Advertisement
ಅವಘಡದಲ್ಲಿ ಟ್ಯಾಂಕರ್ ಕೀನ್ಲರ್ ಸಜೀವವಾಗಿ ದಹನಗೊಂಡಿದ್ದು, ತೀವ್ರವಾಗಿ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸತತ ನಾಲ್ಕು ಗಂಟೆ ಕಾರ್ಯಾಚರಣೆ ಕೈಗೊಂಡರೂ ಬೆಂಕಿ ತಹಬದಿಗೆ ತರಲು ಸಾಧ್ಯವಾಗಿರಲಿಲ್ಲ.
ಟ್ಯಾಂಕರ್ ರಸ್ತೆಯ ಎಡ ಭಾಗಕ್ಕೆ ಪಲ್ಟಿಯಾದ ಕಾರಣ ಕ್ಲೀನರ್ ಹೊರಬರಲಾರದೆ ಟ್ಯಾಂಕರ್ ನಲ್ಲಿಯೇ ಸಜೀವ ದಹನವಾಗಿರದೆಂಬ ಶಂಕೆ ಇದೆ. ಬೆಂಕಿಯ ಜ್ವಾಲೆಗೆ ಸಿಲುಕಿದ ಚಾಲಕ ದಾವಣಗೆರೆಯ ದಾದಾಫೀರ್ ಲಾರಿಯ ಬಾಗಿಲು ತೆರೆದು ಉರಿಯುವ ಸ್ಥಿತಿಯಲ್ಲಿಯೇ ಹೊರಗೆ ಹಾರಿದ್ದಾನೆ. ಕೂಡಲೇ ಗ್ರಾಮಸ್ಥರು ಆತನ ಮೈಗೆ ತಾಗಿದ್ದ ಬೆಂಕಿ ಆರಿಸಿ ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇ. 80ರಷ್ಟು ಸುಟ್ಟಗಾಯಗಳಾದ ಈತನನ್ನು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಚಾಲಕ ಮಾತ್ರ ಪತ್ತೆಯಾಗಿದ್ದು ಟ್ಯಾಂಕರ್‌ನಲ್ಲಿ ಕೀನ್ಲರ್ ಸಹ ಇದ್ದ ಎನ್ನಲಾಗುತ್ತಿದ್ದರೂ ಆತ ಏನಾದ ಎಂಬುದು ಇನ್ನೂ ತಿಳಿದುಬಂದಿಲ್ಲ.
Related Articles
ಮೃತ್ಯುಂಜಯಪ್ಪ ಅವರ ಮನೆಗಳು ಸಂಪೂರ್ಣ ಭಸ್ಮಗೊಂಡಿದೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ
ಯಾವುದೇ ಪ್ರಾಣಹಾನಿಯಾಗಲಿಲ್ಲ. ಇದಲ್ಲದೆ ಗ್ರಾಮ ಪಂಚಾಯತಿಗೆ ಸೇರಿದ ಎರಡು ವಾಣಿಜ್ಯ ಮಳಿಗೆಗಳು, ಚಿದಾನಂದಪ್ಪ ಎಂಬುವವರಿಗೆ ಸೇರಿದ ಪೆಟ್ಟಿಗೆ ಅಂಗಡಿ ಹಾಗೂ ಬಸ್ ಶೆಲ್ಟರ್ ಸಂಪೂರ್ಣ ಹಾಳಾಗಿವೆ.
