Advertisement
ಮಹಾಬಲೇಶ್ವರದ ಮಲ್ಕಾಮ್ ಪೇಠ್ ಪ್ರದೇಶದಲ್ಲಿನ ಮಹಾಬಲೇಶ್ವರ ಪಾರ್ಸಿ ಜಿಮ್ಖಾನಾ (ಎಂಪಿಜಿ) ಕ್ಲಬ್‌ನಲ್ಲಿರುವ ಅನಧಿಕೃತ ಕಟ್ಟಡವನ್ನು ಜಿಲ್ಲಾಧಿಕಾರಿಗಳು ನೆಲಸಮಗೊಳಿಸಿದ್ದಾರೆ.
Related Articles
Advertisement
2020 ರ ವೇಳೆಗೆ ಎಲ್ಲಾ ಪಾರ್ಸಿ ಹೆಸರುಗಳನ್ನು ಸಮಿತಿ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಅದೇ ರೀತಿ ವಿಶಾಲ್ ಅಗರ್ವಾಲ್, ಶ್ರೇಯ್ ಅಗರ್ವಾಲ್ ಮತ್ತು ಅಭಿಷೇಕ್ ಗುಪ್ತಾ ಅವರನ್ನು 2020 ರಲ್ಲಿ ಟ್ರಸ್ಟ್‌ನ ಸಮಿತಿ ಸದಸ್ಯರನ್ನಾಗಿ ಹೆಸರಿಸಲಾಯಿತು.
ಈ 10 ಎಕರೆ ಭೂಮಿಯನ್ನು ರಾಜ್ಯ ಸರ್ಕಾರವು ಪಾರ್ಸಿ ಟ್ರಸ್ಟ್‌ಗೆ ವಸತಿ ಬಳಕೆಗಾಗಿ ನೀಡಿತು. ಮೊದಲು, ಇದು ಪಾರ್ಸಿ ಸಮುದಾಯದ ಜಿಮ್ಖಾನಾ ಆಗಿತ್ತು, ಆದರೆ ವಿಶಾಲ್ ಅಗರ್ವಾಲ್ ಜಿಮ್ಖಾನಾವನ್ನು ರೆಸಾರ್ಟ್ ಆಗಿ ಪರಿವರ್ತಿಸಿದರು ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲು ಪ್ರಾರಂಭಿಸಿದರು. ಹೆಚ್ಚುವರಿ ಕುಟೀರಗಳನ್ನು ನಿರ್ಮಿಸಿದರು. ಕೆಲವು ವರ್ಷಗಳ ನಂತರ, ಅವರು ಹೋಟೆಲ್ ಉದ್ಯಮದ ಬ್ರ್ಯಾಂಡ್ ರೆಜೆಂಟಾಗೆ ರೆಸಾರ್ಟ್ ಗುತ್ತಿಗೆಗೆ ನೀಡಿದರು.