Advertisement
ಅ. 22ರಂದು ಸಂಜೆ ಕಲ್ಯಾಣ್ ಪಶ್ಚಿಮದ ಮೌರ್ಯ ಗ್ರಾÂಂಡ್ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಇದರ ಭಿವಂಡಿ-ಕಲ್ಯಾಣ್-ಉಲ್ಲಾಸ್‌ನಗರ-ಅಂಬರ್‌ನಾಥ್-ಬದ್ಲಾಪುರ ಪ್ರಾದೇಶಿಕ ಸಮಿತಿಯ 8ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಅಂದಿನ ಕಾರ್ಯಕ್ರಮದಲ್ಲಿ ಸಂಸ್ಕೃತಿ ಮೇಳೈಸುತ್ತಿದೆ. ನಿಮ್ಮೆಲ್ಲರ ನಾಡು-ನುಡಿ, ಸಮಾಜದ ಬಗ್ಗೆ ಇರುವ ಅಭಿಮಾನವನ್ನು ಕಂಡಾಗ ಸಂತೋಷವಾಗುತ್ತಿದೆ. ರಾಜಕೀಯದಲ್ಲಿ ಬೆಳೆಯಬೇಕು ಎಂಬ ಉದ್ದೇಶ ನನ್ನದಾಗಿದ್ದು, ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ ಎಂದರು.
Related Articles
Advertisement
ಕೊಂಜಾಲುಗುತ್ತು ಶೇಖರ ಎಂ. ಶೆಟ್ಟಿ ಮತ್ತು ಭವಾನಿ ಎಸ್. ಶೆಟ್ಟಿ, ಶ್ರೀಧರ ರೈ ಮತ್ತು ಪ್ರಶಾಂತಿ ರೈ ದಂಪತಿಗಳನ್ನು ಹಾಗೂ ಸಿದ್ಧಾಂತ್ ರಮೇಶ್ ಶೆಟ್ಟಿ, ಮಾ| ಕೃಪೇಶ್ ಗಣೇಶ್ ಶೆಟ್ಟಿ ಅವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು. ಪ್ರಾದೇಶಿಕ ಸಮಿತಿಯ ವತಿಯಿಂದ ಸಮಿತಿಯ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ ಮತ್ತು ರಜನಿ ಎಸ್. ಶೆಟ್ಟಿ ದಂಪತಿಯನ್ನು ವಿಶೇಷವಾಗಿ ಸಮ್ಮಾನಿಸಲಾಯಿತು.
ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ, ಸದಸ್ಯ ಬಾಂಧವರಿಂದ ವಿವಿಧ ನೃತ್ಯಾವಳಿಗಳು, ಫ್ಯಾಶನ್ ಶೋ, ಹರೀಶ್ ಶೆಟ್ಟಿ ಕಲಾಜಗತ್ತು ಇವರ ನಿರ್ದೇಶನದಲ್ಲಿ ಪನ್ವಿ ಕ್ರಿಯೇಶನ್ಸ್ ಮುಂಬಯಿ ಇವರಿಂದ ರಾಗದ ರಸೋಕು ತೆಲಿಕೆದ ನೆಸಲ್ ಕಾರ್ಯಕ್ರಮ ನಡೆಯಿತು. ಶಾಲಿನಿ ಶೆಟ್ಟಿ, ವಿನೋದಾ ಶೆಟ್ಟಿ, ದಯಾಶಂಕರ್ ಪಿ. ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು. ಶಾಲಿನಿ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಪ್ರಮೋದಾ ಶೆಟ್ಟಿ ಪ್ರಾರ್ಥನೆಗೈದರು. ಗಣ್ಯರು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ರೂಪಾ ಡಿ. ಶೆಟ್ಟಿ, ಪ್ರವೀಣಾ ಪಿ. ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಕರ್ನೂರು ಮೋಹನ್ ರೈ ಮತ್ತು ವಿನೋದಾ ಶಂಕರ್ ಶೆಟ್ಟಿ ಸಭಾ ಕಾರ್ಯಕ್ರಮ ನಿರ್ವಹಿಸಿದರು. ನಾಗಕಿರಣ್ ವಂದಿಸಿದರು.
ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್, ಸಮಿತಿಯ ಪದಾಧಿಕಾರಿಗಳಾದ ಸತೀಶ್ ಎನ್. ಶೆಟ್ಟಿ, ರವೀಂದ್ರ ವೈ. ಶೆಟ್ಟಿ, ಸುಬೋಧ್ ಡಿ. ಭಂಡಾರಿ, ಉದಯ ಕೆ. ಶೆಟ್ಟಿ, ರಾಜೇಶ್ ಜೆ. ಶೆಟ್ಟಿ, ದಯಾನಂದ ವಿ. ಶೆಟ್ಟಿ, ಪವಿತ್ರಾ ಬಿ. ಶೆಟ್ಟಿ, ನಿಲೇಶ್ ಎಸ್. ಶೆಟ್ಟಿ, ನಿರಂಜನ ಹೆಗ್ಡೆ, ಜಯ ಕೆ. ಶೆಟ್ಟಿ, ಸುಧೀರ್ ಜೆ. ಶೆಟ್ಟಿ, ದಯಾಕರ ಶೆಟ್ಟಿ, ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಂಟರ ಸಂಘದಲ್ಲಿ ಶೈಕ್ಷಣಿಕ ಕ್ರಾಂತಿಯಾಗುತ್ತಿದೆ. ಈ ಪ್ರಾದೇಶಿಕ ಸಮಿತಿಯಿಂದ ಶಿಕ್ಷಣ ಸಂಸ್ಥೆಯೊಂದನ್ನು ನಿರ್ಮಿಸುವ ಚಿಂತನೆಗೆ ಸಂಘವು ಬೆಂಬಲ ನೀಡುತ್ತದೆ. ಸಮಾಜದ ಮಕ್ಕಳು ಅಡ್ಡದಾರಿ ಹಿಡಿಯದಂತೆ ನಾವೆಲ್ಲರೂ ಅವರನ್ನು ಬಹಳ ಜಾಗರೂಕತೆಯಿಂದ ಬೆಳೆಸಬೇಕಾಗಿದೆ – ಪದ್ಮನಾಭ ಎಸ್. ಪಯ್ಯಡೆ (ಉಪಾಧ್ಯಕ್ಷರು: ಬಂಟರ ಸಂಘ ಮುಂಬಯಿ). ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಮಿತಿಯ ಕಾರ್ಯಾಧ್ಯಕ್ಷರು ಬಹಳಷ್ಟು ಶ್ರಮಪಟ್ಟಿದ್ದಾರೆ. ನಮ್ಮ ಸ್ವಪ್ರತಿಷ್ಠೆಯನ್ನು ಬದಿಗಿಟ್ಟು ಸಮಾಜದ ಒಗ್ಗಟ್ಟು, ಸಮಾಜದ ಅಭಿವೃದ್ಧಿಯ ಬಗ್ಗೆ ನಾವೆಲ್ಲರೂ ಒಂದಾಗಿ ಚಿಂತಿಸಬೇಕಾಗಿದೆ
– ಐಕಳ ಹರೀಶ್ ಶೆಟ್ಟಿ (ಉಪಾಧ್ಯಕ್ಷರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ). ಸಂಘದ ಮಾಜಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಮುತುವರ್ಜಿಯಿಂದ ಪ್ರಾದೇಶಿಕ ಸಮಿತಿಗಳು ಪ್ರಾರಂಭವಾಗಿವೆ. ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿ ಸಂಘದ ಕಾರ್ಯಕ್ರಮಗಳನ್ನು ಸಮಾಜ ಬಾಂಧವರ ಮನೆ-ಮನಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ ಎನ್ನಲು ಸಂತೋಷವಾಗುತ್ತಿದೆ. ನಾವು ಇದೇ ರೀತಿ ಒಗ್ಗಟ್ಟಿನಿಂದ ಸಮಾಜಪರ ಕಾರ್ಯಗಳನ್ನು ಮಾಡೋಣ
– ಇಂದ್ರಾಳಿ ದಿವಾಕರ ಶೆಟ್ಟಿ (ಸಮನ್ವಯಕರು: ಬಂಟರ ಸಂಘ ಮಧ್ಯ ಪ್ರಾದೇಶಿಕ ಸಮಿತಿಗಳು). ಸಮಾಜದವರು ರಾಜಕೀಯ ನಾಯಕರಾಗಿ ಮುಂದುವರಿಯಲು ಇಚ್ಛಿಸಿದ್ದಲ್ಲಿ ಅವರಿಗೆ ಪ್ರೋತ್ಸಾಹ ನೀಡಬೇಕು. ಈ ಸಮಿತಿಯಿಂದ ಪರಿಸರದಲ್ಲಿ ಶಿಕ್ಷಣ ಸಂಸ್ಥೆಯೊಂದು ಶೀಘ್ರದಲ್ಲೇ ನಿರ್ಮಾಣಗೊಂಡು ಸಮಾಜ ಬಾಂಧವರ ಮಕ್ಕಳಿಗೆ ಸಹಕಾರಿಯಾಗಲಿ. ಈ ಸಮ್ಮಾನದಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ನೀವೆಲ್ಲರೂ ನನ್ನ ಮೇಲಿಟ್ಟಿರುವ ಗೌರವ, ಅಭಿಮಾನಕ್ಕೆ ಕೃತಜ್ಞನಾಗಿದ್ದೇನೆ
– ಕರ್ನಿರೆ ವಿಶ್ವನಾಥ ಶೆಟ್ಟಿ (ನಿಕಟಪೂರ್ವ ಅಧ್ಯಕ್ಷರು: ಬಂಟರ ಸಂಘ ಮುಂಬಯಿ.