Advertisement

ಎರಡು ದಿನಕ್ಕೊಂದು ಕಟ್ಟಡ ಕುಸಿತ

10:46 AM Oct 20, 2021 | Team Udayavani |

ಬೆಂಗಳೂರು: ಕಳೆದ ಇಪ್ಪತ್ತು ದಿನಗಳಿಂದ ರಾಜಧಾನಿಯಲ್ಲಿ ಹೆಚ್ಚು ಕಡಿಮೆ ಎರಡು ದಿನಕ್ಕೊಂದು ಕಟ್ಟಡ ಅಥವಾ ಗೋಡೆ ನೆಲಕಚ್ಚಿವೆ. ಇದು ನಗರದಲ್ಲಿ ಆತಂಕ ಸೃಷ್ಟಿಸಿದ್ದು, ಬೆನ್ನಲ್ಲೇ ಬಿಬಿಎಂಪಿಗೆ ತಲೆನೋವಾಗಿಯೂ ಪರಿಣಮಿಸಿದೆ. ಕಳೆದ ತಿಂಗಳು ಸೆ.27 ರಂದು ಲಕ್ಕಸಂದ್ರದಲ್ಲಿ ಮೆಟ್ರೋ ಕಾರ್ಮಿಕರು ತಗ್ಗಿದ್ದ ಕಟ್ಟಡ ಏಕಾಏಕಿ ಕುಸಿಯಿತು.

Advertisement

ಬೆನ್ನೆಲ್ಲೆ ಸಾಲು ಸಾಲಾಗಿ ಕಟ್ಟಡ ಮತ್ತು ಗೋಡೆ ಕುಸಿತ ಘಟನೆಗಳು ಜರುಗುತ್ತಲೆ ಇವೆ. ಕಳೆದ ಮೂರು ವಾರಗಳಲ್ಲಿಯೇ ಬರೋಬ್ಬರಿ 10 ಅವಘಡಗಳು ಸಂಭವಿಸಿದ್ದು, ವಿವಿಧ ಅಂತಸ್ಥಿನ 10 ಕಟ್ಟಡಗಳು, ನಾಲ್ಕು ಬೃಹತ್‌ ಗೋಡೆಗಳು ಧರೆಗುರುಳಿವೆ. ಈ ಅವಘಡಗಳಿದ್ದ ಪ್ರಾಣಹಾನಿಯಾಗದಿ ದ್ದರೂ, ಬಾಡಿಗೆ, ಬೋಗ್ಯಕ್ಕೆ ಮತ್ತು ತಾತ್ಕಾ ಲಿಕವಾಗಿ ವಾಸವಿದ್ದ 50ಕ್ಕೂ ಹೆಚ್ಚು ಕುಟುಂಬಗಳು ಆರ್ಥಿಕವಾಗಿ ನಷ್ಟ ಅನುಭವಿಸಿವೆ.

ಅಲ್ಲದೆ, ನಗರದ ಹಳೆಯ ಕಟ್ಟಡಗಳಲ್ಲಿ ಮತ್ತು ಪಕ್ಕದ ಕಟ್ಟಡಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಜೀವಭಯ ಉಂಟು ಮಾಡಿವೆ. ಇನ್ನೊಂದೆಡೆ ಪಾಲಿಕೆಗೂ ಇದು ತಲೆನೋವಾಗಿ ಪರಿಣಮಿಸಿದ್ದು, ಶಿಥಿಲಕಟ್ಟಡಗಳ ಸಮೀಕ್ಷೆ, ನೋಟಿಸ್‌, ತೆರವು ಕಾರ್ಯಕ್ಕೆ ನಿರ್ಧರಿಸಿದೆ. ಈಗಾಗಲೇ 568 ಶಿಥಿಲಗೊಂಡ ಕಟ್ಟಡಗಳನ್ನು ಪತ್ತೆಮಾಡಿದ್ದು, ಶೀಘ್ರದಲ್ಲಿಯೇ ನೋಟಿಸ್‌ ನೀಡಿ, ತೆರವು ಅಥವಾ ದುರಸ್ತಿಗೆ ಸೂಚನೆ ನೀಡುತ್ತಿದೆ.

