ಅಡಿಲೇಡ್: ಟಿವಿ ನಿರೂಪಕಿ, ಭಾರತ ಕ್ರಿಕೆಟ್ ತಂಡದ ಖ್ಯಾತ ವೇಗಿ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಸದ್ಯ ಆಸ್ಟ್ರೇಲಿಯದಲ್ಲಿದ್ದಾರೆ. ಟಿ20 ವಿಶ್ವಕಪ್ ಇರುವುದರಿಂದ ಅವರು ನೇರಪ್ರಸಾರದಲ್ಲಿ ಮಗ್ನರಾಗಿದ್ದಾರೆ. ಈ ನಡುವೆ ಸಾಮಾಜಿಕ ತಾಣ ಇನ್ಸ್ಟಾಗ್ರಾಮ್‌ನಲ್ಲಿ ಅಭಿಮಾನಿ ಮತ್ತು ಸಂಜನಾ ನಡುವೆ ನಡೆದ ವಾಕ್ಸಮರವೊಂದು ಬಹಳ ಗಂಭೀರವಾಗಿದೆ, ಅಷ್ಟೇ ನಗು ಬರಿಸುವಂತಿದೆ.
ಸಂಜನಾ ಮಂಗಳವಾರ ಅಡಿಲೇಡ್ ದಿ ಓವೆಲ್ ಮೈದಾನದಲ್ಲಿ ನಿಂತುಕೊಂಡು ಅಲ್ಲಿನ ವಾತಾವರಣ ಸುಂದರವಾಗಿದೆ ಎಂದು ಬರೆದುಕೊಂಡಿದ್ದರು. ಈ ನಡುವೆ ಅಭಿಮಾನಿಯೊಬ್ಬ ಪ್ರತಿಕ್ರಿಯಿಸಿ, ನೀವೇನು ನೋಡಲಿಕ್ಕೆ ಅಷ್ಟು ಸುಂದರವಾಗಿಲ್ಲ. ಆದರೂ ಬುಮ್ರಾರನ್ನು ಹೇಗೆ ಬುಟ್ಟಿಗೆ ಹಾಕಿಕೊಂಡಿರಿ ಎಂದು ಕೆಣಕಿದರು.
ಇದಕ್ಕೆ ತಕ್ಷಣ ಉತ್ತರಿಸಿದ ಸಂಜನಾ, ನೀನು ಚಪ್ಪಲಿ ತರಾ ಮುಖ ಇಟ್ಟುಕೊಂಡು ಊರೆಲ್ಲ ಸುತ್ತುತ್ತಾ ಇದ್ದೀಯ; ಅದರ ಬಗ್ಗೆ ಏನಂತಿ? ಎಂದು ಮರು ಪ್ರಶ್ನಿಸಿದರು! ಇದು ಸಾಮಾಜಿಕ ತಾಣದಲ್ಲಿ ಬಹಳ ಸದ್ದು ಮಾಡಿತು. ಮಾತ್ರವಲ್ಲ ತೀಕ್ಷ್ಣವಾಗಿ ಮತ್ತು ಅಷ್ಟೇ ತಮಾಷೆಯಾಗಿ ಅವರು ಉತ್ತರಿಸಿದ ಪರಿ ನಗುವನ್ನೂ ಹುಟ್ಟಿಸಿತು.