ಸಿರುಗುಪ್ಪ: ಕರೂರು ಗ್ರಾಮದ ದೊಡ್ಡ ಹಳ್ಳದ ಹತ್ತಿರ ಇರುವ ಬೈಪಾಸ್ ರಸ್ತೆಯಲ್ಲಿ ಬಳ್ಳಾರಿಯಿಂದ ಬೂದುಗುಪ್ಪಕ್ಕೆ ರಾತ್ರಿ ತೆರಳುತ್ತಿದ್ದ ಬಸ್ ಆಯ ತಪ್ಪಿ ಕೆಸರಿನಲ್ಲಿ ಸಿಲುಕಿಕೊಂಡಿದ್ದು ಪ್ರಯಾಣಿಕರು ಪರದಾಡುವಂತಾದ ಘಟನೆ ಗುರುವಾರ ರಾತ್ರಿ ನಡೆದಿದೆ.
ಗ್ರಾಮದ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಕಾಂಕ್ರಿಟ್ ರಸ್ತೆ ನಿರ್ಮಿಸುತ್ತಿದ್ದು, ರಸ್ತೆಯನ್ನು ಅಗೆದಿದ್ದರಿಂದ ವಾಹನ ಸಂಚರಿಸಲು ತಾತ್ಕಾಲಿಕವಾಗಿ ಹಳ್ಳದ ಹತ್ತಿರ ಇರುವ ರಸ್ತೆಯಲ್ಲಿ ಸಂಚರಿಸುವಾಗಿ ಈ ಘಟನೆ ನಡೆದಿದ್ದು, ಪ್ರಯಾಣಿಕರಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ.
ಮಳೆಗಾಲ ಪ್ರಾರಂಭವಾಗಿದ್ದರಿಂದ ಸರಕು ತುಂಬಿದ ಲಾರಿಗಳು, ಬಸ್, ಟ್ರ್ಯಾಕ್ಟರ್‌ಗಳು ಮುಂತಾದ ವಾಹನಗಳು ಸಂಚರಿಸುವುದರಿಂದ ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿಯನ್ನು ಅತಿ ಶೀಘ್ರವಾಗಿ ಮುಗಿಸಿದರೆ ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದ್ದು, ಈ ರೀತಿಯ ಅನಾಹುತಗಳನ್ನು ತಪ್ಪಿಸಬಹುದಾಗಿದೆ.