ಶಿಥಿತಗೊಂಡ, ಅನಧಿಕೃತವಾಗಿ ನಿರ್ಮಾಣವಾದ, ಕಳಪೆ ಕಾಮಗಾರಿಯ ಕಟ್ಟಡಗಳು ಇವೆ. ಈ ಅಂಶಗಳೇ ನೆಲಕಚ್ಚಲು ಪ್ರಮುಖ ಕಾರಣವಾಗುತ್ತಿದೆ ಎಂಬದು ಬಿಬಿಎಂಪಿ ಪ್ರಾಥಮಿಕ ಅಧ್ಯಯನದಿಂದ ತಿಳಿದುಬಂದಿದೆ.

 ನಿರ್ಲಕ್ಷ್ಯವೇ ಮೂಲ ಕಾರಣ! : ಕಟ್ಟಡ ಮಾಲೀಕರು ಮತ್ತು ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷವೇ ಈ ಎಲ್ಲಾ ಘಟನೆಗಳಿಗೂ ಮೂಲ ಕಾರಣವಾಗಿದೆ. ಕುಸಿತಗೊಂಡ ಕಟ್ಟಡಗಳಲ್ಲಿ ಕೆಲವು ಅನಧಿಕೃತ ನಿರ್ಮಾಣ, ಕಳಪೆ ಕಾಮಗಾರಿ ಇದ್ದರೆ, ಇನ್ನು ಕೆಲವು ಶಿಥಿಲಾವಸ್ಥೆಯಲ್ಲಿವೆ ಎಂದು ಕುರಿತು ಬಿಬಿಎಂಪಿಯಿಂದ ನೋಟಿಸ್‌ ಪಡೆದಿದ್ದಾರೆ. ಆದರೂ, ಮಾಲೀಕರು ಎಚ್ಚೆತ್ತುಕೊಳ್ಳದಿರುವುದು ಮತ್ತು ಅಧಿಕಾರಿಗಳು ಕಠಿಣ ಕ್ರಮವಹಿಸದಿರುವುದು ಅವಘಡಗಳಿಗೆ ಕಾರಣ ಎನ್ನಲಾಗುತ್ತಿದೆ.

Advertisement

ಸಾಲು ಸಾಲು ಕಟ್ಟಡಗಳ ಕುಸಿತ:-

ಸೆ.27: ಲಕ್ಕಸಂದ್ರದಲ್ಲಿ 3 ಅಂತಸ್ತಿನ 60 ವರ್ಷ ಹಳೆಯ ಶಿಥಿಲವಾದ ಕಟ್ಟಡ. ಮೆಟ್ರೋ ಮಾರ್ಗದ ಕಾಮಗಾರಿಗಾಗಿ ಬಂದಿದ್ದ 40 ಮಂದಿ ಕಾರ್ಮಿಕರು ವಾಸವಿದ್ದರು. ಮಾಲೀಕರ ನಿರ್ಲಕ್ಷ್ಯ.

ಅ. 8: ಕೆಎಂಎಫ್ ಆವರಣದಲ್ಲಿ ಬಮೂಲ್‌ ನೌಕರರ ಮೂರು ಅಂತಸ್ತಿನ ವಸತಿ ಸಮುಚ್ಚಯ 40 ವರ್ಷಗಳ ಹಿಂದೆ ನಿರ್ಮಾಣ. 18 ಕುಟುಂಬಗಳು ವಾಸ. ನಾಲ್ವರಿಗೆ ಗಾಯ. ಶಿಥಿಲಗೊಂಡಿದ್ದರೂ ಗುಣಮಟ್ಟದ ಪರಿಶೀಲನೆ ನಡೆಸಿರಲಿಲ್ಲ.

ಅ.10: ಕಸ್ತೂರಿ ನಗರದಲ್ಲಿ ಏಳು ವರ್ಷದ ಹಿಂದೆ ನಿರ್ಮಿಸಿದ್ದ ನಾಲ್ಕು ಅಂತಸ್ತಿನ ಕಟ್ಟಡ. ಅನಧಿಕೃತ (ಅಂತಸ್ತು) ನಿರ್ಮಾಣ, ಕಳಪೆ ಕಾಮಗಾರಿ.

