Advertisement

ಸಮಯಕ್ಕೆ ಸರಿಯಾಗಿ ಬಾರದ ಬಸ್ : ರಸ್ತೆ ಬದಿಯಲ್ಲೇ ನಿಂತು ಬಸ್ ಕಾಯೋ ವಿದ್ಯಾರ್ಥಿಗಳು.!

02:36 PM Mar 03, 2022 | Team Udayavani |

ಕುರುಗೋಡು : ಸರಿಯಾದ ಸಮಯಕ್ಕೆ ಬಸ್ ಇಲ್ಲ. ನಿತ್ಯ ಎರಡು ತರಗತಿಗಳು ಮಿಸ್, ಪೋಷಕರಿಂದ ಕಿರಿ ಕಿರಿ. ಬಸ್ ನಿಲ್ದಾಣ ದಲ್ಲಿ ಎರಡು ಮೂರು ಗಂಟೆ ಕಾಲ ಬಸ್ ಕಾಯುವುದಕ್ಕೆ ಗ್ರಾಮಸ್ಥರಿಗೆ ಬೇಸಾರ ಇದು ವಿದ್ಯಾರ್ಥಿಗಳ ನಿತ್ಯ ಗೋಳು..

Advertisement

ಹೌದು ಕುರುಗೋಡು ಸಮೀಪದ ಮಣ್ಣೂರು -ಸೂಗೂರು ಗ್ರಾಮದ ವಿದ್ಯಾರ್ಥಿಗಳ ಗೋಳು.

ಸರಕಾರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನಾನಾ ಸೌಲಭ್ಯ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳುತ್ತಿದೆ. ವರ್ಷಕ್ಕೆ ಇಷ್ಟು ಅನುದಾನ ಅಂತ ಕೂಡ ಮಿಸಾಲಿಡಲಾಗುತ್ತಿದೆ ಆದ್ರೂ ಇಲ್ಲಿನ ವಿದ್ಯಾರ್ಥಿಗಳು ಮಾತ್ರ ಬೇರೆ ಕಡೆ ತೆರಳಿ ಶಿಕ್ಷಣ ಪಡೆಯಲು ನಿತ್ಯ ನರಕಯಾತಾನೆ ಅನುಭವಿಸುತ್ತಿದ್ದೂ, ಕೇವಲ ಹೆಸರಿಗೆ ಮಾತ್ರ ಶಿಕ್ಷಣದ ಬಗ್ಗೆ ಸರಕಾರ ಗಮನಹರಿಸುತ್ತಿದೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಮಾತಲ್ಲಿ ಕೇಳಿ ಬರುತ್ತಿದೆ.

ಮಣ್ಣೂರು -ಸೂಗೂರು ಗ್ರಾಮದಿಂದ ಕಂಪ್ಲಿ ಮತ್ತು ಗಂಗಾವತಿ ಗೆ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಸುಮಾರು 40 ರಿಂದ 50 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯಲು ಹೋಗುತ್ತಿದ್ದಾರೆ.

ಆದರೆ ಸಿರುಗುಪ್ಪ ಮಾರ್ಗದಿಂದ ಮಣ್ಣೂರು ಸೂಗೂರು ಗ್ರಾಮಕ್ಕೆ ಹಾದು ಕಂಪ್ಲಿ ಗೆ ಹೋಗುವ ಬಸ್ ನಿತ್ಯ 9 ಗಂಟೆ ಗೆ ಬರುತ್ತಿದ್ದು, ಇತ್ತೀಚಿಗೆ ಅಂದ್ರೆ ಸುಮಾರು 2 ತಿಂಗಳಿಂದ ಸರಿಯಾದ ಸಮಯಕ್ಕೆ ಬಾರದೆ 10. ಗಂಟೆಗೆ, 10.30 ಗಂಟೆಗೆ, 11 ಗಂಟೆಗೆ ಸಮಯ ತಪ್ಪಿ ಬರುತ್ತಿದೆ. ಒಂದು ಒಂದು ಸಲ 8.30 ಕ್ಕೆ ಅರ್ಧ ಗಂಟೆ ಮುಂಚಿತವಾಗಿ ಬಂದು ಹೋಗಿ ಬಿಡುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದ್ರೆ ಆಗುತ್ತಿದೆ. ಅಲ್ಲದೆ ಬೆಳಿಗ್ಗೆ ಯ ಎರಡು ತರಗತಿಗಳು ಕೂಡ ಮಿಸ್ ಆಗುತ್ತಿವೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊಕ್ಕೆ ಬೀಳುತ್ತಿದೆ.

