Advertisement

ಬಸ್‌-ಟಿಪ್ಪರ್‌ ಡಿಕ್ಕಿ: 1 ಸಾವು 7ಮಂದಿಗೆ ಗಾಯ

12:10 PM Oct 30, 2018 | Team Udayavani |

ಹುಣಸೂರು: ಸಾರಿಗೆ ಸಂಸ್ಥೆ ಬಸ್‌ ಹಾಗೂ ಟಿಪ್ಪರ್‌ ನಡುವೆ ಮುಖಾಮುಖೀ ಡಿಕ್ಕಿ ಸಂಭವಿಸಿ ಓರ್ವ ನರ್ಸ್‌ ಸಾವನ್ನಪ್ಪಿ, 7 ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ದಾಸ್ತಿಕೊಳ ಕ್ರಾಸ್‌ನಲ್ಲಿ ಸೊಮವಾರ ಬೆಳಗ್ಗೆ ಸಂಭವಿಸಿದೆ.

Advertisement

ಪಿರಿಯಾಪಟ್ಟಣ ತಾಲೂಕಿನ ಬೋಗನಹಳ್ಳಿಯ ನಸ್ರುಲ್ಲಾ ಷರೀಫ್‌ರ ಪುತ್ರಿ, ಬೆಂಗಳೂರಿನ ಖಾಸಗಿ ಆಸ್ಪತ್ರೆ ನರ್ಸ್‌ ಸಮೀರಾಬಾನು (28) ಮೃತ ದುದೆ„ìವಿ. ಪಿರಿಯಾಪಟ್ಟಣ ತಾಲೂಕಿನ ರಾವಂದೂರಿನ ಶಿವಪ್ಪ, ಮುನಿರಾಜು, ಮೂರ್ತಿ, ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯ ಸತೀಶ್‌ ಹಾಗೂ ನಗರದ ಶ್ರೀಮತಿ, ಅಬ್ದುಲ್ಲಾ ತೀವ್ರವಾಗಿ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಪಿರಿಯಾಪಟ್ಟಣ ಡಿಪೋಗೆ ಸೇರಿದ ಬಸ್‌ ಮೈಸೂರು-ಬಂಟ್ವಾಳ ರಾಷ್ಟ್ರೀಯ ಮಾರ್ಗವಾಗಿ ಸೋಮವಾರ ಬೆಳಗ್ಗೆ 7.10 ವೇಳೆಯಲ್ಲಿ ಮೈಸೂರಿನತ್ತ ತೆರಳುತ್ತಿದ್ದ ವೇಳೆ ಬಿಳಿಕೆರೆ ಬಸ್‌ ನಿಲ್ದಾಣಕ್ಕೆ ತೆರಳಲು ಹೆದ್ದಾರಿಯ ದಾಸ್ತಿಕೊಳ ಕ್ರಾಸ್‌ನಲ್ಲಿ ಬಲಕ್ಕೆ ತಿರುವು ಪಡೆದುಕೊಳ್ಳುತ್ತಿದ್ದಾಗ ಮೈಸೂರು ಕಡೆಯಿಂದ ಬರುತ್ತಿದ್ದ ಜಲ್ಲಿ ತುಂಬಿದ್ದ ಟಿಪ್ಪರ್‌ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬಸ್‌ ರಸ್ತೆ ಬದಿಯಲ್ಲಿ ಅಳವಡಿಸಿದ್ದ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಹೊಡೆದು ಮುನ್ನುಗ್ಗಿ ರಸ್ತೆ ಬದಿಯ ಬಳಿಯ ಹಳ್ಳಕ್ಕಿಳಿದಿದೆ. ಟಿಪ್ಪರ್‌ ಕೂಡ ಹಳ್ಳಕ್ಕಿಳಿದು ಪಲ್ಟಿಯಾಗಿದೆ. ಈ ವೇಳೆ ಚಾಲಕನ ಹಿಂಬದಿಯ ಸೀಟ್‌ನಲ್ಲಿದ್ದ ಸಮೀರಾಬಾನು ಮುಂಭಾಗದಲ್ಲಿ ಅಳವಡಿಸಿದ್ದ ಕಬ್ಬಿಣದ ರಾಡ್‌ ಬಡಿದು ಎದೆ ಹಾಗೂ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತೀವ್ರಗಾಯಗೊಂಡಿದ್ದ ಪ್ರಯಾಣಿಕರನ್ನು  108 ಹಾಗೂ ಖಾಸಗಿ ವಾಹನಗಳ ಮೂಲಕ ಮೈಸೂರಿನ ಆಸ್ಪತ್ರೆಗೆ ದಾಖಸಲಾಯಿತು. ಬಿಳಿಕೆರೆಯ ಮಲ್ಲಿಗೆ ಮತ್ತು ಅವರ ಪುತ್ರ ಸುಮಂತ್‌, ಲಕ್ಷ್ಮೀ, ಸಚಿನ್‌, ಮಂಜುಳಾ, ಚಾಲಕ ಮಲ್ಲಿಕಾರ್ಜುನ, ಸುಮಂತ್‌,  ಚಾಲಕ ಮಲ್ಲಿಕಾರ್ಜುನ, ಕಂಡಕ್ಟರ್‌ ಸುಮಂತ್‌ ಗಾಯಗಳಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.  

Advertisement

ಸಮಯ ಪ್ರಜ್ಞೆ ಮೆರೆದ ಯುವಕ: ಬಸ್‌ ಹಳ್ಳಕ್ಕಿಳಿಯುತ್ತಿದ್ದಂತೆ ಚಾಲಕ ಕೆಳಕ್ಕೆ ಹಾರಿದ್ದಾನೆ. ಘಟನೆಯನ್ನು ಕಂಡ ಬಸ್‌ನಲ್ಲಿದ್ದ ಯುವಕ ರಾವಂದೂರು ರಮೇಶ್‌ ಜಾಗೃತನಾಗಿ ಚಾಲಕನ ಸೀಟ್‌ಗೆ ತೆರಳಿ ಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿ, ನಿಯಂತ್ರಣಕ್ಕೆ ತಂದು ನಿಲ್ಲಿಸಿದ್ದಾನೆ.

ಬಸ್‌ ನಿಯಂತ್ರಣಕ್ಕೆ ಬಾರದಿದ್ದರೆ ವಿದ್ಯುತ್‌ ಕಂಬಕ್ಕೆ ಗುದ್ದಿದ್ದರೆ ಹೆಚ್ಚಿನ ಅನಾಹುತವೇ ಸಂಭವಿಸುತ್ತಿತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಯುವಕನ ಸಮಯ ಪ್ರಜ್ಞೆಯಿಂದಾಗಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಿಪ್ಪರ್‌ ಚಾಲಕ ಪರಾರಿಯಾಗಿದ್ದಾನೆ.  

ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹುಣಸೂರು ಡಿಪೋ ವ್ಯವಸ್ಥಾಪಕ ವಿಪಿನ್‌ ಕೃಷ್ಣ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಸಂಭವಿಸುತ್ತಿದ್ದಂತೆ ವಿಷಯ ತಿಳಿದ ದಾರಿಹೋಕರು, ಸುತ್ತಮುತ್ತಲ ಗ್ರಾಮಸ್ಥರು ಜಮಾಯಿಸಿದ್ದರಿಂದಾಗಿ ಕೆಲ ಗಂಟೆಗಳ ಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next