ಮುಂಬೈ: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಈ ವರ್ಷದ ಪಾಲಿ ಉಮ್ರಿಗರ್ ಪಶಸ್ತಿಗೆ ಭಾಜನರಾಗಿದ್ದಾರೆ. 2018-19 ವರ್ಷದ ಬಿಸಿಸಿಐ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದೆ.
ಭಾರತೀಯ ಕ್ರಿಕೆಟ್ ನ ಅವಿಭಾಜ್ಯ ಅಂಗವಾಗಿರುವ ಜಸ್ಪ್ರೀತ್ ಬುಮ್ರಾ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡಿದ್ದರು.
2018ರ ಜನವರಿಯಲ್ಲಿ ದಕ್ಷಿಣ ಆಪ್ರಿಕಾದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಬುಮ್ರಾ ಈ ಭಾರತದ ವೇಗದ ಬೌಲಿಂಗ್ ನ ಸಾರಥಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ೈದು ವಿಕೆಟ್ ಪಡೆದ ಏಕಮಾತ್ರ ಏಶ್ಯನ್ ಬೌಲರ್ ಎಂಬ ಖ್ಯಾತಿಗೆ ಬುಮ್ರಾ ಭಾಜನರಾಗಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಆಟಗಾರ್ತಿ ಎಂಬ ಗರಿಮೆಗೆ ಪೂನಂ ಯಾದವ್ ಆಯ್ಕೆಯಾಗಿದ್ದಾರೆ.
ಭಾರತದ ಮಾಜಿ ಆಟಗಾರ ಕೃಷ್ಣಮಚಾರಿ ಶ್ರಿಕಾಂತ್ ಮತ್ತು ಅಂಜುಂ ಚೋಪ್ರಾ ಅವರಿಗೆ ಕ್ರಮವಾಗಿ ಸಿ ಕೆ ನಾಯ್ಡು ಜೀವಮಾನದಶ್ರೇಷ್ಠ ಸಾಧನೆ ಪ್ರಶಸ್ತಿ ಮತ್ತು ಬಿಸಿಸಿಐ ಜೀವಮಾನದಶ್ರೇಷ್ಠ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.