Advertisement

ಹೊನ್ನಾವರ: ಸರ್ಕಾರಿ ಬಸ್‌ ಪಲ್ಟಿ;2 ಸಾವು; ಹಲವರಿಗೆ ಗಾಯ 

03:29 PM Dec 24, 2017 | |

ಹೊನ್ನಾವರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 206 ರ ಯಲಗುಪ್ಪಾದಲ್ಲಿ ಭಾನುವಾರ ವಾಯವ್ಯ ಸಾರಿಗೆಗೆ ಸೇರಿದ ಸರ್ಕಾರಿ ಬಸ್ಸೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು 9 ರ ಬಾಲಕ ಮತ್ತು 20 ವರ್ಷ ಪ್ರಾಯದ ವಿದ್ಯಾರ್ಥಿನಿ  ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ 10 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 

Advertisement

ಮೃತರನ್ನು ಹುಬ್ಬಳ್ಳಿಯ ಪ್ರೀತಮ್‌ ಮತ್ತು ಮೈಸೂರು ಮೂಲದ ವಿದ್ಯಾರ್ಥಿನಿ ಸಂಗೀತ ಎಂದು ಗುರುತಿಸಲಾಗಿದೆ. 

ಬಸ್‌ ಕಾರವಾರದಿಂದ ಚಿಕ್ಕಮಗಳೂರಿಗೆ ತೆರಳುತ್ತಿತ್ತು. 10 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಅತೀ ವೇಗವೇ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ. ಹೊನ್ನಾವರ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next