Advertisement

ಚಂದ್ರ, ಮಂಗಳನಲ್ಲಿಗೆ ಬುಲೆಟ್‌ ಟ್ರೈನ್‌!

12:36 PM Jul 18, 2022 | Team Udayavani |

ಟೋಕಿಯೋ: ಮುಂದೊಂದು ದಿನ ನೀವು ಚಂದ್ರನ ಮೇಲೆ ಹೋಗಬೇಕೆಂದರೆ ಬುಲೆಟ್‌ ಟ್ರೈನ್‌ ಹತ್ತಬೇಕಾಗುತ್ತದೆ!ಹೌದು ಜಪಾನ್‌ನ ವಿಜ್ಞಾನಿಗಳು ಇದೀಗ ಚಂದ್ರ ಮತ್ತು ಮಂಗಳನಲ್ಲಿಗೆ ಟ್ರೈನ್‌ ಕಳುಹಿಸುವ ಸಿದ್ಧತೆಯಲ್ಲಿದ್ದಾರೆ.

Advertisement

ಬಾಹ್ಯಾಹಾಶಕ್ಕೆ ಮನುಷ್ಯರನ್ನು ಕಳುಹಿಸಲೆಂದೇ ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೆಕ್ಸಾಟ್ರ್ಯಾಕ್‌ ನಿರ್ಮಿಸುತ್ತಿದ್ದಾರೆ. ಅಲ್ಲಿಗೆ ತೆರಳುವ ರೈಲಿಗೆ “ಸ್ಪೇಸ್‌ ಎಕ್ಸ್‌ಪ್ರೆಸ್‌’ ಎಂದು ಕರೆಯಲಾಗಿದೆ.

ರೈಲಿನಲ್ಲಿ ಷಡ್ಭುಜೀಯ ಕ್ಯಾಪ್ಸುಲ್‌ಗ‌ಳು ಇರಲಿವೆ. 15 ಮೀಟರ್‌ ತ್ರಿಜ್ಯವಿರುವ ಕ್ಯಾಪ್ಸುಲ್‌ ಭೂಮಿಯಿಂದ ಚಂದ್ರನನ್ನು ಸಂಪರ್ಕಿಸಿದರೆ, 30 ಮೀಟರ್‌ ತ್ರಿಜ್ಯವಿರುವ ಕ್ಯಾಪುಲ್‌ ಚಂದ್ರನಿಂದ ಮಂಗಳ ಗ್ರಹವನ್ನು ಸಂಪರ್ಕಿಸಲಿದೆ.

ಚಂದ್ರನಲ್ಲಿ ಮತ್ತು ಮಂಗಳನಲ್ಲಿ ರೈಲ್ವೆ ನಿಲ್ದಾಣ ಸ್ಥಾಪಿಸಲಾಗುವುದು. ಅಲ್ಲಿ ಗಾಜಿನ ವಿನ್ಯಾಸ ರೂಪಿಸಿ ಅದರೊಳಗೆ ಭೂಮಿಯಂತೆಯೇ ಕೃತಕ ಗುರುತ್ವಾಕರ್ಷಣೆ, ವಾತಾವರಣ ಸೃಷ್ಟಿಸಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 2050ರ ವೇಳೆಗೆ ಇದರ ಮಾದರಿ ನಿರ್ಮಾಣ ಮಾಡಿ ತೋರಿಸುವುದಾಗಿ ತಿಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next