Advertisement

ಕಂದಾಯ ಇಲಾಖೆಗೆ ಸಿಗದ ಸ್ವಂತ ಕಟ್ಟಡ ಭಾಗ್ಯ!

12:27 AM Oct 06, 2019 | Team Udayavani |

ಕೈಕಂಬ: ವಿವಿಧ ಇಲಾಖೆ ಸಹಿತ ಇತರರಿಗೂ ಜಾಗ, ಖಾತೆ ಬದಲಾವಣೆ, ರೆಕಾರ್ಡ್‌, ನಕ್ಷೆ ನೀಡುವ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಕಾರ್ಯನಿರ್ವಹಿಸಲು ಸ್ವಂತ
ಕಟ್ಟಡವಿಲ್ಲ !

Advertisement

ಮಂಗಳೂರು ತಾಲೂಕಿನ ಶೇ. 90ರಷ್ಟು ಗ್ರಾಮಕರಣಿಕರ ಕಚೇರಿ ಗ್ರಾ.ಪಂ.ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮಂಗಳೂರು ತಾಲೂಕಿಗೆ ಸಂಬಂಧಿಸಿದ ಗ್ರಾಮಕರಣಿಕರ ಕಚೇರಿಗೆ ಈಗಾಗಲೇ ಹೆಚ್ಚಿನೆಡೆ ಸ್ಥಳವನ್ನು ಕಾಯ್ದಿರಿಸಲಾಗಿದೆ. ಅನುದಾನದ ಕೊರತೆಯಿಂದ ಕಟ್ಟಡ ನಿರ್ಮಾಣ ಸಾಧ್ಯವಾಗಿಲ್ಲ. ಈ ಬಗ್ಗೆ ಸಂಸದರು ಹಾಗೂ ಶಾಸಕರ ಗಮನಕ್ಕೆ ತರಲಾಗುವುದು ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ಹೊಣೆ
26 ಗ್ರಾಮಗಳನ್ನೊಳಗೊಂಡ ಗುರುಪುರ ಹೋಬಳಿಯ ವ್ಯಾಪ್ತಿಯಲ್ಲಿ ಒಂದೇ ಒಂದು ಗ್ರಾಮಕರಣಿಕರ ಕಚೇರಿ ಅದರ ಸ್ವಂತ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಇನ್ನು 11 ಗ್ರಾಮಕರಣಿಕರು 2 ಗ್ರಾಮಗಳಲ್ಲಿ ಇನ್ನೂ ಕೆಲವರು 3 ಗ್ರಾಮಗಳಲ್ಲಿ ಗ್ರಾಮಕ ರಣಿಕರಾಗಿ ಹೆಚ್ಚುವರು ಜವಾಬ್ದಾರಿಯೊಂದಿಗೆ ಕಾರ್ಯ ನಿರ್ವಹಿ ಸುತ್ತಿದ್ದಾರೆ. ಗ್ರಾಮಕರಣಿಕ ಕಚೇರಿಯಲ್ಲಿ ದಾಖಲೆಗಳನ್ನು ಇಡಲು ಸಮರ್ಪಕ ಜಾಗವಿಲ್ಲದಿರುವುದು ಕಾಣಬಹುದು.

ನಾಡ ಕಚೇರಿ ತೆರವಿಗೆ ಪತ್ರ
ಕಂದಾವರ ಗ್ರಾಮ ಪಂಚಾಯತ್‌ನ ಕಟ್ಟಡದಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ನಾಡಕಚೇರಿಯನ್ನು 15 ದಿನಗಳೊಳಗೆ ತೆರವು ಗೊಳಿಸಬೇಕು ಎಂದು ಗ್ರಾ.ಪಂ. ಕಂದಾಯ ಇಲಾಖೆಗೆ ಪತ್ರ ಬರೆದಿದೆ. ಗ್ರಾ.ಪಂ.ನಲ್ಲಿ ಜಾಗದ ಕೊರತೆ ಹಾಗೂ ಕಡತಗ ಳನ್ನು ಇಡಲು ಜಾಗದ ಸಮಸ್ಯೆ ಇರುವುದರಿಂದ ನಾಡ ಕಚೇರಿ ಯನ್ನು ತೆರವುಗೊಳಿಸಬೇಕು ಎಂದು ಸೆ. 26 ರಂದು ಜರ ಗಿದ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಅದರಂತೆ ಈ ಮೇಲಿನ ವಿಷಯದ ಒಕ್ಕಣೆಯೊಂದಿಗೆ ಅ. 3ರಂದು ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ.