Advertisement
ಬೆಂಕಿ ಆರಿಸಲು ಹರಸಾಹಸ: ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಗ್ರಾಮಸ್ಥರು, ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಕಡೂರು, ತರೀಕೆರೆ, ಚಿಕ್ಕಮಗಳೂರು, ಹೊಸದುರ್ಗದಿಂದ ಆಗಮಿಸಿದ ಅಗ್ನಿಶಾಮಕ ದಳದ 150ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಬೆಂಕಿ ಆರಿಸಲು ಸಿಬ್ಬಂದಿಗೆ ಗ್ರಾಮಸ್ಥರು ಸಾಥ್ ನೀಡಿದರು. ಇದಲ್ಲದೆ ತರೀಕೆರೆ, ಕಡೂರು, ಬೀರೂರು, ಅಜ್ಜಂಪುರ, ಯಗಟಿ ಹಾಗೂ ಚಿಕ್ಕಮಗಳೂರಿನ ಮೀಸಲು ಸಶಸ್ತ್ರಪಡೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಶಿವಮೊಗ್ಗ ಪೊಲೀಸ್ ಮುಖ್ಯಾಧಿಕಾರಿ ಅಭಿನವ ಖರೆ, ಚಿಕ್ಕಮಗಳೂರು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಗೀತಾ, ತರೀಕೆರೆ ಸರ್ಕಲ್ ಇನ್ಸ್ ಪೆಕ್ಟರ್ ರಾಮಚಂದ್ರನಾಯಕ್, ಕಡೂರು ಪೊಲೀಸ್ ಠಾಣಾಧಿಕಾರಿ ಸಿ.ರಾಕೇಶ್, ಯಗಟಿ ಠಾಣಾಧಿಕಾರಿ ವಿಶ್ವನಾಥ್ ಹಾಜರಿದ್ದು ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಂಡರು.
ಸ್ಥಳಕ್ಕೆ ಸಿರಿಗೆರೆ ತರಳಬಾಳು ಸಾಣೆಹಳ್ಳಿ ಶಾಖಾ ಮಠದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ,ಶಾಸಕ ಬೆಳ್ಳಿಪ್ರಕಾಶ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಗೀತಾ, ಉಪವಿಭಾಗಾಧಿಕಾರಿ ಬಿ.ಬಿ. ಸರೋಜ, ತರೀಕೆರೆ ಡಿವೈಎಸ್‌ಪಿ ರವೀಂದ್ರನಾಥ, ತರೀಕೆರೆ ವೃತ್ತ ನಿರೀಕ್ಷಕ ರಾಮಚಂದ್ರನಾಯಕ್, ಕಡೂರು ಆರಕ್ಷಕ ಉಪ ನಿರೀಕ್ಷಕ ಸಿ. ರಾಕೇಶ್, ಜಿಲ್ಲಾ ಪಂಚಾಯತಿ ಸದಸ್ಯ ಮಹೇಶ್‌ಒಡೆಯರ್, ತಾಲೂಕು ಪಂಚಾಯತಿ ಅಧ್ಯಕ್ಷೆ ರೇಣುಕಾ ಉಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ|ಎಸ್.ಕೆ. ಪ್ರಭು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಅನಾಹುತದಲ್ಲಿ ಈವರೆಗೂ ಒಂದು ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಮತ್ತೂಂದು ಶೇ 50 ರಷ್ಟು
ಆಹುತಿಯಾಗಿದ್ದರೆ 3-4 ಮನೆಗಳ ಕಾಂಪೌಂಡ್‌ಗಳಿಗೆ ಬೆಂಕಿ ಆವರಿಸಿದೆ. ಟ್ಯಾಂಕರ್‌ನಲ್ಲಿ ಚಾಲಕನೊಂದಿಗೆ ಕ್ಲೀನರ್ ಕೂಡ ಇದ್ದ ಎಂದು ಕೆಲವರು ಹೇಳುತ್ತಿದ್ದಾರೆ. ಟ್ಯಾಂಕರ್ ಮಗುಚಿ ಬಿದ್ದಿದ್ದು, ಅದನ್ನು ಎತ್ತುವವರೆಗೂ ಈ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಹಾಸನದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅವರಿಗೆ ಸ್ಥಳಕ್ಕೆ ಬರಲು ತಿಳಿಸಲಾಗಿದೆ. ಅವರು ಬಂದ ನಂತರ ಟ್ಯಾಂಕರ್‌ನ್ನು ಮೇಲೆತ್ತಲಾಗುವುದು. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು.
ಎಂ.ಕೆ. ಶ್ರೀರಂಗಯ್ಯ ,ಜಿಲ್ಲಾಧಿಕಾರಿ