ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮಂಜಲ್ಪಪಾದೆಯ ಪಲ್ಲ ಪ್ರದೇಶದಲ್ಲಿ ಮಾ. 12ರ ರಾತ್ರಿ ವಿದ್ಯುತ್ ಪರಿವರ್ತಕವೊಂದು ಸ್ಫೋಟಗೊಂಡು ಹೊತ್ತಿ ಉರಿದಿದ್ದು, ಘಟನೆಯಿಂದ ಸ್ಥಳೀಯ ಗಿಡ-ಮರಗಳು ಬೆಂಕಿಗಾಹುತಿಯಾಗಿದೆ.
ಕೆಲವು ದಿನಗಳ ಹಿಂದೆ ವಿದ್ಯುತ್ ಪರಿವರ್ತಕದಲ್ಲಿ ಆಯಿಲ್ ಸೋರಿಕೆಯಾಗಿದ್ದು, ಈ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದರು. ಆದರೆ ಮಾ. 12ರಂದು ರಾತ್ರಿ 7.30ರ ವೇಳೆಗೆ ಜೋರಾದ ಶಬ್ದ ಕೇಳಿದ್ದು, ಬಳಿಕ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಸ್ಥಳೀಯರು ನೀರು ಹಾಗೂ ಮರಳು ಹಾಕಿ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ. ಘಟನೆಯಿಂದ ಸ್ಥಳೀಯವಾಗಿ ವಿದ್ಯುತ್ ಕಡಿತಗೊಂಡಿದ್ದು, ವಿದ್ಯುತ್ ಪರಿವರ್ತಕ ಹೊತ್ತಿ ಉರಿಯುವ ದೃಶ್ಯದ ವೀಡಿಯೋ ವೈರಲ್ ಆಗಿದೆ.