Advertisement
ಬೆಳ್ತಂಗಡಿಯಲ್ಲಿ ಚಾರ್ಮಾಡಿಯಿಂದ ಪುಂಜಾಲಕಟ್ಟೆವರೆಗೆ, ಇತ್ತ ಕೊಕ್ಕಡದಿಂದ ಉಜಿರೆವರೆಗೆ, ಗುರುವಾಯನಕೆರೆಯಿಂದ ಮೂಡುಬಿದಿರೆ, ಕಾರ್ಕಳ, ಉಪ್ಪಿನಂಗಡಿ ಸಹಿತ ರಾಜ್ಯ, ರಾಷ್ಟ್ರೀಯ, ಗ್ರಾಮೀಣ ರಸ್ತೆಗಳ ಅಕ್ಕಪಕ್ಕ ಇರುವ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನಿಲುಗಡೆಗೊಳಿಸುವ ಸರಕಾರಿ ಸಹಿತ ಖಾಸಗಿ ಬಸ್‌ಗಳು ರಸ್ತೆ ಮಧ್ಯೆಯೇ ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಹತ್ತಿಸುವುದು, ಇಳಿಸುವ ಮೂಲಕ ನಿರ್ಲಕ್ಷ್ಯದ ಚಾಲನೆಗೆ ಕಾರಣರಾಗಿದ್ದಾರೆ.
Related Articles
ರಸ್ತೆ ಮಧ್ಯೆ ಬಸ್ ಅನ್ನು ಪ್ರಯಾಣಿಕರಿಗೆ ನಿಲುಗಡೆಗೊಳಿಸಿ ಇತರ ವಾಹನ ಸವಾರರಿಗೆ ತೊಂದರೆ ನೀಡುವ ಚಾಲಕರ ಪರವಾನಿಗೆ ರದ್ದುಗೊಳಿಸಬೇಕು ಇಲ್ಲವೇ ದಂಡ ವಿಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮತ್ತೂಂದೆಡೆ ಪರವಾನಿಗೆ ನೀಡುವ ಆರ್.ಟಿ.ಒ. ಚಾಲಕರಿಗೆ ಸಾರಿಗೆ ನಿಯಮಗಳನ್ನು ಸಮರ್ಪಕವಾಗಿ ಹೇಳದೆ ಪರವಾನಿಗೆ ನೀಡುವುದರಿಂದಲೂ ಈ ನಡೆಗೆ ಕಾರಣವಾಗಿದೆ ಎಂದು ದೂರಲಾಗುತ್ತಿದೆ.
Advertisement
ಉಜಿರೆಯಲ್ಲಿ ರಸ್ತೆಯಲ್ಲೇ ಪಾರ್ಕಿಂಗ್ ಉಜಿರೆ ದ್ವಾರದಿಂದ ಕಾಲೇಜು ರಸ್ತೆಗೆ ಸಾಗುವ ವಿರುದ್ಧ ದಿಕ್ಕಿನಲ್ಲಿ ಹಾಗೂ ಉಜಿರೆಯಿಂದ ಅನುಗ್ರಹ ಶಾಲೆ ವಠಾರದವರೆಗೆ ರಸ್ತೆಯಲ್ಲೇ ಪಾರ್ಕಿಂಗ್ ಮಾಡುತ್ತಿರುವುದರಿಂದ ಏಕಮುಖ ಸಂಚಾರದ ರಸ್ತೆಯಂತಾಗಿದೆ. ವಾಹನಗಳನ್ನು ರಸ್ತೆಯಲ್ಲೇ ಪಾರ್ಕಿಂಗ್ ಮಾಡಿ ಹೋಗುತ್ತಿರುವುದು ಕಂಡುಬಂದಿದೆ. ಆದರೆ ಸಂಚಾರ ಪೊಲೀಸರು ಕೇವಲ ಹೆಲ್ಮೆಟ್, ಸೀಟು ಬೆಲ್ಟ್ ಹಾಕದವರಿಗಷ್ಟೆ ದಂಡ ವಿಧಿಸಿದೆ. ಮಾರ್ಗ ಮಧ್ಯ ವಾಹನ ನಿಲ್ಲಿಸಿ ದುರ್ವರ್ತನೆ ತೋರುವ ಚಾಲಕ ಹಾಗೂ ನಿರ್ವಾಹಕರ ಮೇಲೂ ದಂಡ ವಿಧಿಸಿ ಸೂಕ್ತ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.