Advertisement

ಎಲ್‌ಐಸಿ ನೌಕರನ ಮನೆ ಮೇಲೆ ಗುಂಡಿನ ದಾಳಿ

07:00 AM Jul 31, 2018 | Team Udayavani |

ಮಡಿಕೇರಿ: ನಗರದ ಫೀ. ಮಾ. ಕಾರ್ಯಪ್ಪ ಕಾಲೇಜು ಹಿಂಭಾಗದಲ್ಲಿರುವ ಜೀವ ವಿಮಾ ನಿಗಮದ ಉದ್ಯೋಗಿ
ಜನಾರ್ದನ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.

Advertisement

ಜು. 30ರ ಬೆಳಗಿನ ಜಾವ 3 ಗಂಟೆಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಾಡ ಬಂದೂಕಿನಿಂದ ಗಾಳಿಯಲ್ಲಿ ಎರಡು
ಸುತ್ತು ಗುಂಡು ಹಾರಿಸಿದ್ದಾರೆ. ಶಬಟಛಿ ಕೇಳಿ ಎಚ್ಚರಗೊಂಡ ಜನಾರ್ದನ ಹೊರ ಬಂದು ಬೆಳಕು ಹಾಯಿಸಿದಾಗದುಷ್ರ್ಮಿಗಳು ಮತ್ತೂಂದು ಗುಂಡನ್ನು ಮನೆಯತ್ತ ಹಾರಿಸಿ ಸ್ಥಳದಿಂದ ಪರಾರಿಯಾದರು.

ಇದರಿಂದ ಕಿಟಕಿಯ ಗಾಜುಗಳು ಪುಡಿಯಾಗಿವೆ ಹಾಗೂ ಫ್ರೆàಮ್‌ಗಳಿಗೆ ಗುಂಡಿನ ಚೂರುಗಳು ಹೊಕ್ಕಿವೆ. ಜನಾರ್ದನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುಷ್ಕರ್ಮಿಗಳು ಗುಂಡನ್ನು ಯಾವ ಕಾರಣಕ್ಕೆ ಹಾರಿಸಿದರು ಎಂಬ ಮಾಹಿತಿ ಲಭ್ಯವಾಗಿಲ್ಲ. ಮಡಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next