Advertisement

ಇಂದಿನಿಂದ ಬಸ್‌ ಸಂಚಾರ ಆರಂಭ

04:57 PM Jun 21, 2021 | Team Udayavani |

ಬಾಗಲಕೋಟೆ: ಇಂದಿನಿಂದ ಧಾರವಾಡ, ಹುಬ್ಬಳ್ಳಿ ಹಾಗೂ ಜಿಲ್ಲೆಯ ಆರು ತಾಲೂಕು ಸೇರಿದಂತೆ ಒಟ್ಟು 125 ಮಾರ್ಗಗಳಲ್ಲಿ ಬಸ್‌ ಸಂಚಾರ ಆರಂಭವಾಗಲಿದೆ.

Advertisement

ಕೋವಿಡ್‌ -19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಏ. 28ರಿಂದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆದೇಶದಂತೆ ಕಳೆದ 45 ದಿನಗಳಿಂದ ಬಂದಾಗಿದ್ದ ಬಸ್‌ ಸಂಚಾರ ಆರಂಭಗೊಳ್ಳಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಿಂದ ಲಾಕ್‌ಡೌನ್‌ಕ್ಕಿಂತ ಮುಂಚೆ 630 ಮಾರ್ಗ ಗಳಲ್ಲಿ ಬಸ್‌ ಸಂಚಾರವಿತ್ತು. ಇಂದಿನಿಂದ 125 ಮಾರ್ಗಗಳಲ್ಲಿ ಆರಂಭ ಮಾಡಿ ಜನರು ಪ್ರತಿಕ್ರಿಯೆ ನೋಡಿಕೊಂಡು ಎರಡು ಮೂರು ದಿನಗಳಲ್ಲಿ ಬಸ್‌ ಸಂಚಾರ ಹೆಚ್ಚಿಸಲಾಗುವುದು.

ಸರ್ಕಾರದ ಕೋವಿಡ್‌ ಮಾರ್ಗಸೂಚಿಯಂತೆ ಕೇವಲ 28 ಜನರು ಮಾತ್ರ ಬಸ್‌ನಲ್ಲಿ ಸಂಚಾರ ಅವಕಾಶವಿದ್ದು, ಇಬ್ಬರು ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದಲ್ಲಿ ಪ್ರಯಾಣಿಕ ಮತ್ತು ಮೂರು ಜನ ಕುಳಿತುಕೊಳ್ಳುವ ಸೀಟಿನಲ್ಲಿ ಇಬ್ಬರು ಪ್ರಯಾಣಿಕರು ಕುಳಿತುಕೊಂಡು ಪ್ರಯಾಣಿಸಬಹುದಾಗಿದೆ.

ಹುನಗುಂದ: ಕೊರೊನಾ ಎರಡನೆಯ ಅಲೆ ಇಳಿಮುಖಗೊಂಡ ಹಿನ್ನೆಲೆಯಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಸೋಮವಾರ ಆರಂಭಗೊಳ್ಳಲಿದೆ. ಇದರಿಂದ ತಾಲೂಕಿನಲ್ಲಿ ಕಳೆದ ಎರಡು ತಿಂಗಳು ಸ್ಥಗಿತಗೊಂಡಿದ್ದ ವ್ಯಾಪಾರ ವಹಿವಾಟು ಮತ್ತು ಜನಜೀವನ ಎಂದಿನಂತೆ ಸಹಜಗೊಳ್ಳುವ ನಿರೀಕ್ಷೆಗೊಳ್ಳಲಿವೆ.

ಕಳೆದ ವಾರ ಕೋವಿಡ್‌ ಪ್ರಕರಣಗಳು ಕಡಿಮೆ ಯಾಗುತ್ತಿರುವುದನ್ನು ಮನಗಂಡ ಸರ್ಕಾರ ಕೆಲವೊಂದು ನಿರ್ಬಂಧಗಳಿಗೆ ಅನುಸಾರವಾಗಿ ಅನ್‌ ಲಾಕ್‌ ಹಂತದಲ್ಲಿ ವ್ಯಾಪಾರ ವಹಿವಾಟುಗಳಿಗೆ ತಾಲೂಕಿನಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ನೀಡಿತ್ತು.

Advertisement

ಸದ್ಯ ದಿನಸಿ ,ತರಕಾರಿ, ಹಣ್ಣು, ಹಾಲು, ಔಷಧಿ , ಜವಳಿ, ಬಂಗಾರದ ಅಂಗಡಿ, ಬಾಂಡೆ ಅಂಗಡಿ, ಮಾಂಸದ ಅಂಗಡಿ, ಕೈಗಾರಿಕೆ ಸೇರಿದಂತೆ ಎಲ್ಲ ವಲಯಗಳ ವ್ಯಾಪಾರ ವಾಣಿಜ್ಯ ವಹಿವಾಟುಗಳಿಗೆ ಸಂಜೆ 5 ಗಂಟೆಯವರೆಗೆ ಕೊರೊನಾ ನಿಯಮಗಳ ಅನುಸಾರವಾಗಿ ಅವಕಾಶ ನೀಡಲಾಗಿದೆ.

ಹೊಟೇಲ್‌ನಲ್ಲಿ ಶೇ 50ರಷ್ಟು ಜನರು ಕುಳಿತು ತಿನ್ನಲು ಅವಕಾಶ ನೀಡಲಾಗಿದೆ. ಹೊಟೇಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಎಸಿ ಇಲ್ಲದೇ ತೆರೆಯಲು ಅವಕಾಶ ನೀಡಿದೆ. ಕಳೆದ ಎರಡು ತಿಂಗಳಿಂದ ಸ್ತಬ್ಧವಾಗಿದ್ದ ಸಾರಿಗೆ ಸಂಚಾರ ಸೋಮವಾರದಿಂದ ರಸ್ತೆಗಿಳಿಯಲು ಕೆಎಸ್‌ಆರ್‌ ಟಿಸಿ ಬಸ್‌ಗಳು ಸಕಲ ಸಿದ್ಧಗೊಂಡಿವೆ. ಕೆಎಸ್‌ಆರ್‌ಟಿಸಿ ಸಿಬ್ಬಂದಿ ಬಸ್‌ ಸ್ವತ್ಛಗೊಳಿಸಿ ಸ್ಯಾನಿಟೈಸರ್‌ ಕೈಗೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next