Advertisement

 ಬಂಟ್ಸ್‌  ಅಸೋಸಿಯೇಶನ್‌ ಪುಣೆ ವಾರ್ಷಿಕ ಮಹಾಸಭೆ

05:11 PM Oct 03, 2018 | Team Udayavani |

ಪುಣೆ: ಬಂಟ್ಸ್‌  ಅಸೋಸಿ ಯೇಶನ್‌ ಪುಣೆ ಇದರ  ವಾರ್ಷಿಕ ಮಹಾಸಭೆಯು ಸೆ. 30 ರಂದು ನಗರದ ಪೂನಾ ಕ್ಲಬ್‌ ಕಾನ್ಪರೆನ್ಸ್‌ ಹಾಲ್‌ ನಲ್ಲಿ ಸಂಘದ ಅಧ್ಯಕ್ಷ ನಾರಾಯಣ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ  ನಡೆಯಿತು.

Advertisement

ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆ  ನೀಡಲಾಯಿತು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ  ನಾರಾಯಣ ಕೆ. ಶೆಟ್ಟಿ, ಮಾಜಿ ಅಧ್ಯಕ್ಷ ಜಯ ಶೆಟ್ಟಿ ಮಿಯ್ನಾರ್‌, ಉಪಾಧ್ಯಕ್ಷರಾದ ಸುರೇಶ್‌ ಶೆಟ್ಟಿ, ಆನಂದ್‌ ಶೆಟ್ಟಿ ಮಿಯ್ನಾರು, ಪ್ರಧಾನ ಕಾರ್ಯದರ್ಶಿ ರೋಹಿತ್‌ ಶೆಟ್ಟಿ ನಗ್ರಿ ಗುತ್ತು, ಕೋಶಾಧಿಕಾರಿ ಅರವಿಂದ ರೈ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಲ್ಲಿಕಾ ಆನಂದ್‌ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ದೀಪಾ ಅರವಿಂದ್‌ ರೈ, ಕಾರ್ಯದರ್ಶಿ ಉಷಾ ಉÇÉಾಸ್‌ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ರೋಹಿತ್‌ ಡಿ. ಶೆಟ್ಟಿ ನಗ್ರಿಗುತ್ತು ವಾರ್ಷಿಕ ಕಾರ್ಯ ಚಟುವಟಿಕೆಗಳ ವರದಿಯನ್ನು ಸಭೆಯ ಮುಂದಿಟ್ಟರು. ಮಹಿಳಾ ವಿಭಾ ಗದ ವರದಿಯನ್ನು ಕಾರ್ಯದರ್ಶಿ ಉಷಾ ಯು. ಶೆಟ್ಟಿ ಪ್ರಸ್ತುತಪಡಿಸಿದರು. ಕೋಶಾಧಿಕಾರಿ ಅರವಿಂದ ರೈ ವಾರ್ಷಿಕ ಲೆಕ್ಕಪತ್ರವನ್ನು ಮಂಡಿ ಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಲೆಕ್ಕಪತ್ರ  ಅನುಮೋದಿಸಲಾಯಿತು.

ಈ ಸಂದರ್ಭ 2018-2020 ರ ಅವಧಿಗೆ ಸಂಘದ ನೂತನ ಅಧ್ಯಕ್ಷ ರನ್ನಾಗಿ  ಹೊಟೇಲ್‌ ಉದ್ಯಮಿ ಆನಂದ್‌ ಶೆಟ್ಟಿ ಮಿಯ್ನಾರ್‌ ಅವರನ್ನು  ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಗೊಳಿಸಲಾಯಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯನ್ನಾಗಿ ದೀಪಾ ಆರವಿಂದ್‌ ರೈ ಅವರನ್ನು ಆಯ್ಕೆಗೊಳಿಸಲಾಯಿತು. ಅದೇ ರೀತಿ ಯುವ ವಿಭಾಗದ ಕಾರ್ಯಾಧ್ಯಕ್ಷರನ್ನಾಗಿ ಕು| ನಮ್ರತಾ ಜೆ. ಶೆಟ್ಟಿಯವರನ್ನು ಆಯ್ಕೆಗೊಳಿಸಲಾಯಿತು. ಮುಂದಿನ ಅವಧಿಗೆ ನೂತನ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗಗಳಿಗೆ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.

