಡ ಬ್ರಿಯಾನ್ ಲಾರಾ (30) ಮತ್ತು ರಿಕಿ ಪಾಂಟಿಂಗ್ (28) ಬ್ಯಾಟಿಂಗ್ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿತು.
ಇದನ್ನು ಬೆನ್ನತ್ತಿದ ಗಿಲ್ ಕ್ರಿಸ್ಟ್ ಇಲೆವೆನ್ ತಂಡ 103 ರನ್ ಗಳಿಸಿತು. ಆರಂಭದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ವ್ಯಾಟ್ಸನ್ (30 ರನ್ ) ಮತ್ತು ಗಿಲ್ ಕ್ರಿಸ್ಟ್ (17) ಉತ್ತಮ ಆರಂಭ ನೀಡಿದರು. ಅಂತಿಮವಾಗಿ ಸೈಮಂಡ್ಸ್ ಮಿಂಚಿದರು (29 ರನ್) ಒಂದು ರನ್ ನಿಂದ ಸೋಲನುಭವಿಸಿದರು.
ಯುವಿ ವಿಫಲ
ಗಿಲ್ ಕ್ರಿಸ್ಟ್ ತಂಡದಲ್ಲಿ ಕಣಕ್ಕಿಳಿದ ಯುವರಾಜ್ ಸಿಂಗ್ ಆರು ಎಸೆತ ಎದುರಿಸಿ ಗಳಿಸಿದ್ದು ಕೇವಲ ಎರಡು ರನ್. ನಂತರ ಬ್ರೇಟ್ ಲಿ ಗೆ ವಿಕೆಟ್ ಒಪ್ಪಿಸಿದರು.