ವಿಜಯಪುರ ಜಿಲ್ಲೆಗೂ ಬಂಪರ್ ಕೊಡುಗೆ ನೀಡಿದ್ದಾರೆ. ಬಜೆಟ್‌ನಲ್ಲಿ ವಿಜಯಪುರ ಜಿಲ್ಲೆಗೆ ಹಲವು ಕೊಡುಗೆ ಲಭ್ಯವಾಗಿದೆ. ಪ್ರಮುಖವಾಗಿ ಶತಮಾನ ಕಂಡಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶತಮಾನ ಭವನ ನಿರ್ಮಾಣಕ್ಕೆ ಸರ್ಕಾರ ಹಾಗೂ ಅಫೆಕ್ಸ್ ಬ್ಯಾಂಕ್ ಐದು ಕೋಟಿ ರೂ. ಸಹಾಯಧನ ಘೋಷಿಸಿದೆ.
Advertisement
ಇಂಡಿ ತಾಲೂಕಿನ ರೋಡಗಿ ಕ್ರಾಸ್ ಹಾಗೂ ತಾಳಿಕೋಟೆ ಬಳಿ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆ, ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ, ಕುರಿಗಾರರ ಅನುಕೂಲಕ್ಕಾಗಿ ಕುರಿ ರೋಗ ತಪಾಷಣಾ ಕೇಂದ್ರ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ಮುದ್ದೇಬಿಹಾಳದಲ್ಲಿ ಒಳಚರಂಡಿ ಯೋಜನೆಯ ಭಾಗ್ಯಗಳು ಲಭಿಸಿವೆ.
ಅಧಿಕಾರವಧಿಯ ಬಜೆಟ್‌ನಲ್ಲಿ ಏನನ್ನೂ ಹೇಳಿಲ್ಲ. ಬಜೆಟ್ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ.ಪಾಟೀಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಒಣಭೂಮಿ ರೈತರಿಗೆ ಹಲವು ನೆರವಿಗೆ ಯೋಜನೆ ಪ್ರಕಟಿಸಿರುವುದ ಕ್ರಾಂತಿಕಾರಕ ಹೆಜ್ಜೆ. ಭೀಕರ ಬರ ಎದುರಿಸುವ ಒಣ ಪ್ರದೇಶದ ರೈತರಿಗೆ ಗರಿಷ್ಠ 10 ಸಾವಿರ ರೂ. ನೆರವು, ರಾಜ್ಯದ ಹಲವು ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಜಲಸಂಪನ್ಮೂಲ ಇಲಾಖೆಗೆ 58,393 ಕೋಟಿ ರೂ. ಅನುದಾನ ನೀಡಿದ್ದಾರೆ. ಉಳವಿ ಸುತ್ತಲಿನ ಕೆರೆ ತುಂಬಿಸಲು ನಬಾರ್ಡ್‌ನಿಂದ 14 ಕೋಟಿ ರೂ. ಅನುದಾನ ನೀಡಿರುವುದು ರಾಜ್ಯದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿರುವ ಐತಿಹಾಸಿಕ ಬಜೆಟ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Related Articles
Advertisement
ಹಸಿ ಸುಳ್ಳಿನ ಬಜೆಟ್ ಬಜೆಟ್ ಹಸಿ ಸುಳ್ಳಿನ ಹುಸಿ ಬಜೆಟ್. ರಾಜ್ಯ ವಿಧಾನಸಭಾ ಚುನಾವಣೆಯನ್ನೇ ಗಮನದಲ್ಲಿ ಇರಿಸಿಕೊಂಡು 2,09,181 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿರುವುದು ಬೊಕ್ಕಸದ ಮೇಲೆ 1 ಲಕ್ಷ ಕೋಟಿ ರೂ. ಹೊರೆ ಹೇರಿದೆ. ರಾಜ್ಯದಲ್ಲಿ ನಿರುದ್ಯೋಗ ನಿವಾರಣೆಗೆ ಕ್ರಮ ಕೈಗೊಳ್ಳದ ನೀರಸ ಬಜೆಟ್.ಕೃಷ್ಣಾ ಗುನ್ನಾಳಕರ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಮುದ್ದೇಬಿಹಾಳಕ್ಕೆ ಕೆಎಸ್‌ಕೆ ಬಜೆಟ್‌ನಲ್ಲಿ ಮುದ್ದೇಬಿಹಾಳಕ್ಕೆ ಕೃಷಿ ಸಂಶೋಧನಾ ಕೇಂದ್ರದ ಭಾಗ್ಯ ಕಲ್ಪಿಸಿದ್ದು, ಸ್ವಾಗತಾರ್ಹ ಕ್ರಮ. ಇದರಿಂದ ಜಿಲ್ಲೆಯ ರೈತರಿಗೆ, ಅದರಲ್ಲೂ ಮುದ್ದೇಬಿಹಾಳ ಭಾಗದ ರೈತರು ಮಾಹಿತಿ, ಸೌಲಭ್ಯ ಪಡೆಯಲು ಸಾಕಷ್ಟು ಅನುಕೂಲವಾಗಲಿದೆ.
