ಚಿಂಚೋಳಿ: ತಾಲೂಕಿನ ದೋಟಿಕೊಳ, ತಾಜಲಾಪುರ ಗ್ರಾಮಗಳ ವಿದ್ಯಾರ್ಥಿ ಗಳಿಗೆ, ಗ್ರಾಮಸ್ಥರಿಗೆ ಬಸ್ ಅನುಕೂಲ ಮಾಡುವಂತೆ ನಡೆಸಿದ ಹೋರಾಟಕ್ಕೆ ಜಯ ತಂದಿದೆ ಎಂದು ಜೆಡಿಎಸ್ ಮುಖಂಡ ಸಂಜೀವನ್ ಯಾಕಾಪುರ ಹೇಳಿದರು.
ತಾಲೂಕಿನ ದೋಟಿಕೊಳ ಗ್ರಾಮಕ್ಕೆ ಆಗಮಿಸಿದ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೋಟಿಕೊಳ, ತಾಜಲಾಪುರ ಗ್ರಾಮಗಳ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ಬಾಣಂತಿಯರಿಗೆ, ಅಂಗವಿಕಲರಿಗೆ ಸರಿಯಾಗಿ ಬಸ್ ಸಂಚಾರ ಇಲ್ಲದ ಕಾರಣ ತೊಂದರೆ ಆಗುತ್ತಿತ್ತು. ಈ ಕುರಿತು ಚಿಂಚೋಳಿ ಘಟಕದ ಎದುರು ಪ್ರತಿಭಟನೆ ನಡೆಸಲಾಗಿತ್ತು. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧಿಕಾರಿಗಳು ಬೇಡಿಕೆಗೆ ಸ್ಪಂದಿಸಿದ್ದಕ್ಕೆ ಗ್ರಾಮಸ್ಥರಲ್ಲಿ ಹರ್ಷ ಉಂಟಾಗಿದೆ ಎಂದರು.
ಗ್ರಾಮಸ್ಥರು ಬಸ್ ಚಾಲಕರು, ನಿರ್ವಾಹಕರನ್ನು ಸನ್ಮಾನಿಸಿದರು. ತಾಲೂಕು ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ನಿಯಾಜ ಅಲಿ,ನಾಗರೆಡ್ಡಿ ದೊರನಳ್ಳಿ, ಹಣಮಂತರೆಡ್ಡಿ, ಶೇಖರ ರೆಡ್ಡಿ, ಅಣ್ಣಾರಾವ್ ವಾಡೇದ, ನಾಗರೆಡ್ಡಿ ಬಕ್ಕಾ, ಮಹೇಶ ಪಾಟೀಲ, ಅನಿಲಕುಮಾರ, ತಯಾಬ ಅಲಿ, ಶಾಮಸುಂದರ ಇನ್ನಿತರರಿದ್ದರು.