Advertisement
ಘಟನೆಯ ವಿವರಮಂಗಳೂರಿನ ಕಡೆಗೆ ಸಾಗುತ್ತಿದ್ದ ಮಂಗಳೂರು-ಕಾರ್ಕಳ ರೂಟಿನ ಖಾಸಗಿ ಎಕ್ಸ್‌ಪ್ರೆಸ್ ಬಸ್ ಗುರುಪುರದಲ್ಲಿ ಮಂಗಳೂರಿನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಮತ್ತೂಂದು ಎಕ್ಸ್‌ಪ್ರೆಸ್ ಬಸ್ಸಿಗೆ ಡಿಕ್ಕಿಯಾಗಿ ಮುಂದೆ ಸಾಗಿತು. ವೇಗ ನಿಯಂತ್ರಣಕ್ಕೆ ಬರದ ಖಾಸಗಿ ಬಸ್ ಮುಂದಿದ್ದ ಬೆ„ಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೆ„ಕ್ ರಸ್ತೆ ಬದಿಗೆ ಎಸೆಯಲ್ಪಟ್ಟಿತ್ತು. ಬೆ„ಕಿನಲ್ಲಿದ್ದ ಮಹೇಶ್ ಅವರ ಹೆಲ್ಮೆಟ್ ಸಂಪೂರ್ಣ ನುಚ್ಚುನೂರಾಗಿದ್ದು, ರಸ್ತೆ ಮಧ್ಯೆ ಬಿದ್ದಿದ್ದರು.
Related Articles
ಬಸ್ ಚಾಲಕನ ಅತಿವೇಗ, ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ವಿಶಾಲ್ ಬಸ್ ಕೈಕಂಬದಿಂದಲೇ ಅತಿವೇಗದಲ್ಲಿ ಸಾಗಿ ಬರುತ್ತಿತ್ತು. ದಾರಿ ಮಧ್ಯೆ ಟಿಪ್ಪರ್ ಲಾರಿಯೊಂದನ್ನು ಓವರ್‌ಟೇಕ್ ಮಾಡುವ ಯತ್ನದಲ್ಲಿ ಅಪಘಾತ ಸಂಭವಿಸುವ ಅಪಾಯದಲ್ಲಿದ್ದಾಗ ಪ್ರಯಾಣಿಕರು ಬೊಬ್ಬೆ ಹೊಡೆದಿದ್ದರು ಎಂದು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದಾರೆ.
Advertisement
ಅಗಲ ಕಿರಿದಾದ ರಸ್ತೆ- ಅವೈಜ್ಞಾನಿಕ ಹಂಪ್ಸ್ಗುರುಪುರದಲ್ಲಿ ಹಲವು ಬಾರಿ ಅಪಘಾತ ಸಂಭವಿಸಿ ಈಗಾಗಲೇ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ರಸ್ತೆಯು ಅಗಲ ಕಿರಿದಾಗಿದ್ದು, ಇಲ್ಲಿ ಹಾಕಿರುವ ಹಂಪ್ಸ್‌ಗಳಿಗೆ ಬಣ್ಣ ಬಳಿಯದ ಕಾರಣ ಹಂಪ್ಸ್‌ಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಕೆಲವರ್ಷಗಳ ಮುಂಚೆ ಈಚರ್ ಲಾರಿಗೆ ಬಾಲಕನೊಬ್ಬ ಬಲಿಯಾದ ಸಂಧರ್ಭ ಇಲ್ಲಿ ಹಂಪ್ಸ್ ಅಳವಡಿಸಲಾಗಿತ್ತು. ಅಪಘಾತ ಕಡಿಮೆಯಾಗಬೇಕೆಂಬ ಸದುದ್ದೇಶದಿಂದ ಹಾಕಿದ್ದ ಹಂಪ್ಸ್‌ಗಳು ಅವೈಜ್ಞಾನಿಕವಾಗಿರುವುದಲ್ಲದೆ ಬಣ್ಣ ಬಳಿಯದ ಕಾರಣ ಅಪಾಯಕಾರಿಯಾಗಿ ಪರಿಣಮಿಸಿದೆ. ಅಲ್ಲದೆ ಇಲ್ಲಿನ ರಸ್ತೆಯಲ್ಲಿ ಸಾಕಷ್ಟು ಹೊಂಡಗಳಿದ್ದು, ಇಕ್ಕೆಲಗಳಲ್ಲಿಯೂ ಅಂಗಡಿ-ಮುಂಗಟ್ಟು ಮನೆಗಳಿರುವುದು ಈ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ. ನಿನ್ನೆ ನಡೆದ ಅಪಘಾತದ ವೇಳೆಯೂ ಹಂಪ್ಸ್ ಗುರುತಿಸಲು ಚಾಲಕ ವಿಫವಾಗಿರುವುದು ಕೂಡ ಅಪಘಾತಕ್ಕೆ ಇನ್ನೊಂದು ಕಾರಣವಿರಬಹುದೆಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣಗೊಳ್ಳಬೇಕೆಂಬ ಒತ್ತಾಯ ಹೆಚ್ಚಾಗುತ್ತಿರುವ ಮಧ್ಯೆಯೇ ಇದೀಗ ಮತ್ತೂಂದು ಅಪಘಾತ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಇನ್ನಷ್ಟು ಹೆಚ್ಚಿಸಿದೆ.