Advertisement

ಇದನ್ನೂ ಓದಿ : ನಂಬಲಸಾಧ್ಯ!; ಭಾರತದ ಕೋವಿಡ್ ಸಾವುಗಳ ಕುರಿತು ಚಿದಂಬರಂ ಶಂಕೆ

9 ಗಂಟೆಗೆ ಬಸ್ ಬಂದ್ರೆ ವಿದ್ಯಾರ್ಥಿಗಳಿಗೆ ಅನುಕೂಲಕರ ವಾಗುತ್ತಿದ್ದು, ತರಗತಿಗಳಿಗೆ ಕೂಡ ಸರಿಯಾದ ಸಮಯಕ್ಕೆ ಹಾಜರಾಗಬಹುದಾಗಿದೆ. ವಿದ್ಯಾರ್ಥಿಗಳು ಗಂಟೆ ಗಂಟಲೆ ರಸ್ತೆ ಬದಿಯಲ್ಲಿ ಬಸ್ ಕಾಯುವುದರಿಂದ, ಪೋಷಕರು ಮಕ್ಕಳು ಏನು ಶಿಕ್ಷಣ ಕಲಿಯುತ್ತಾರೆ ಎಂದು ಕಾಳಜಿ ಕಡಿಮೆ ಆಗಿ ಶಿಕ್ಷಣ ದಿಂದ ವಂಚಿತರನ್ನಾಗಿ ಮಾಡಲು ಮುಂದಾಗಿ ಕೃಷಿ ಕೆಲಸಕ್ಕೆ ಕಳಿಸುವ ನಿರ್ಧಾರದಲ್ಲಿ ಮುಳಿಗಿದ್ದಾರೆ. ಅದರಲ್ಲಿ ಗ್ರಾಮೀಣ ಮಟ್ಟದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಆಶಕ್ತಿ ಇದ್ರೂ ಸೌಲಭ್ಯ ಗಳು ಇಲ್ಲದೆ ಇರುವುದರಿಂದ ಶಿಕ್ಷಣ ದಿಂದ ದೂರ ಉಳಿಯುವುದು ಸಾಮಾನ್ಯವಾಗಿದ್ದು, ಇದರಿಂದ ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಕ್ಕಳು ಈಗಾಗಲೇ ಶಿಕ್ಷಣದಿಂದ ವಂಚಿತರಗಿದ್ದಾರೆ.

ಇನ್ನೂ ಮಣ್ಣೂರು ಸೂಗೂರು ಗ್ರಾಮದಿಂದ ಕಂಪ್ಲಿ ದಾಟಿ ಗಂಗಾವತಿ ಗೆ ವಿದ್ಯಾಭ್ಯಾಸ ಪಡೆಯಲು ಹೋಗುವ ವಿದ್ಯಾರ್ಥಿಗಳ ಗೋಳು ಕೇಳತೀರಾಗಿದೆ.

ಇದಲ್ಲದೆ ಬೆಳಿಗ್ಗೆ 9 ಗಂಟೆ ಬಸ್ ಸಮಸ್ಯೆ ಒಂದು ಕಡೆಯಾದರೆ ಇನ್ನೂ ಕಾಲೇಜ್ 1 ಗಂಟೆಗೆ ಬಿಟ್ರೆ ವಿದ್ಯಾರ್ಥಿಗಳು ಕಾಲೇಜ್ ಮುಗಿಸಿಕೊಂಡು ಮನೆಗೆ ಮರಳಿ ಬರಲು ಮದ್ಯಾಹ್ನ 3 ಗಂಟೆ ತನಕ ಬಸ್ ಕಾಯಬೇಕಿದೆ.