ಮಲ್ಲಪ್ಪ ಬಿದರಿ, ಅಧ್ಯಕ್ಷರು, ಪ್ರಕೃತಿ ಕೃಷಿಕರ ಸಂಸ್ಥೆ ಸಾವಯವ ಕೃಷಿಗೆ ಪ್ರೋತ್ಸಾಹ ಕೃಷಿ ಪೂರಕ ಅತ್ಯುತ್ತಮ ಬಜೆಟ್ ಎನಿಸಿದೆ. ಕೃಷಿ-ತೋಟಗಾರಿಕೆ ಮಾತ್ರವಲ್ಲದೇ ಸಿರಿಧಾನ್ಯಗಳ ಬೆಳೆಗೆ ಪ್ರೋತ್ಸಾಹಕ್ಕೆ ಮುಂದಾಗಿರುವುದು ರೈತರಿಗೆ ಅನುಕೂಲವಾಗಲಿದೆ. ಜೊತೆಗೆ ಜಿಲ್ಲೆಗೆ ಹಲವು ಕೊಡುಗೆ ನೀಡಿದ್ದು, ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ ಭಾಗ್ಯ ನೀಡಿರುವುದು ಸಾವಯವ ಬೆಳೆ ಉತ್ಪಾದಿಸಲು ನೆರವಾಗಲಿದೆ.
ದೀಪಾ ಮಲ್ಲಿಕಾರ್ಜುನ, ಪ್ರಗತಿಪರ ಕೃಷಿ ಮಹಿಳೆ ವಿದ್ಯಾರ್ಥಿಪರ ಬಜೆಟ್ ಶೈಕ್ಷಣಿಕ ವರ್ಷದಿಂದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ, ವಿದ್ಯಾರ್ಥಿನಿಯರಿಗೆ ಸ್ನಾತ್ತಕೋತ್ತರ ಪದವಿ ಉಚಿತ ಶಿಕ್ಷಣ ನೀಡುವ ಘೋಷಣೆಗಳು ಸ್ವಾಗತಾರ್ಹವಾಗಿವೆ. ವಿದ್ಯಾರ್ಥಿ ಪರವಾಗಿರುವ ಈ ಬಜೆಟ್ ಅನುಷ್ಠಾನಕ್ಕೆ ಬರಬೇಕು.
