Advertisement
ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಎ. 14ರಂದು ಸಂಜೆ ಜರಗಿದ ಬಿಸುಪರ್ಬ, ಬಂಟರ ದಿನಾಚರಣೆ, ಶ್ರೀ ಮಹಾವಿಷ್ಣು ಬಂಟ ಯಕ್ಷಕಲಾ ವೇದಿಕೆಯ ವಾರ್ಷಿ
Related Articles
Advertisement
ಸಮಾರಂಭದಲ್ಲಿ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಪ್ರತೀ ವರ್ಷ ನೀಡುವ ಯಕ್ಷಕಲಾವಿದ ಕಣಂಜಾರು ಆನಂದ ಶೆಟ್ಟಿ ಸ್ಮಾರಕ-2021 ಪ್ರಶಸ್ತಿಯನ್ನು ಯಕ್ಷಗಾನದ ಖ್ಯಾತ ಮದ್ದಳೆ ವಾದಕ ಆನಂದ ಶೆಟ್ಟಿ ಇನ್ನ ಅವರಿಗೆ, ಕಣಂಜಾರು ಆನಂದ ಶೆಟ್ಟಿ ಸ್ಮಾರಕ-2022 ಪ್ರಶಸ್ತಿಯನ್ನು ಯಕ್ಷಕಲಾವಿದ, ಸಂಘಟಕ, ಯಕ್ಷಗುರು ಬಾಲಕೃಷ್ಣ ಶೆಟ್ಟಿ ಅಜೆಕಾರು ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಕರ್ನೂರು ಮೋಹನ್ ರೈ, ಬಿ. ವಿವೇಕ್ ಶೆಟ್ಟಿ, ಸಂತೋಷ್ ಶೆಟ್ಟಿ ಪುಣೆ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಆದರ್ಶ್ ಶೆಟ್ಟಿ ಹಾಲಾಡಿ, ಕಣಂಜಾರು ಆನಂದ ಶೆಟ್ಟಿ ಕುಟುಂಬಿಕರಾದ ಕೆ. ಕೆ. ಶೆಟ್ಟಿ, ರಂಜನಿ ಸುಧಾಕರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಬಂಟರ ಸಂಘದ ಮಹಿಳಾ ವಿಭಾಗ ಪ್ರತೀ ವರ್ಷ ನೀಡುವ ಪ್ರೇಮಾ ನಾರಾಯಣ ರೈ ಪ್ರಶಸ್ತಿಯನ್ನು ಈ ಬಾರಿ ಬ್ರೈನ್ ಟ್ರೈನರ್ ವಿಂದ್ಯಾ ತಿಲಕ್‌ರಾಜ್ ಬಲ್ಲಾಳ್ ಅವರಿಗೆ ಪ್ರದಾನ ಮಾಡಲಾಯಿತು. ಬಂಟರವಾಣಿಯ ಗೌರವ ಪ್ರಭಾರ ಸಂಪಾದಕ ಅಶೋಕ್ ಪಕ್ಕಳ, ಸಂಘದ ಮಹಿಳಾ ವಿಭಾಗದ ಸುಜಾತಾ ಗುಣಪಾಲ್ ಶೆಟ್ಟಿ ಪ್ರಶಸ್ತಿ ಪತ್ರವನ್ನು ವಾಚಿಸಿದರು. ಸುನೀತಾ ಎಂ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಪ್ರಶಸ್ತಿಯ ಪ್ರಾಯೋಜಕರಾದ ಜ್ಯೋತಿ ಆರ್. ಎನ್. ಶೆಟ್ಟಿ ಕುಟುಂಬಿಕರು ಉಪಸ್ಥಿತರಿದ್ದರು.
ಜಾನಪದ ನೃತ್ಯ ಸ್ಪರ್ಧೆಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು. ನಿರ್ಣಾಯಕರಾಗಿ ನೃತ್ಯ ಕ್ಷೇತ್ರದ ಮಧು ಸೂದನ್ ರಾವ್, ಕಲಾ ಸೌರಭದ ರೂವಾರಿ ಪದ್ಮನಾಭ ಸಸಿಹಿತ್ಲು ಸಹಕರಿಸಿ ದರು. ನಿರ್ಣಾಯಕರನ್ನು ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ವತಿಯಿಂದ ಗೌರವಿಸಲಾಯಿತು.
ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಆರ್. ಕೆ. ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ಸಿಎ ಹರೀಶ್ ಡಿ. ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಇತರ ಉಪಸಮಿತಿಗಳ ಪದಾಧಿಕಾರಿಗಳು, ಒಂಬತ್ತು ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸಮಾರಂಭದ ಯಶಸ್ಸಿಗೆ ಸಹಕರಿಸಿದರು.
