Advertisement

ಸ್ವಿಗ್ಗಿ ಬ್ಯಾಗ್‌ ಹೊತ್ತು ದಿನಕ್ಕೆ 25 ಕಿ.ಮೀ ನಡಿಗೆ!

12:07 AM Jan 17, 2023 | Team Udayavani |

ಲಕ್ನೋ: ನೋವಿಗಾಗಲೀ, ನಲಿವಿಗಾಗಲೀ ಜಾಲತಾಣಗಳಲ್ಲಿ ಸ್ಪಂದನೆ ಹೆಚ್ಚು. ಹಲವು ಬಾರಿ ಯಾವುದೋ ವಿಚಾರಗಳನ್ನ ಹೇಗೋ ಅರ್ಥೈಸಿಕೊಳ್ಳುವ ಘಟನೆಗಳು ನಡೆದಿವೆ. ಅಂಥ ಘಟನೆಗಳಲ್ಲಿ ಒಂದು, ಉತ್ತರ ಪ್ರದೇಶದ ಲಕ್ನೋದಲ್ಲಿ ಬುರ್ಖಾ ತೊಟ್ಟ ಮಹಿಳೆಯೊಬ್ಬಳು ಫುಡ್ ಡೆಲಿವರಿ ಸಂಸ್ಥೆಯ ಬ್ಯಾಗ್‌ ಧರಿಸಿ, ನಡೆದುಕೊಂಡೇ ಫುಡ್ ಡೆಲಿವರಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್‌ ಆಗಿದ್ದು.

Advertisement

ಹೌದು, ರಿಜ್ವಾನ್‌ ಎನ್ನುವ ಮಹಿಳೆ ಸ್ವಿಗ್ಗಿ ಬ್ಯಾಗ್‌ ಧರಿಸಿ ನಡೆಯುತ್ತಿದ್ದ ಫೋಟೋ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ. ಆಕೆ ಫುಡ್ ಡೆಲಿವರಿ ಸಂಸ್ಥೆಯ ಏಜೆಂಟ್‌ ಅಲ್ಲ ಎಂಬುದು ತಿಳಿದುಬಂದಿದ್ದು, ಅದರೊಂದಿಗೆ ಆಕೆಯ ಕರುಣಾಜನಕ ಬದುಕಿನ ಕಥೆಯೂ ಹೊರಬಂದಿದೆ.

ಗಂಡನಿಂದ ಬೇರ್ಪಟ್ಟಿರುವ ರಿಜ್ವಾನ್‌, 3 ಮಕ್ಕಳನ್ನು ಸಾಕುವ ಸಲುವಾಗಿ ದಿನಾ ಸ್ವಿಗ್ಗಿ ಬ್ಯಾಗ್‌ನಲ್ಲಿ ಪೇಪರ್‌ ಕಪ್‌ಗಳನ್ನು ಇಟ್ಟುಕೊಂಡು, ನಿತ್ಯವೂ 25 ಕಿ.ಮೀ ನಡೆದು, ರಸ್ತೆ ಬದಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅಂದಹಾಗೆ ಕಪ್‌ಗಳನ್ನು ಇಟ್ಟುಕೊಳ್ಳಲು ಗಟ್ಟಿ ಬ್ಯಾಗ್‌ ಬೇಕಿದ್ದ ಕಾರಣ ಮಾರುಕಟ್ಟೆಯಲ್ಲಿ ಒಬ್ಬ ವ್ಯಕ್ತಿಯ ಬಳಿ 50 ರೂ.ಗಳನ್ನು ಕೊಟ್ಟು ಸ್ವಿಗ್ಗಿ ಬ್ಯಾಗ್‌ ಖರೀದಿಸಿರುವುದಾಗಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next