ಸುನೀಲ ಸಿದ್ರಾಮಶಟ್ಟಿ, ಎಐಡಿಎಸ್‌ಒ ವಿಜಯಪುರ ರೈತ ಕುಟುಂಬಕ್ಕೆ ನೆರವು ಚುನಾವಣೆ ಪೂರ್ವದಲ್ಲಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲಿ ಅನುಷ್ಠಾನ ಅಸಾಧ್ಯವಾದ ಅನುಮಾನದ ಬಜೆಟ್. ಇದರ ಹೊರತಾಗಿಯೂ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳ ನೆರವಿಗೆ ಧಾವಿಸುವ ಯೋಜನೆ ಪ್ರಕಟಿಸಿದ್ದು ಸ್ವಾಗತಾರ್ಹ. ನೀರಾವರಿಗೆ 16 ಸಾವಿರ ಕೋಟಿ ರೂ. ಮೀಸಲಿರಿಸಿದ್ದು, ಕೃಷಿ ಸಹಕಾರಿ ಬ್ಯಾಂಕ್‌ನಲ್ಲಿ ರೈತರ ಸಾಲ ಮನ್ನಾ ಮಾಡಿರುವುದು ಸಂತಸದ ಸಂಗತಿ.
ರೇಶ್ಮಾ ಪಡೇಕನೂರ, ಜೆಡಿಎಸ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಪ್ರಗತಿಪರ-ಜನಪರ
ಬಜೆಟ್ ಎಲ್ಲ ವರ್ಗದ ಹಾಗೂ ಹಲವು ರಂಗಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿರುವ ಪ್ರಗತಿಪರ ಹಾಗೂ ಜನಪರ ಬಜೆಟ್. ಸಮಾಜದಲ್ಲಿರುವ ಶೋಷಿತರು, ರೈತರು, ಮಹಿಳೆಯರು, ವಿದ್ಯಾರ್ಥಿ ಹೀಗೆ ಎಲ್ಲರನ್ನೂ ಗಮನದಲ್ಲಿರಿಸಿ ಮಂಡಿಸಿದ ಬಜೆಟ್.
ವಸಂಗ ಹೊನಮೋಡೆ,ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಗೊತ್ತು-ಗುರಿ ಇಲ್ಲ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಜನವಿರೋಧಿ ಬಜೆಟ್. ಗೊತ್ತು ಗುರಿ ಇಲ್ಲದ ನಿರಾಸೆಯ ಬಜೆಟ್ ಇದಾಗಿದೆ.
ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವ ಸಂವಿಧಾನ ಆಶಯ ಈಡೇರಿಸಿದ ಬಜೆಟ್ ಬಜೆಟ್ ರೈತ, ದಲಿತ, ಮಹಿಳೆ ಹಾಗೂ ಎಲ್ಲ ಸಣ್ಣಪುಟ್ಟ ಜಾತಿಗಳನ್ನೊಳಗೊಂಡು ಅಭಿವೃದ್ಧಿಗೆ ಆದ್ಯತೆ ನೀಡಿ ಸಂವಿಧಾನದ ಆಶಯ ಈಡೇರಿಸಿದ ಬಜೆಟ್. ಜಿಲ್ಲೆಗೂ ಹಲವು ಸೌಲಭ್ಯ ಕಲ್ಪಿಸಿರುವುದು ಅಭಿನಂದನಾರ್ಹ ಕ್ರಮ.
ಅಡಿವೆಪ್ಪ ಸಾಲಗಲ್, ರಾಜ್ಯಾಧ್ಯಕ್ಷ, ದಲಿತ ಸಮನ್ವಯ ಸಮಿತಿ ನಿರಾಶಾದಾಯಕ
ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಿರಾಶಾದಾಯಕವಾಗಿದೆ. ರಾಜ್ಯದ ರೈತರ ಸಾಲ ಮನ್ನಾ ಆಸೆಗೆ ತಣ್ಣೀರೆರಚಿದಂತಾಗಿದೆ. ರಾಜ್ಯದ ಯುವಕರಿಗೆ ಉದ್ಯೋಗ ಭಾಗ್ಯವಿಲ್ಲ. ಸಾಮಾನ್ಯ ಪ್ರಜೆಗಳಿಗೆ ಯಾವುದೇ ಲಾಭವಾಗಿಲ್ಲ.
ಬಾಬುಗೌಡ ಬಿರಾದಾರ, ಬಿಜೆಪಿ ಮುಖಂಡ