ಸರೋಜಾ ಬಿ. ಶೆಟ್ಟಿ ಪ್ರಾರ್ಥನೆಗೈದರು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಭೋಜ ನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಜಾನಪದ ನೃತ್ಯ ಸ್ಪರ್ಧೆ ಫಲಿತಾಂಶ :
ಜಾನಪದ ನೃತ್ಯ ಸ್ಪರ್ಧೆ ಫಲಿತಾಂಶ ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿ ಪ್ರಥಮ, ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ ದ್ವಿತೀಯ ಹಾಗೂ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿ ತೃತೀಯ ಪುರಸ್ಕಾರವನ್ನು ಪಡೆಯಿತು.
ಬಂಟರ ಸಂಘ ಮುಂಬಯಿ ಸಮಾಜ ಸೇವಾ ಸಂಸ್ಥೆ ಮಹಾರಾಷ್ಟ್ರದಲ್ಲಿರುವ ಬಂಟ ಸಮಾಜದ ಮಾತೃ ಸಂಘ ಎನ್ನಲು ಅಭಿಮಾನವಾಗುತ್ತಿದೆ. ಇಂದು ಪ್ರಸ್ತುತಗೊಂಡ ನಮ್ಮ ಮಕ್ಕಳ ಸಾಂಸ್ಕೃತಿಕ ವೈವಿಧ್ಯ ನೋಡಿ ಸಂತೋಷವಾಯಿತು. ವರ್ಷದಿಂದ ವರ್ಷಕ್ಕೆ ಇಂತಹ ಕಾರ್ಯಕ್ರಮಗಳು ಪ್ರಬುದ್ಧಗೊಳ್ಳುತ್ತಾ ಬರುತ್ತಿದೆ. ನಾವಿಂದು ಇಂಡಿಯಾ ಗಾಟ್ ಟ್ಯಾಲೆಂಟ್‌ನಲ್ಲಿಯೂ ಭಾಗಿಯಾಗಲು ಅರ್ಹತೆ ಹೊಂದಿದ್ದೇವೆ. ನಮ್ಮ ಮಕ್ಕಳ ಒಂದು ಉತ್ತಮ ಸಾಂಸ್ಕೃತಿಕ ತಂಡವನ್ನು ಕಟ್ಟುವ ಬಗ್ಗೆ ಗಮನ ಹರಿಸಬೇಕು. ಬಂಟರ ಸಂಘವು ಬಂಟ ಸಮಾಜದ ಬ್ರ್ಯಾಂಡ್ ಆಗಿದೆ. ಸಂಘವು ಮುಂದಿನ ಐದು ವರ್ಷಗಳಲ್ಲಿ ನೂರು ವರ್ಷಗಳ ಸಂಭ್ರಮ ಆಚರಿಸಲಿದ್ದು, ಈ ಸಂಭ್ರಮಾಚರಣೆಗೆ ಸಮಿತಿ ರಚಿಸಬೇಕು. ಸಂಘದ ಮಹಿಳಾ ವಿಭಾಗವು ಹೊಸ ಯೋಜನೆ ಆರಂಭಿಸಲು ಮುಂದಾಗಬೇಕು. ಪ್ರಶಸ್ತಿ ಪುರಸ್ಕೃತರು ಅಭಿನಂದನಾರ್ಹರು.–ಬಿ. ವಿವೇಕ್ ಶೆಟ್ಟಿ, ಮಾಜಿ ಅಧ್ಯಕ್ಷರು, ಬಂಟರ ಸಂಘ ಮುಂಬಯಿ
ಪುಣೆ ಬಂಟರ ಭವನದ ಸ್ಥಾಪನೆಗೆ ಪ್ರೇರಣೆ ನೀಡಿದ ಮುಂಬಯಿ ಬಂಟರ ಹೃದಯ ವೈಶಾಲ್ಯ ಮೆಚ್ಚುವಂಥದು. ಇಂದಿನ ಸಾಂಸ್ಕೃತಿಕ ಕಾರ್ಯಕ್ರಮ ಅದ್ಭುತವಾಗಿತ್ತು. ಪ್ರೇಕ್ಷಕರ ಬೆಂಬಲ ಮಕ್ಕಳ ಪ್ರತಿಭಾ ವಿಕಸನಕ್ಕೆ ಮೂಲವಾಗಿದೆ. ಪುಣೆ ಬಂಟರ ಸಂಘದ ಪ್ರತಿನಿಧಿಯಾಗಿ ನನ್ನನ್ನು ಕರೆದಿದ್ದೀರಿ. ನಿಸ್ವಾರ್ಥ ಸಮಾಜ ಸೇವೆಯಿಂದ ಆತ್ಮತೃಪ್ತಿ ಪಡೆದಿದ್ದೇನೆ. ಪುಣೆ ಬಂಟರ ಸಂಘದ ವತಿಯಿಂದ ಎಲ್ಲರಿಗೂ ವಂದಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲ ಪುಣೆ ಬಂಟರ ಸಂಘಕ್ಕೂ ಸದಾಯಿರಲಿ.–ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು, ಅಧ್ಯಕ್ಷರು, ಬಂಟರ ಸಂಘ ಪುಣೆ
ಚಿತ್ರ-ವರದಿ: ಪ್ರೇಮನಾಥ ಶೆಟ್ಟಿ ಮುಂಡ್ಕೂರು