Advertisement

ಬಂಟರ ಸಂಘ ಜೋಗೇಶ್ವರಿ-ದಹಿಸರ್‌ ಸಮಿತಿಯಿಂದ ಉಚಿತ ವೈದ್ಯಕೀಯ ಶಿಬಿರ

04:21 PM Sep 25, 2018 | |

ಮುಂಬಯಿ: ಆಧುನಿಕ ಧಾವಂತದ ಬದುಕಿನಲ್ಲಿ ಆರೋಗ್ಯದ ಚಿಂತನೆ ಅತೀ ಮುಖ್ಯ. ಈ ಚಿಂತನೆಯ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಸುಯೋಗವನ್ನು ಬಂಟರ ಸಂಘ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿ ಒದಗಿಸಿರುವುದು ಸ್ತುತ್ಯರ್ಹ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಇವರು ನುಡಿದರು.

Advertisement

ಸೆ. 23ರಂದು ಮಲಾಡ್‌ ಪಶ್ಚಿಮದ ತುಂಗಾ ಹಾಸ್ಪಿಟಲ್‌ನ ಕಿರು ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಜರಗಿದ ಬಂಟರ ಸಂಘ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ವತಿಯಿಂದ ಆಯೋ ಜಿಸಲಾಗಿದ್ದ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಜೀವನದಲ್ಲಿ ಮಾನವೀಯತೆ ಮುಖ್ಯ. ಅಂತಹ ವೈದ್ಯರು ದೇವರಾಗಿ ಕಾಣುತ್ತಾರೆ. ತುಂಗಾ ಸಮೂಹ ವೈದ್ಯಕೀಯ ಸಂಸ್ಥೆಯ ಮುಖ್ಯ ಕಾರ್ಯನಿರ್ದೇಶಕ ಡಾ| ಸತೀಶ್‌ ಶೆಟ್ಟಿ ಅವರ ಮಾನವೀಯತೆ ಎಲ್ಲರಿಗೂ ಮಾದರಿ. ಹಲವಾರು ಜನಮೆಚ್ಚುಗೆ ಕಾರ್ಯಕ್ರಮಗಳಿಗೆ ಪಾತ್ರವಾದ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಶೆಟ್ಟಿ ಅವರ ತಂಡ ಅಭಿನಂದನಾರ್ಹ.  ನಮಗೆ ಆರೋಗ್ಯವೇ ಮುಖ್ಯ. ಈ ಉದ್ದೇಶದಿಂದ ಈ ಶಿಬಿರದಲ್ಲಿ ಎಲ್ಲ ಸಮಾಜ ಬಾಂಧವರು ಪಾಲ್ಗೊಂಡು ಉಚಿತ ವೈದ್ಯಕೀಯ ಶಿಬಿರದ ಪ್ರಯೋ ಜನ ಪಡೆದು ಕೊಳ್ಳಬೇಕು ಎಂದರು.

ತುಂಗಾ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ದೇಶಕ ಡಾ| ಸತೀಶ್‌ ಶೆಟ್ಟಿ ಅವರು ಮಾತನಾಡಿ, ಕ್ಲಪ್ತ ಸಮಯದಲ್ಲಿ ತಪಾಸಣೆ ನಡೆಸಿ, ಆ ದಾಖಲೆಗಳನ್ನು ಜೋಪಾನವಾಗಿಟ್ಟುಕೊಂಡು ಇಂದಿನ ಆಧುನಿಕ ಜೀವನ ಶೈಲಿಯಲ್ಲಿನ ಮಾರಕ ರೋಗಗಳನ್ನು ತಡೆಗಟ್ಟುವಲ್ಲಿ ಯಶಸ್ವಿ ಯಾಗಬಹುದು. 