ಅ.11: ಮೆಜೆಸ್ಟಿಕ್‌ ಸಮೀಪದ ಶೇಷಾದ್ರಿಪುರ ಮುಖ್ಯರಸ್ತೆಯಲ್ಲಿ ಬೃಹತ್‌ ಗೋಡೆ ಕುಸಿತ. ಮೇಲ್ಭಾಗದಲ್ಲಿದ್ದ ಮನೆಗೆ ಹಾನಿ. ಈ ಹಿಂದೆ ಎರಡು ಬಾರಿ ಘಟನೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ. ಹಲಸೂರಿನ ಮಿಲಿಟರಿ ಕಾಂಪೌಂಡ್‌ (ಎಂಇಜಿ ಸೆಂಟರ್‌) ಕುಸಿದು 10ಕ್ಕೂ ಹೆಚ್ಚು ವಾಹನ ಜಖಂ.

ಅ.13: ಚಿಕ್ಕಪೇಟೆಯ ವಿಧಾನಸಭಾ ಕ್ಷೇತ್ರದ 119 ವಾರ್ಡ್‌ನ ನಗರ್ತಪೇಟೆಯಲ್ಲಿ 90 ವರ್ಷದ ಹಳೆಯ ಕಟ್ಟಡ. ಶಿಥಿಲಗೊಂಡಿದ್ದು, ಮಳೆಯಿಂದ ಧರೆಗುರುಳಿದೆ.

ಅ.16: ಕಮರ್ಷಿಯಲ್‌ ಸ್ಟ್ರೀಟ್‌ ಮುಖ್ಯರಸ್ತೆಯಲ್ಲಿದ್ದ 100 ವರ್ಷ ಹಳೇ ಕಟ್ಟಡ. 2 ವರ್ಷಗಳ ಹಿಂದೆಯೇ ಕಟ್ಟಡದ ಮಾಲೀಕರಿಗೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್‌ ನೀಡಿದ್ದರು. ದ್ವಿಚಕ್ರ ವಾಹನ ಹಾಗೂ ಪೀಠೊಪಕರಣಗಳಿಗೆ ಹಾನಿಯಾಗಿದೆ.

ಅ.17: ಮೈಸೂರು ರಸ್ತೆಯ ಬಿನ್ನಿಮಿಲ್‌ ನ ಪೊಲೀಸ್‌ ಕ್ವಾರ್ಟರ್ಸ್‌ ಕಟ್ಟಡ. ನಿರ್ಮಾಣಗೊಂಡು ಮೂರೇ ವರ್ಷಕ್ಕೆ ಬಿರುಕು ಬಿಟ್ಟಿದೆ. 18 ಕೋಟಿ ರೂ. ವೆಚ್ಚದಲ್ಲಿ 128 ಫ್ಲ್ಯಾಟ್‌ಗಳನ್ನ ನಿರ್ಮಾಣ ಮಾಡ ಲಾಗಿದ್ದು, ಕಳಪೆ ಕಾಮಗಾರಿ ಆರೋಪ.

ಅ.17: ರಾಜಾಜಿನಗರದ ಆರ್‌ಜಿಐ ಕಾಲೋನಿಯ ವಾರ್ಡ್‌ ದಯಾನಂದನಗರ ಕಟ್ಟಡ.  80 ವರ್ಷದ ಹಿಂದೆ ನಿರ್ಮಾಣ. ನಾಲ್ಕು ಮನೆಗಳಲ್ಲಿ ವಾಸ.

ಅ.18: ಹೆಸರಘಟ್ಟ ರಸ್ತೆಯ ಚಿಮಣಿ ಹಿಲ್ಸ್ ಲೇಔಟ್‌ನಲ್ಲಿ 2014 ರಲ್ಲಿ ನಿರ್ಮಾಣವಾಗಿದ್ದ ಕಟ್ಟಡ. ಕಳಪೆ ಕಾಮಗಾರಿ ಮತ್ತು ಮಳೆಯ ಹೊಡೆತ.

Advertisement

Udayavani is now on Telegram. Click here to join our channel and stay updated with the latest news.

Next