Advertisement
ಹೆದ್ದಾರಿಯಲ್ಲಿ ಖಾಸಗಿ ಎಕ್ಸ್‌ಪ್ರೆಸ್ ಬಸ್ಸು ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಬೈಕ್‌ಗೆ ಡಿಕ್ಕಿ ಹೊಡೆಪಿತು. ಢಿಕ್ಕಿಯ ಪರಿಣಾಮ ಬಸ್ಸಿನ ಮುಂಭಾಗದ ಚಕ್ರಕ್ಕೆ ಬೈಕ್ ಸಿಲುಕಿ ಹಿಂದೆ ಕುಳಿತಿದ್ದ ಶಿಯಾಲ್ ಸ್ಥಳದಲ್ಲಿಯೇ ಸಾವನ್ನಪ್ಪಿದರು.
ಮಂಗಳೂರು ಉತ್ತರ ವಲಯ ಸಂಚಾರಿ ಠಾಣೆಯಲ್ಲಿ ಬಸ್ಸು ಚಾಲಕನ ವಿರುದ್ಧ ಅಕ್ಮರ್ ಆಲಿ ಅವರು ನೀಡಿದ ದೂರಿನಂತೆ ಅಪಘಾತದ ಪ್ರಕರಣ ದಾಖಲಾಗಿದೆ. ಈ ಸಂಧರ್ಭದಲ್ಲಿ ಶಾಸಕರಾದ ಕೆ. ಅಭಯಚಂದ್ರ ಜೈನ್, ಮೊದಿನ್ ಬಾವಾ ಐವನ್ ಡಿ’ಸೋಜಾ, ಕಾಂಗ್ರೆಸ್‌ನ ಪ್ರಮುಖರಾದ ಧನಂಜಯ ಮಟ್ಟು, ವಸಂತ್ ಬೆರ್ನಾಡ್, ಸಾಹುಲ್ ಹಮೀದ್ ಕದಿಕೆ ಮತ್ತಿತರರು ಭೇಟಿ ನೀಡಿ ಮೃತಪಟ್ಟ ಬಾಲಕನ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.