ಶಾಲೆ, ಕಾಲೇಜ್ ಗಳಲ್ಲಿ ಸಪ್ಲಿಮೆಂಟ್ರಿ ಪರೀಕ್ಷೆಗಳು, ಇಂಟ್ರನಾಲ್, ಫೈನಲ್ ಪರೀಕ್ಷೆಗಳು ಬಂದಂತಹ ಸಂದರ್ಭದಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಬಾರದೆ ಹಿನ್ನಲೆ ಕೆಲ ಮಕ್ಕಳು ಬೈಕ್ ತಗೊಂಡು ಹೋದ್ರೆ ಇನ್ನೂ ಹಲವು ಮಕ್ಕಳು ಆಟೋ ಬಾಡಿಗೆ ಮಾಡಿಕೊಂಡು ಪರೀಕ್ಷೆ ಬರೆಯಲು ಹೋಗುವಂತ ಅನಿವಾರ್ಯ ಕೂಡ ಎದುರಾಗಿದೆ.

ಕೆ. ಎಸ್. ಆರ್. ಟಿ. ಸಿ ಕಚೇರಿಯಲ್ಲಿ ವಿದ್ಯಾರ್ಥಿಗಳು ವಾರ್ಷಿಕ ಬಸ್ ಪಾಸ್ ಮಾಡಿಸಿದ್ರು ಅದೂ ಉಪಯೋಗ ಆಗದಂತಾಗಿದೆ ಇದರಿಂದ ವಿದ್ಯಾರ್ಥಿಗಳು ತುಂಬಾ ನೋವ್ವು ಅನುಭವಿಸಬೇಕಾಗಿದೆ.

ಇದನ್ನೂ ಓದಿ : ನಂಬಲಸಾಧ್ಯ!; ಭಾರತದ ಕೋವಿಡ್ ಸಾವುಗಳ ಕುರಿತು ಚಿದಂಬರಂ ಶಂಕೆ

ಪ್ರತಿಭಟನೆಗೆ ಮಣಿಯದ ಅಧಿಕಾರಿಗಳು :

ಈಗಾಗಲೇ ಮಣ್ಣೂರು -ಸೂಗೂರು ಗ್ರಾಮದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬಸ್ ಕಲ್ಪಿಸುವಂತೆ ಮಣ್ಣೂರು ಗ್ರಾಮದಲ್ಲಿ ಹಾಗೂ ಸಿರುಗುಪ್ಪ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದರು ಪ್ರಯೋಜನೆ ಇಲ್ಲದಂತಾಗಿದೆ. ಇವರ ಒಂದು ಬೇಜವಾಬ್ದಾರಿ ತನಕ್ಕೆ ವಿದ್ಯಾರ್ಥಿಗಳು ಬೇಸತ್ತು ಬಸ್ ಗಳ ಮೇಲೆ ಕಲ್ಲು ತೂರಾಟ ಆಗಿ ಠಾಣೆ ಮೆಟ್ಟಲು ಕೂಡ ಹೋಗಿತ್ತು ಜನಪ್ರತಿನಿದಿನಗಳು ಕೂಡ ಸ್ಥಳಕ್ಕೆ ಧಾವಿಸಿ ಬಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆಗೀನ ಪೂರ್ತಿಗೆ ಎರಡು ಮೂರು ದಿನ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಮಾಡಿ ನಂತರ ಅದೇ ಗೊಳಾಗಿದೆ ಎಂದು ವಿದ್ಯಾರ್ಥಿ ಗಳು ಅಳಲು ತೊಂಡಿಕೊಂಡಿದ್ದಾರೆ.

ಮನವಿಗೆ ಸ್ಪಂದನೆ ಇಲ್ಲ :

ವಿದ್ಯಾರ್ಥಿಗಳಿಗೆ ಬಸ್ ನೀಡಿ ಶಿಕ್ಷಣ ಕಲಿಯುವುದಕ್ಕೆ ಅನುಕೂಲ ಮಾಡಿಕೊಡುವಂತೆ ಗ್ರಾಮದ ಮುಖಂಡರು, ಶಿಕ್ಷಣ ಪ್ರೇಮಿಗಳು, ವಿವಿಧ ಪ್ರಗತಿ ಪರ ಸಂಘಟನೆಗಳು ಬಸ್ ಘಟಕದ ವ್ಯವಸ್ಥಾಪಕರಿಗೆ, ತಹಸೀಲ್ದಾರ್ ರಿಗೆ, ಸ್ಥಳೀಯ ಠಾಣೆ ಅಧಿಕಾರಿಗಳಿಗೆ, ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಮನವಿ ನೀಡಿದರು ಪ್ರಯೋಜನೆ ಆಗಿಲ್ಲ.

