ಬೀದರ್: ಕರ್ತವ್ಯದಲ್ಲಿ ನಿರತರಾಗಿದ್ದ ವೇಳೆ ಹೃದಯಾಘಾತದಿಂದ ಔರಾದ ಘಟಕದ ಬಸ್ ಚಾಲಕರೊಬ್ಬರು ಮಹಾರಾಷ್ಟ್ರದ ದೇಗಲೂರಿನಲ್ಲಿ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಔರಾದ ಬಸ್ ಘಟಕದ ಚಾಲಕ ಮಕ್ಬುಲ್ (42) ಮೃತಪಟ್ಟಿರುವ ಚಾಲಕ. ಔರಾದನಿಂದ ದೇಗಲೂರಿಗೆ ತೆರಳಿದ ಬಳಿಕ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅಲ್ಲಿದ್ದ ಸಾರಿಗೆ ಸಿಬ್ಬಂದಿಗಳು ಚಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಸಾವನ್ನಪ್ಪಿದ್ದಾರೆ.
ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ಸಿಬ್ಬಂದಿಗಳು ಮುಷ್ಕರ ನಡೆಸುತ್ತಿರುವ ಹಿನ್ನಲೆಯಲ್ಲಿ ಚಾಲಕ ಮಕ್ಬುಲ್ ಸಹ ಕರ್ತವ್ಯಕ್ಕೆ ಹಾಜರಾಗಲು ನಿರಾಕರಿಸಿದ್ದಾರೆ. ಆದರೆ, ಅಧಿಕಾರಿಗಳ ಒತ್ತಡ ಕಾರಣಕ್ಕೆ ಹೆದರಿ ಬಸ್ ಕಾರ್ಯಾಚರಣೆ ಮಾಡಿದ್ದು, ಅಧಿಕಾರಿಗಳ ಮಾನಸಿಕ ಕಿರುಕುಳದಿಂದಾಗಿಯೇ ಈ ಅನಾಹುತ ಸಂಭವಿಸಿದೆ ಎಂದು ಸಾರಿಗೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದಲಿತರು, ಹಿಂದುಳಿದ ವರ್ಗದವರು ಗೋಮಾಂಸ ಸೇವಿಸುವುದಿಲ್ಲ: ಸಿದ್ದು ಹೇಳಿಕೆಗೆ ಸುಧಾಕರ್ ಆಕ್ರೋಶ
ಇದನ್ನೂ ಓದಿ: ಮುಂದುವರಿದ ಪ್ರತಿಭಟನೆ: ಕೃಷಿ ಕಾಯ್ದೆಯಿಂದ ರೈತರಿಗೆ ಹೊಸ ಮಾರುಕಟ್ಟೆ, ತಂತ್ರಜ್ಞಾನ ಲಭ್ಯ