Advertisement

ಪದೇ ಪದೇ ದಂಡ ಕಟ್ಟುತ್ತಿರುವ ಬುಲೆಟ್‌ ಸವಾರ!

03:56 PM May 05, 2023 | Team Udayavani |

ಉಡುಪಿ: ಹಳೆಯ ಬುಲೆಟ್‌ ಬೈಕ್‌ನ ಸೈಲೆನ್ಸರ್‌ ಹೆಚ್ಚುವರಿಯಾಗಿ ಅಳವಡಿಕೆ ಮಾಡಲಾಗಿದೆ ಎಂದು ಬುಲೆಟ್‌ ಸವಾರರೊಬ್ಬರು ಪದೇ ಪದೇ ದಂಡ ಕಟ್ಟುವಂತಾಗಿದೆ.

Advertisement

ಪೆರಂಪಳ್ಳಿಯ ಸೀತಾರಾಮ ಕುಂದರ್‌ ಅವರು 2000ನೇ ಇಸವಿಯ ಬುಲೆಟ್‌ ಬೈಕ್‌ ಹೊಂದಿದ್ದಾರೆ. ಅವರ ಬುಲೆಟ್‌ನಲ್ಲಿ ಕಂಪೆನಿಯೇ ಅಳವಡಿಕೆ ಮಾಡಿದ ಸೈಲೆನ್ಸರ್‌ ಇದ್ದು, ಅದು ಈಗಿನ ಕಾನೂನಿಗೆ ವಿರುದ್ಧವಾದಂತಿದೆ.

ಆರ್‌ಟಿಒ ದಲ್ಲಿ ಪಾಸಿಂಗ್‌ ಮಾಡುವ ವೇಳೆಯೂ ಯಾವುದೇ ಸಮಸ್ಯೆಯಾಗಲಿಲ್ಲವಂತೆ. ಆದರೆ ಪೊಲೀಸರು ಮಾತ್ರ ಇದು ಹೆಚ್ಚುವರಿ ಅಳವಡಿಕೆ ಮಾಡಲಾಗಿದೆ ಎನ್ನುವ ಕಾರಣಕ್ಕೆ ದಂಡ ವಿಧಿಸುತ್ತಿದ್ದಾರೆ. ಶೋರೂಂನವರೂ ಇದು ಒರಿಜಿನಲ್‌ ಎಂದು ಹೇಳುತ್ತಿದ್ದಾರೆ. ಆದರೂ ದಂಡ ಏಕೆ ಎಂಬುವುದು ಸೀತಾರಾಮ ಅವರ ಪ್ರಶ್ನೆ!

Advertisement

Udayavani is now on Telegram. Click here to join our channel and stay updated with the latest news.

Next