ಮಂಗಳೂರು: ಹಂಪ್‌ನಲ್ಲಿ ಬಸ್ ಮೇಲಕ್ಕೆ ಹಾರಿಬಿದ್ದ ಪರಿಣಾಮ ಬಸ್ ಪ್ರಯಾಣಿಕ ಪ್ರದೀಶ್ (50) ಗಂಭೀರವಾಗಿ ಗಾಯಗೊಂಡ ಘಟನೆ ವಾಮಂಜೂರು ಸಮೀಪ ಸಂಭವಿಸಿದೆ.
Advertisement
ಅವರು ಶನಿವಾರ ಬಿ.ಸಿ.ರೋಡ್ ಕಡೆಗೆ ಹೋಗಲು ಮೂಡುಶೆಡ್ಡೆಯಿಂದ ಮಂಗಳೂರು ಕಡೆಗೆ ಹೋಗುವ ಬಸ್‌ನ ಕೊನೆಯ ಸೀಟಿನಲ್ಲಿ ಕುಳಿತಿದ್ದರು.
ಬಸ್ ಬೆಳಗ್ಗೆ 9.15ಕ್ಕೆ ವಾಮಂಜೂರಿನ ಆರ್‌ಟಿಒ ಸ್ಟಾಪ್ ಬಳಿ ಬಂದಾಗ ಚಾಲಕ ಹಂಪ್ ಮೇಲೆ ಹಾರಿಸಿಕೊಂಡು ಹೋದ ಪರಿಣಾಮ ಪ್ರದೀಶ್ ಅವರು ಬಸ್ಸಿನೊಳಗೆ ಬಿದ್ದು ಅವರಿಗೆ ಕಬ್ಬಿಣದ ರಾಡ್ ತಾಗಿದೆ. ಮಂಗಳೂರು ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.