ಈ ಸಂದರ್ಭ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಆನಂದ್‌ ಶೆಟ್ಟಿ ಮಿಯ್ನಾರು  ಮಾತನಾಡಿ, ಸಂಘದ ಸ್ಥಾಪನೆಯಂದಿನಿಂದಲೂ ನಾವೆಲ್ಲರೂ ಒಗ್ಗಟ್ಟಾಗಿದ್ದುಕೊಂಡು ಸಂಘವನ್ನು ಮಾದರಿಯಾಗಿ ನಡೆಸಿಕೊಂಡು  ಬಂದಿದ್ದೇವೆ. ಸಂಘದ ಮಾಜಿ ಅಧ್ಯಕ್ಷರುಗಳೂ ಸಂಘವನ್ನು ಉತ್ತಮವಾಗಿ ಮುನ್ನಡೆಸುವಲ್ಲಿ ಶ್ರಮಿಸಿ¨ªಾರೆ. ಅದೇ ರೀತಿ ಇಂದು ನನ್ನ ಮೇಲೆ ಪ್ರೀತಿ, ವಿಶ್ವಾಸ ಗಳನ್ನಿಟ್ಟು ಸಂಘದ ಜವಾಬ್ದಾರಿ ಸ್ಥಾನವನ್ನು ನೀಡಿರುವುದಕ್ಕಾಗಿ ಎಲ್ಲರಿಗೂ ವಂದನೆಗಳು. ಪ್ರತಿಯೊಬ್ಬರೂ ಮುಂಬರುವ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ  ನಮ್ಮದೇ  ಸಂಘವೆಂಬ ನೆಲೆಯಲ್ಲಿ ಭಾಗವಹಿಸಿ, ಬೆಂಬಲಿಸಿ ಸಂಘವನ್ನು ಬಲಪಡಿಸುವಲ್ಲಿ  ನಮ್ಮೊಂದಿಗೆ ಕೈಜೋಡಿಸಿ ಎಂದು ಅವರು ಹೇಳಿದರು.