ದೂರವಾಣಿ ಕರೆಗೆ ಕ್ಯಾರೇ ಎನ್ನದ ಅಧಿಕಾರಿಗಳು :

ವಿದ್ಯಾರ್ಥಿಗಳು ನಿತ್ಯ ಶಾಲೆ-ಕಾಲೇಜ್ ಗೆ ಹೋಗಲು ಬಸ್ ಕಾಯುವ ವೇಳೆ ಬಸ್ ಬಾರದೆ ಇರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಸ್ ಘಟಕದ ವ್ಯವಸ್ಥಾಪಕರಿಗೆ ಫೋನ್ ಕರೆ ಮಾಡಿ ಬಸ್ ಬಂದಿದೆನಾ ಇಲ್ವಾ ಎಂದು ವಿಚಾರಿಸಿದರೆ ಫೋನ್ ಪಿಕ್ ಮಾಡದೆ ಯಾವಾಗೋ ಅಪರೂಪಕ್ಕೆ ಫೋನ್ ಎತ್ತಿದ್ರೆ ಸರಿಯಾಗಿ ಸ್ಪಂದನೆ ಮಾಡದೆ ಹಾಗೆ ಕಟ್ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಒತ್ತಾಯ

ಹಲವು ಬಾರಿ ಪ್ರತಿಭಟನೆ ಗಳು, ಮನವಿಗಳು ಸಲ್ಲಿಸಿದರು ಸರಿಯಾದ ಸಮಯಕ್ಕೆ ಬಸ್ ಗಳು ಬರುತ್ತಿಲ್ಲ ಇದರಿಂದ ನಿತ್ಯ ಸಮಯ ಸರಿಯಾಗಿ ಶಾಲೆ – ಕಾಲೇಜ್ ಗಳಿಗೆ ಹೋಗುವುದು ಆಗುತ್ತಿಲ್ಲ ಆದ್ದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಈಗಲಾದರೂ ಇತ್ತಕಡೆ ಗಮನಹರಿಸಿ ಬಸ್ ವ್ಯವಸ್ಥೆ ಕಲ್ಪಿಸಲು ಮುಂದಾಗಿ ಎಂದು ಒತ್ತಾಯಿಸಿದರು.

ಸುಮಾರು ತಿಂಗಳಗಳಿಂದ ಬೆಳಿಗ್ಗೆ ಬರಬೇಕಾದ 9 ಗಂಟೆ ಬಸ್ ಸರಿಯಾದ ಸಮಯಕ್ಕೆ ಬರುತ್ತಿಲ್ಲ ನಿತ್ಯ ಸಮಯ ತಪ್ಪಿ ಬರುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆ ಯಾಗುತ್ತಿದೆ. ಅಲ್ಲದೆ ಪೋಷಕರು ಕೂಡ ಇತರ ಸಮಸ್ಯೆ ನೋಡಿ ಶಾಲೆ, ಕಾಲೇಜ್ ಬಿಡಿಸುವ ಅಂತದಲ್ಲಿದ್ದಾರೆ. ಶಿಕ್ಷಣಕ್ಕೆ ಕೊಕ್ಕೆ ಬಿಳುತಿದ್ದು, ಇದರ ಬಗ್ಗೆ ಸಾಕಷ್ಟು ಬಾರಿ ಜನಪ್ರತಿನಿದಿಗಳಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿದರು, ಲಿಖಿತ ಬರವಣಿಗೆ ಯಲ್ಲಿ ನೀಡಿದರು ಪ್ರಯೋಜನೆ ಆಗಿಲ್ಲ.

– ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಗಳು

– ಸುಧಾಕರ್ ಮಣ್ಣೂರು

Advertisement

Udayavani is now on Telegram. Click here to join our channel and stay updated with the latest news.

Next