Advertisement

ಬಸ್‌ ಢಿಕ್ಕಿಯಾಗಿ ಕಾರು ನಜ್ಜುಗುಜ್ಜು;  ಓರ್ವ ಸಾವು

09:54 AM Jan 27, 2018 | Team Udayavani |

ಕಬಕ: ಇಲ್ಲಿನ ಪೋಳ್ಯ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಐ20 ಕಾರು ನಡುವೆ ಭೀಕರ ಅಪಘಾತ ನಡೆದ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ.

Advertisement

ಕಾರಿನಲ್ಲಿದ್ದ ಗೋವಾ ಮೂಲದ ರಾಜ್‌ ನಡಾಫ್‌ (30) ಅವರ ತಲೆಗೆ ಗಂಭೀರ  ಗಾಯವಾಗಿದ್ದು, ಆಸ್ಪತ್ರೆಗೆ   ದಾರಿಯಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಪರೇಶ್‌, ರಕ್ಷಿತ್‌, ವಾಮನ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರೆಲ್ಲರೂ ನ್ಯಾಯವಾದಿಗಳಾಗಿದ್ದಾರೆ.

ಗೋವಾದಿಂದ ಗುರುವಾರ ಮಂಗ ಳೂರಿಗೆ ಬಂದಿದ್ದ ಇವರು, ಶುಕ್ರವಾರ ಬೆಳಗ್ಗೆ ಮಡಿಕೇರಿಗೆ ತೆರಳುತ್ತಿದ್ದರು. ಇದೇ ಸಂದರ್ಭ ಬೆಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌ ಢಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಮುಂಜಾನೆ 5.30ರ ಸುಮಾರಿಗೆ ಘಟನೆ ಸಂಭವಿಸಿದ್ದು, ಬಸ್‌ ಚಾಲಕ ರವಿಚಂದ್ರ  ಅವರ ಅಜಾಗರೂಕತೆ ಹಾಗೂ ನಿರ್ಲಕ್ಷéವೇ  ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬಸ್ಸನ್ನು ಏಕಾಏಕಿ ಬಲಭಾಗಕ್ಕೆ ತಂದ ಕಾರಣ ಕಾರಿಗೆ ಢಿಕ್ಕಿ ಹೊಡೆದಿದೆ.ಸ್ಥಳಕ್ಕೆ ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌ ಭೇಟಿ ನೀಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಪುತ್ತೂರು ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೀಟ್‌ ಬೆಲ್ಟ್ ಕಾಪಾಡಿತು
ಕಾರು ಚಾಲಕನಿಗೆ ಗಂಭೀರ ಗಾಯವಾಗಿದ್ದರೂ, ಸೀಟ್‌ ಬೆಲ್ಟ್ ಹಾಕಿಕೊಂಡಿದ್ದ ಕಾರಣ ಪ್ರಾಣಾಪಾಯದಿಂದ ಪಾರಾದರು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

ಗಾಯಾಳುಗಳನ್ನು ಹೊರ ತರಲು ಕ್ರೇನ್‌ ಬಳಕೆ
ಕಾರಿನೊಳಗೆ ಸಿಲುಕಿದ್ದವರನ್ನು ಹೊರ ತೆಗೆಯಲು ಸ್ಥಳೀಯರು ಹರಸಾಹಸ ಪಟ್ಟರು.  ರಸ್ತೆಯಲ್ಲಿ ಸಾಗುತ್ತಿದ್ದ ಕ್ರೇನ್‌ ಸಹಾಯ ಪಡೆದುಕೊಂಡರು. ಸುಮಾರು 1 ಗಂಟೆ ಪ್ರಯತ್ನದ ಬಳಿಕ, ಪ್ರಯಾಣಿಕರನ್ನು ಹೊರ ತೆಗೆಯಲಾಯಿತು.

ಆಮ್ನಿ ಢಿಕ್ಕಿ : ವ್ಯಕ್ತಿ ಸಾವು
ಬೆಳ್ತಂಗಡಿ: ಗುರುವಾ ಯನಕೆರೆ ಸಮೀಪ ಶುಕ್ರ ವಾರ ರಾತ್ರಿ ಮಾರುತಿ ಆಮ್ನಿ ಢಿಕ್ಕಿ ಯಾಗಿ  ಪಾದ ಚಾರಿ ಕುವೆಟ್ಟು ಗ್ರಾಮ ಎರಂಗಲ್ಲು ಮನೆ ಗುರುವ (50) ಅವರು ಸ್ಥಳದಲ್ಲಿಯೇ  ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next