Advertisement

ಸಂಘದ ನಿರ್ಗಮನ ಅಧ್ಯಕ್ಷ ನಾರಾಯಣ ಕೆ. ಶೆಟ್ಟಿ ಅವರು ಮಾತನಾಡಿ, ನಮ್ಮ ಸಂಘವು ಯಾವ ಉದ್ದೇಶದಿಂದ ಸ್ಥಾಪನೆಯಾಗಿದೆಯೋ ಆ ಉದ್ದೇಶವನ್ನು ಸಾರ್ಥಕಗೊಳಿಸುವತ್ತ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಾ ಸಮಾಜ ಬಾಂಧವರ ಒಗ್ಗಟ್ಟಿಗೆ ಶ್ರಮಿಸಿ  ಪ್ರೀತಿ ವಿಶ್ವಾಸಗಳಿಸುತ್ತಾ  ಸಾಗಿಬಂದಿರುವುದು ನಮಗೆಲ್ಲ ಹೆಮ್ಮೆಯಾಗುತ್ತಿದೆ ಎಂದು ಅವರು ಹೇಳಿದರು. ನಮ್ಮ  ಕಾರ್ಯಾವಧಿಯಲ್ಲಿ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ಕ್ರೀಡಾ  ಕಾರ್ಯ ಕ್ರಮಗಳನ್ನು ಆಯೋ ಜಿಸುತ್ತಾ ಸಮಾಜ ಬಾಂಧವರ ಒಗ್ಗಟ್ಟಿಗೆ   ಅವಿರತ ಪ್ರಯತ್ನವನ್ನು ಮಾಡಿದೆ. ಒಂದು ಸಂಸ್ಥೆ ವ್ಯವಸ್ಥಿತವಾಗಿ ನಡೆಯಬೇಕಾದರೆ ಪರಸ್ಪರ ಸಹಕಾರ, ಬೆಂಬಲದ ಅಗತ್ಯತೆಯಿದೆ. ಸಂಘದ ಮಾಜಿ ಅಧ್ಯಕ್ಷರುಗಳ, ಸಮಿತಿಯ ಎಲ್ಲ  ಪದಾಧಿಕಾರಿಗಳ, ಮಹಿಳಾ ವಿಭಾಗ, ಯುವ ವಿಭಾಗ, ಹಿರಿ ಕಿರಿಯರೆಲ್ಲರ ಸಹಕಾರದಿಂದ ಹಾಗೂ ಸದಸ್ಯ ರೆಲ್ಲರ ಪ್ರೋತ್ಸಾಹ, ಬೆಂಬಲದಿಂದ ಸಂಘದ ವೈವಿಧ್ಯಮಯ ಕಾರ್ಯ ಚಟುವಟಿಕೆಗಳು  ಸಾಧ್ಯವಾಗಿದ್ದು, ಅವರಿಗೆಲ್ಲರಿಗೂ ಈ ಸಂದರ್ಭದಲ್ಲಿ  ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಸಮಾಜದಲ್ಲಿ ಒಳಿತು, ಕೆಡುಕು ಗಳು ಸಹಜ. ಆದರೆ ಒಳಿತನ್ನು ಸ್ವೀಕರಿಸಿಕೊಂಡು ನಮ್ಮೊ ಳಗೆ ಯಾವುದೇ ಭಿನ್ನಾಭಿಪ್ರಾಯಗಳನ್ನು  ಬೆಳೆಸಿ ಕೊಳ್ಳದೆ ಸಮಾಜದ ಹಿತಕ್ಕಾಗಿ ಸಾಮಾಜಿಕ ಬದ್ಧತೆಯೊಂದಿಗೆ ನಿಸ್ವಾರ್ಥವಾಗಿ ನಮ್ಮನ್ನು ಸಂಸ್ಥೆಯೊಂದಿಗೆ ತೊಡಗಿಸಿ ಕೊಂಡಾಗ ಸಂಸ್ಥೆ ಪ್ರಗತಿಯತ್ತ ಸಾಗಲು ಸಾಧ್ಯ. ಮುಂದೆ ಆನಂದ್‌ ಶೆಟ್ಟಿಯವರ ನೇತೃತ್ವದಲ್ಲಿ ಸಂಸ್ಥೆ  ಯಶೋಭಿವೃದ್ಧಿಯತ್ತ ಸಾಗಲಿ. ನಾವೆಲ್ಲರೂ ಸಹಭಾಗಿತ್ವದಿಂದ ಅವರನ್ನು ಬೆಂಬಲಿಸೋಣ. ನಮ್ಮದೇ ಸಂಸ್ಥೆ ಎಂಬ ಹೆಮ್ಮೆ ನಮ್ಮದಾಗಿರಲಿ ಎಂದು ಅವರು ನುಡಿದರು.