ಮಧುಮೇಹಗಳಂತಹ ರೋಗಗ ಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಹಾಗೂ ನುರಿತ ತಜ್ಞರಿಂದ ಯೋಗ್ಯ ಸಲಹೆಗಳ ಮೂಲಕ ಹತೋಟಿ ಯಲ್ಲಿಡಲು ಸಾಧ್ಯ. ಹಲವಾರು ಪ್ರತಿಭಾವಂತ ವೈದ್ಯರುಗಳ ತಂಡ ದೊಂದಿಗೆ ಕಾರ್ಯನಿರ್ವಹಿಸುವ ಈ ವೈದ್ಯಕೀಯ ಸಂಸ್ಥೆಯು ಆರ್ಥಿಕವಾಗಿ ಅಸಾಯಕತೆಯ ರೋಗಿಗಳಿಗೆ ಮಾನವೀಯತೆಯ ನೆಲೆಯಲ್ಲಿ ಸೇವೆಯನ್ನು ಒದಗಿಸುತ್ತಿದೆ. ಅಲ್ಲದೆ ಮುಖ್ಯಮಂತ್ರಿ ಪರಿಹಾರ ನಿಧಿ ಹಾಗೂ ಪ್ರಸ್ತುತ ಕೇಂದ್ರ ಸರಕಾರ ಜಾರಿಗೆ ತಂದಿರುವ ಆಯುಷ್ಮಾನ್‌ ಯೋಜನೆಯ ಸೌಲಭ್ಯವನ್ನು ಈ ಆಸ್ಪತ್ರೆಯಿಂದ ಪಡೆದುಕೊಳ್ಳಬಹುದು. 

ಎಲ್ಲ ಸಂಘ-ಸಂಸ್ಥೆಗಳು ಈ ಮಹತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೈದ್ಯ ರನ್ನು ಗೌರವಿಸುವ ಗುಣವನ್ನು ಬೆಳೆಸಿ ಕೊಂಡು ಸಹಕರಿಸಬೇಕು ಎಂದು ನುಡಿದು ಶುಭಹಾರೈಸಿದರು.

Advertisement

ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶೈಲಜಾ ಆರ್‌. ಶೆಟ್ಟಿ ಪ್ರಾರ್ಥನೆಗೈದರು. ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಶೆಟ್ಟಿ ಸ್ವಾಗತಿ ಸಿದರು. ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಬಂಟರ ಸಂಘ ನೂತನ ಶಿಕ್ಷಣ ಯೋಜನೆಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್‌. ಪಯ್ಯಡೆ, ಪ್ರಾದೇಶಿಕ ಸಮಿತಿಯ ಸಮನ್ವಯಕ ಪ್ರಭಾಕರ ಹೆಗ್ಡೆ, ಮನೋಹರ್‌ ಎನ್‌. ಶೆಟ್ಟಿ, ಸಂಚಾಲಕರಾದ ವಿಜಯ ಆರ್‌. ಭಂಡಾರಿ, ಉಪ ಕಾರ್ಯಾಧ್ಯಕ್ಷ ಎಂ. ಜಿ. ಶೆಟ್ಟಿ, ಗೌರವ ಕಾರ್ಯದರ್ಶಿ ಕೊಂಡಾಡಿ ಪ್ರೇಮನಾಥ್‌ ಶೆಟ್ಟಿ, ಗೌರವ ಕೋಶಾಧಿಕಾರಿ ಗಂಗಾಧರ ಎ. ಶೆಟ್ಟಿ, ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಎ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂಕೇಶ್‌ ಶೆಟ್ಟಿ ಹಾಗೂ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರು, ಉಪಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.

ಸದಸ್ಯತ್ವ ನೋಂದಾವಣೆ ಸಮಿತಿಯ ಕಾರ್ಯಾಧ್ಯಕ್ಷ ರಘುನಾಥ್‌ ಎನ್‌. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವೈದ್ಯಕೀಯ ಸಮಿತಿಯ ಕಾರ್ಯಾಧ್ಯಕ್ಷೆ ಸುಚರಿತಾ ಶೆಟ್ಟಿ ವಂದಿಸಿದರು. 

ಶಿಬಿರದಲ್ಲಿ ಬಾಡಿಮಾಸ್‌ ಇಂಡೆಕ್ಸ್‌, ರ್‍ಯಾಂಡಮ್‌ ಬ್ಲಿಡ್‌ಶುಗರ್‌, ಇಲೆಕ್ಟಿÅಕ್‌ ಕಾರ್ಡಿಯೋಗ್ರಾಮ್‌ ಮೊದ ಲಾದ ಹಲವಾರು ಕಾಯಿಲೆಗಳ ತಪಾಸಣೆಯನ್ನು ಶಿಬಿರದಲ್ಲಿ ಆಯೋಜಿಸಲಾಗಿತ್ತು. ಅಧಿಕ ಸಂಖ್ಯೆ ಯಲ್ಲಿ ಸಮಾಜ ಬಾಂಧವರು ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನವನ್ನು ಪಡೆದರು. 

ಚಿತ್ರ-ವರದಿ:ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next