ಮುಂಬಯಿ: ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಸಹಕಾರಿಯಾ ಗಿದೆ. ಕ್ರೀಡೆಯಿಂದ ದೈಹಿಕ, ಮಾನಸಿಕ ವಿಕಾಸ ಸಾಧ್ಯ. ಕ್ರೀಡಾಳು ಯಾವತ್ತೂ ಕ್ರೀಡೆಯನ್ನು ಧನಾತ್ಮಕವಾಗಿ ಸ್ವೀಕರಿಸ ಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಉತ್ತರ ಮುಂಬಯಿ ಸಂಸದ ಗೋಪಾಲ ಸಿ. ಶೆಟ್ಟಿ ಅವರು ನುಡಿದರು.
ಆ.7 ರಂದು ಕಾಂದಿವಲಿ ಪಶ್ಚಿಮದ ಕೆಇಎಸ್ ಕಾಲೇಜಿನ ಮೈದಾನದಲ್ಲಿ ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಆಯೋಜಿಸಿದ್ದ ಅಂತರ್ ಪ್ರಾದೇಶಿಕ ಸಮಿತಿಯ ಮಹಿಳಾ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ಸರಕಾರವು ಕ್ರೀಡೆಗಾಗಿ ವಿಶೇಷ ಆಸಕ್ತಿಯನ್ನು ಹೊಂದಿದೆ. ಕ್ರೀಡಾಳು ಗಳನ್ನೇ ಹೆಚ್ಚಾಗಿ ಕ್ರೀಡಾ ಇಲಾಖೆಯಲ್ಲಿ ನೇಮಿಸುತ್ತಿದ್ದು, ಕ್ರೀಡಾಸಕ್ತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ಧೇಶದಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ನುಡಿದು ಎಲ್ಲರಿಗೂ ಶುಭಹಾರೈಸಿದರು.
ಮುಂಬಯಿ ಕ್ರಿಕೆಟ್ ಅಸೋಸಿ ಯೇಶನ್‌ನ ಅಧ್ಯಕ್ಷ ಡಾ| ಪಿ. ವಿ. ಶೆಟ್ಟಿ ಅವರು ಮಾತನಾಡಿ, ನೂತನವಾಗಿ ನಿರ್ಮಾಣಗೊಂಡ ಈ ಮೈದಾನದಲ್ಲಿ ಇಂದಿನ ಮಹಿಳಾ ಕ್ರೀಡಾಕೂಟವು ನಡೆದಿರುವುದು ಪ್ರಪ್ರಥಮವಾಗಿದೆ. ಕ್ರೀಡೆಯನ್ನು ಸೋಲು-ಗೆಲುವಿನ ಆಟವಾಗಿ ಸ್ವೀಕರಿಸದೆ, ಮನಸ್ಸಿಗೆ ನೆಮ್ಮದಿ ನೀಡುವ ಸಮಯವೆಂದು ಸ್ವೀಕರಿಸಬೇಕು. ಬಂಟ್ಸ್ ಸಂಘದ ವತಿಯಿಂದ ಮುಂದೆಯೂ ಉತ್ತಮ ಕ್ರೀಡಾ ಕಾರ್ಯಕ್ರಮಗಳು ಜರಗುತ್ತಿರಲಿ ಎಂದು ನುಡಿದು ಕ್ರೀಡಾಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು, ಮಹಿಳಾ ಕ್ರಿಕೆಟ್ ಕ್ರೀಡಾ ಕೂಟವು ಒಂದು ಕುಟುಂಬದ ಸಂತೋ ಷವನ್ನು ಆಯೋಜಿಸಿದೆ ಎನ್ನಲು ಸಂತೋಷವಾಗುತ್ತಿದೆ. ಕ್ರೀಡೆಯಲ್ಲಿ ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಕ್ರೀಡಾ ಸ್ಫೂರ್ತಿಯಿಂದ ಆಡಬೇಕು. ಭವಿಷ್ಯ ದಲ್ಲಿ ಸಮಾಜದಿಂದ ಅತ್ಯುತ್ತಮ ಕ್ರೀಡಾಪಟುಗಳು ಇನ್ನಷ್ಟು ಹೊರ ಹೊಮ್ಮುವಂತಾಗಲಿ. ಬಂಟರ ಸಂಘದ ಕೀರ್ತಿಯು ಇನ್ನಷ್ಟು ಬೆಳಗಲಿ ಎಂದು ನುಡಿದು ಶುಭಹಾರೈಸಿದರು.
ಸ್ಥಳೀಯ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶೈಲಜಾ ಎ. ಶೆಟ್ಟಿ ಪ್ರಾರ್ಥನೆಗೈದರು. ಸಂಸದ ಗೋಪಾಲ್ ಶೆಟ್ಟಿ ಹಾಗೂ ಬಂಟರ ಸಂಘದ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಲೂನ್‌ಗುತ್ಛವನ್ನು ಆಕಾಶಕ್ಕೆ ಹಾರಿಸಿ ಪಂದ್ಯಾಟವನ್ನು ಉದ್ಘಾಟಿಸಲಾಯಿತು.
ಮುಂಬಯಿ ಕ್ರಿಕೆಟ್ ಅಸೋ.ನ ಅಧ್ಯಕ್ಷ ಡಾ| ಪಿ. ವಿ. ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಪದಾಧಿಕಾರಿಗಳಾದ ಸಿಎ ಸಂಜೀವ ಶೆಟ್ಟಿ, ಡಾ| ಪ್ರಭಾಕರ ಶೆಟ್ಟಿ, ಮುಂಡಪ್ಪ ಎಸ್. ಪಯ್ಯಡೆ, ರವೀಂದ್ರ ಎಸ್. ಶೆಟ್ಟಿ, ವಿಠಲ್ ಎಸ್. ಆಳ್ವ, ಶರತ್ ವಿ. ಶೆಟ್ಟಿ ಉಪಸ್ಥಿತರಿದ್ದರು.
ರವೀಂದ್ರ ಎಸ್. ಶೆಟ್ಟಿ ಸ್ವಾಗತಿಸಿ ದರು. ಸ್ಥಳೀಯ ಸಮಿತಿಯ ಪದಾ ಧಿಕಾರಿಗಳಾದ ವಿಜಯ್ ಆರ್. ಭಂಡಾರಿ, ಎಂ. ಜಿ. ಶೆಟ್ಟಿ, ಕೊಂಡಾಡಿ ಪ್ರೇಮನಾಥ್ ಶೆಟ್ಟಿ, ವಿನೋದಾ ಎ. ಶೆಟ್ಟಿ, ಸಂಕೇಶ್ ಶೆಟ್ಟಿ, ಛತ್ರಪತಿ ಶಿವಾಜಿ ಪ್ರಶಸ್ತಿ ಪುರಸ್ಕೃತ ಜಯ ಎ. ಶೆಟ್ಟಿ, ಪ್ರವೀಣ್ ಜೆ. ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಯುವ ವಿಭಾಗ, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು-ಸದಸ್ಯೆಯರು ಉಪಸ್ಥಿತರಿದ್ದರು.
ಚಿತ್ರ-ವರದಿ: ರಮೇಶ್ ಉದ್ಯಾವರ್