ರೋಹಿತ್‌ ಡಿ. ಶೆಟ್ಟಿ ನಗ್ರಿಗುತ್ತು ಅವರು ಮಾತನಾಡಿ,  ಕಳೆದೆರಡು ವರ್ಷದಿಂದ ನಮ್ಮೊಂ ದಿಗೆ ಸಂಘದ ಎÇÉಾ ಕಾರ್ಯಕ್ರಮಗಳಿಗೂ ಬೆಂಬಲಿಸಿದ ಮಾಜಿ ಅಧ್ಯಕ್ಷರು ಗಳು, ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸದಸ್ಯ ರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಮಗೆ ಯಾವುದೇ ಪದ, ಅಧಿಕಾರ  ಮುಖ್ಯವಲ್ಲ. ಸಂಘ ಎಲ್ಲಕಿಂತ ಮುಖ್ಯ ವಾಗಿ ದ್ದು ಸಂಘದ ಅಭಿವೃದ್ಧಿಗಾಗಿ ನಾವೆಲ್ಲರೂ ಒಗ್ಗಟ್ಟಿ ನಿಂದ ತೊಡಗಿಸಿಕೊಳ್ಳೋಣ. ಮುಂದಿನ ನೂತನ ಕಾರ್ಯಕಾರಿ ಸಮಿತಿಗೆ ಅಭಿನಂದನೆಗಳು ಎಂದರು.

ಮಾಜಿ ಅಧ್ಯಕ್ಷ  ಕಟ್ಟಿಂಗೇರಿಮನೆ ಸುಭಾಶ್ಚಂದ್ರ ಹೆಗ್ಡೆ, ಜಯ ಶೆಟ್ಟಿ ಮಿಯ್ನಾರು, ಸಲಹಾ ಸಮಿತಿಯ ಉಷಾಕುಮಾರ್‌ ಶೆಟ್ಟಿ, ಗಣೇಶ್‌ ಹೆಗ್ಡೆ, ಅರವಿಂದ ರೈ, ನೂತನ ಮಹಿಳಾ ಕಾರ್ಯಾಧ್ಯಕ್ಷೆ ದೀಪಾ ಎ. ರೈ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ನೂತನ ಅಧ್ಯಕ್ಷ ಆನಂದ್‌  ಶೆಟ್ಟಿಯವರಿಗೆ ನಿರ್ಗಮನ ಅಧ್ಯಕ್ಷ  ನಾರಾಯಣ  ಶೆಟ್ಟಿಯವರು  ಪುಷ್ಪಗುತ್ಛ ನೀಡಿ ಅಭಿನಂದಿಸಿದರು. ಹವ್ಯಾಸಿ ಕಲಾವೃಂದ ಪಿಂಪ್ರಿ  ಚಿಂಚಾÌಡ್‌, ಸುಭಾ ಶ್ಚಂದ್ರ ಹೆಗ್ಡೆ ಕಟ್ಟಿಂಗೇರಿಮನೆ, ಜಯ ಶೆಟ್ಟಿ ಮಿಯ್ನಾರು, ದಿನೇಶ್‌ ಶೆಟ್ಟಿ ಬಜ ಗೋಳಿ ಮತ್ತಿತರ ಗಣ್ಯರು ನೂತನ ಅಧ್ಯ ಕ್ಷ ಆನಂದ್‌ ಶೆಟ್ಟಿಯವರಿಗೆ ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.

ಅದೇ ರೀತಿ ನೂತನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೀಪಾ ರೈ ಯವರಿಗೆ ನಿರ್ಗ ಮನ ಕಾರ್ಯಾಧ್ಯಕ್ಷೆ ಮಲ್ಲಿಕಾ ಜೆ. ಶೆಟ್ಟಿ  ಹಾಗೂ  ಯುವ ವಿಭಾಗದ ಕಾರ್ಯಾಧ್ಯಕ್ಷೆ ನಮ್ರತಾ ಜೆ. ಶೆಟ್ಟಿಯವರಿಗೆ ಉಷಾ ಯು. ಶೆಟ್ಟಿ  ಪುಷ್ಪಗುತ್ಛ ನೀಡಿ ಅಭಿನಂದಿಸಿದರು. ರೋಹಿತ್‌ ಶೆಟ್ಟಿ  ಸ್ವಾಗತಿಸಿದರು. ಲತಾ ಸುಧಾಕರ್‌ ಶೆಟ್ಟಿ ಪ್ರಾರ್ಥಿಸಿದರು.  ಲೋಹಿತ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮಹಾಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು. 

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next