Advertisement

ಅಪಘಾತ ಪ್ರಕರಣ: ಬಸ್‌ ಚಾಲಕನಿಗೆ ಜೈಲು ಶಿಕ್ಷೆ

01:46 AM Jun 09, 2022 | Team Udayavani |

ಸುಳ್ಯ: ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮಹಿಳೆಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿಯಾಗಿ ಸವಾರೆ ಗಾಯಗೊಂಡಿದ್ದ ಪ್ರಕರಣದ ಆರೋಪಿ ಬಸ್‌ ಚಾಲಕನಿಗೆ ಸುಳ್ಯ ನ್ಯಾಯಾಲಯದಿಂದ ಜೈಲು ಶಿಕ್ಷೆ ಪ್ರಕಟಗೊಂಡಿದೆ.

Advertisement

ಬೈತಡ್ಕ ಸಮೀಪ 2008ರ ಜೂ. 10ರಂದು ಜಾಲೂÕರುವಿನಿಂದ ಸುಳ್ಯದತ್ತ ಡಿಯೋ ಸ್ಕೂಟಿ ವಾಹನದಲ್ಲಿ ಬರುತ್ತಿದ್ದ ಜಾಲೂÕರಿನ ಮಹಿಳೆಗೆ ಬಸ್‌ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದರು. ಘಟನೆಯ ಕುರಿತು ಸುಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿ ಬಸ್‌ ಚಾಲಕ ವಿ.ಕೆ. ಮಹಮ್ಮದ್‌ ವಿರುದ್ಧ ಅಂದಿನ ಸಹಾಯಕ ಎಸ್‌ಐ ಭಾಸ್ಕರ ಪ್ರಸಾದ್‌ ದೂರು ದಾಖಲಿಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ತಿರುವು ರಸ್ತೆಯಲ್ಲಿ ಬಸ್ಸನ್ನು ಅಜಾಗರೂಕತೆಯಿಂದ ಚಲಾಯಿಸಿದರಿಂದ ಅಪಘಾತ ಸಂಭವಿಸಿದೆ ಎಂದು ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಸೋಮಶೇಖರ್‌ ಅವರು ಹೇಳಿ ಶಿಕ್ಷೆ ಪ್ರಕಟಿಸಿದ್ದಾರೆ. ಆರೋಪಿಗೆ ಕಲಂ 279ರ ಅಪರಾಧಕ್ಕೆ 6 ತಿಂಗಳು ಜೈಲು ವಾಸ ಮತ್ತು 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳು ಜೈಲು ಶಿಕ್ಷೆ, ಕಲಂ 337ರ ಅಪರಾಧಕ್ಕೆ 6 ತಿಂಗಳು ಜೈಲು ಮತ್ತು 500 ರೂಪಾಯಿ ದಂಡ ಕಲಂ 338 ಅಪರಾಧಕ್ಕೆ 1 ವರ್ಷ ಜೈಲು ಮತ್ತು 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳು ಹೆಚ್ಚುವರಿ ಜೈಲು ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್‌ ವಾದಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next