ಆಳಂದ: ಸ್ಥಳೀಯ ಕೆಕೆಆರ್‌ಟಿಸಿ ಘಟಕದಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಜಿಲ್ಲಾ ಕೇಂದ್ರಕ್ಕೆ ಪ್ರತ್ಯೇಕ ಎರಡು ವಲಯದ ಗ್ರಾಮೀಣ ಮಾರ್ಗ ಆಯ್ಕೆ ಮಾಡಿಕೊಂಡು ಪಟ್ಟಣದಿಂದ ನಿತ್ಯ ಬಸ್ ಸಂಚಾರಕ್ಕೆ ಶಾಸಕ ಸುಭಾಷ ಗುತ್ತೇದಾರ ಶನಿವಾರ ಹಸಿರು ನಿಶಾನೆ ತೋರಿಸಿದರು.
ಬಳಿಕ ಮಾತನಾಡಿದ ಶಾಸಕರು, ಹೊಸ ಮಾರ್ಗದ ಬಸ್ ಸಂಚಾರದಿಂದ ಪ್ರಯಾಣಿಕರು, ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ. ತಾಲೂಕಿನ ತಡಕಲ್‌ದಿಂದ ಮಹಾರಾಷ್ಟ್ರದ ಲಾತೂರ್‌ಗೆ ಸಂಚಾರದ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕೆಕೆಆರ್‌ಟಿಸಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ್ ಪ್ರಯತ್ನದಿಂದ ಎರಡು ಹೊಸ ಮಾರ್ಗಗಳಿಗೆ ಬಸ್ ಕಲ್ಪಿಸಲು ಸಾಧ್ಯವಾಗಿದೆ. ಅಲ್ಲದೇ ಕೊರೊನಾ ಬಳಿಕ ಕಡಿತವಾಗಿದ್ದ ಹಲವು ಮಾರ್ಗಗಳಿಗೆ ಪುನಃ ಬಸ್ ಸಂಚಾರ ಕಲ್ಪಿಸುವ ಮೂಲಕ ಗ್ರಾಮೀಣ ಜನರಿಗೆ ಅನುಕೂಲ ಮಾಡಿದ್ದಾರೆ ಎಂದು ಹೇಳಿದರು.
ಕೆಕೆಆರ್‌ಟಿಸಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ್ ಮಾತನಾಡಿ, ಆಳಂದ ತಾಲೂಕಿನ ಎಲ್ಲ ಗ್ರಾಮಗಳಿಗೆ ಸಾರಿಗೆ ಬಸ್ ಸೌಕರ್ಯ ಒದಗಿಸಲಾಗುವದು ಎಂದರು.
Related Articles
ಬೆಳಗ್ಗೆ 9:30ಕ್ಕೆ ಆಳಂದದಿಂದ ಹೊರಟು ಜಿಡಗಾ, ಜಮಗಾ ಮಾರ್ಗವಾಗಿ ಮಾದನಹಿಪ್ಪರಗಾ-ನಿಂಬಾ ಳ-ಮಾಡಿಯಾಳ-ನಿಂಬರಗಾ, ನಿಂಬರಗಾ ತಾಂಡಾ, ಬಸವಂತವಾಡಿ, ಧರ್ಮವಾಡಿ, ಆಲೂರ ಕ್ರಾಸ್ -ಸುಂಟನೂರ, ಪಟ್ಟಣ ಹಾಗೂ ಕಲಬುರಗಿಯ ಶಹಾಬಜಾರ ನಾಕಾ ವರೆಗೆ ಸಂಚಾರ ನಡೆಯಲಿದೆ. ಮತ್ತೂಂದೆಡೆ 10:45ಕ್ಕೆ ಆಳಂದ ಬಸ್ ನಿಲ್ದಾಣದಿಂದ ತಡಕಲ್, ಬೆಳಮಗಿ, ವಿ.ಕೆ. ಸಲಗರ, ಮುದ್ದಡಗಾ, ಅಂಬಲಗಾ, ಮಹಾಗಾಂವ್, ನೆಹರುಗಂಜ್ ವರೆಗೆ ಸಂಚರಿಸಲು ಅನುಕೂಲ ಕಲ್ಪಿಸಲಿದೆ. ಪ್ರಯಾಣಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಅಶೋಕ ಗುತ್ತೇದಾರ ಮಲ್ಲಿಕಾರ್ಜುನ ಕಂದಗೂಳೆ, ಸುನಿಲ ಹಿರೋಳಿಕರ, ಶ್ರೀಮಂತ ನಾಮಣೆ, ವಿಜಯ ಕೋಥಳಿಕರ, ಸಂತೋಷ ಹಾದಿಮನಿ, ಶರಣು ಕುಮಸಿ ಪ್ರಕಾಶ ಮಾನೆ, ನಿಗಮದ ವಿಭಾಗಿಯ ನಿಯಂತ್ರಣಾಧಿಕಾರಿ ಎಸ್.ಜಿ.ಗಂಗಾಧರ, ವಿಭಾಗಿಯ ಸಂಚಾರಿ ಅಧಿಕಾರಿ ರವಿಂದ್ರಕುಮಾರ, ಘಟಕದ ವವ್ಯಸ್ಥಾಪಕ ಜೆ.ಡಿ. ದೊಡ್ಡಮನಿ ಸಹಾಯಕ ಸಂಚಾರ ನಿರೀಕ್ಷಕ ಶರಣು ಮಾಲಗತ್ತಿ ಇದ್ದರು.