ಅವ್ಯವಸ್ಥಿತ ನಾಡಕಚೇರಿ
ಕಂದಾವರ ಗ್ರಾ.ಪಂ. ಕಟ್ಟಡದಲ್ಲಿರುವ ನಾಡಕಚೇರಿಯೂ ಸದ್ಯ ಸುವ್ಯವಸ್ಥಿತ ಮೂಲ ಸೌಲಭ್ಯದ ಕೊರತೆಯನ್ನು ಎದುರಿ ಸುತ್ತಿದೆ. ಕಚೇರಿಯಲ್ಲಿನ ಕಂಪ್ಯೂಟರ್ ಗಳು ಕೆಟ್ಟುಹೋಗಿದ್ದು ಸಮರ್ಪಕ ವಿದ್ಯುತ್‌ ಕೇಬಲ್‌ಗ‌ಳ ವ್ಯವಸ್ಥೆಯಿಲ್ಲ. ದಿನ ವಿಡೀ ಉಂಟಾಗುವ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ.ಇದನ್ನು ಸರಿಪಡಿಸಲು ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರಿಗೆ ಮನವಿ ನೀಡಲಾಗಿತ್ತು. ಇದಕ್ಕೆ ಶಾಸಕರು ಸ್ಪಂದಿಸಿದ ಕಾರಣದಿಂದಾಗಿ ನಾಡಕಚೇರಿಯಲ್ಲಿ ಕೆಲ ವೊಂದು ಕಾಮಗಾರಿಗಳು ಆರಂಭವಾಗಿದ್ದವು. ಈ ಸಮಯ ದಲ್ಲಿ ಪಂಚಾಯತ್‌ ಕಂದಾಯ ಇಲಾಖೆಗೆ ತೆರವಿಗೆ ಪತ್ರ ನೀಡಿದೆ.

Advertisement

ಕೆಲಸದ ಒತ್ತಡದಲ್ಲಿ ಗ್ರಾಮಕರಣಿಕರು
ಬೆಳೆ ಸಮೀಕ್ಷೆ, ಮತದಾರ ಪಟ್ಟಿ ಪರಿಷ್ಕರಣೆ, ಬಿಎಲ್‌ಒ ಜತೆ ಮನೆ-ಮನೆ ಭೇಟಿ ನೀಡಿ ಆಧಾರ್‌ ಕಾರ್ಡ್‌ ಲಿಂಕ್‌, ಮರಳು ದಾಳಿ, ಚೆಕ್‌ ಪೋಸ್ಟ್‌ ಗಳಲ್ಲಿ ಡ್ನೂಟಿ, ಪ್ರಕೃತಿ ವಿಕೋಪ ಒಂದೆಡೆಯಾದರೆ, ಕಚೇರಿಯಲ್ಲಿ ಜಾತಿ, ಆದಾಯ ಪ್ರಮಾಣಪತ್ರ, 11ಇ , ಮುಂತಾದ ಕಾರ್ಯಗಳಿಗಾಗಿ ಜನ ಕಾಯುತ್ತಿದ್ದಾರೆ. ಗುರುಪುರ ಹೋಬಳಿಯ ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 105 ಬಿಎಲ್‌ಒಗಳ ಮೇಲ್ವಿಚಾರಣೆಯನ್ನು ಗ್ರಾಮಕರಣಿಕರು ನೋಡಿ ಕೊಳ್ಳುತ್ತಿದ್ದಾರೆ. ಬೆಳೆ ಸಮೀಕ್ಷಗೆ ಖಾಸಗಿಯವರಿಗೆ ಗುತ್ತಿಗೆ ನೀಡಿದರೂ ಗ್ರಾಮಕರಣಿಕರು ಮಾರ್ಗದರ್ಶನ ನೀಡಬೇಕಿದೆ. ಗಣಿ ಇಲಾಖೆ ಮಾಡಬೇಕಿರುವ ಚೆಕ್‌ ಪೋಸ್ಟ್‌ ಕಾರ್ಯ, ಮರಳು ರಾಶಿ, ಕೋರೆಗಳಿಗೆ ದಾಳಿ ಹಾಗೂ ಕೃಷಿ ಇಲಾಖೆ  ಮಾಡಬೇಕಾದ ಕೃಷಿ ಸಮ್ಮಾನ್‌ ಅರ್ಜಿ, ಬೆಳೆ ಸಮೀಕ್ಷೆ ಕಾರ್ಯಗಳನ್ನು ಗ್ರಾಮಕರಣಿ ಕರೇ ಮಾಡ ಬೇಕಾ ಗಿರುವುದರಿಂದ ಕೆಲಸದ ಒತ್ತಡ ಹೆಚ್ಚಿದೆ.

ಅನುದಾನದ ಕೊರತೆ
ಗ್ರಾಮಕರಣಿಕರ ಹಾಗೂ ನಾಡಕಚೇರಿ ನಿರ್ಮಾಣಕ್ಕೆ ಜಾಗವನ್ನು ಗುರುತಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಾಗದಕೊರತೆ ಇಲ್ಲ. ಆದರೆ ಅನು ದಾನದ ಕೊರತೆ ಇದೆ. ಕಂದಾಯ ಸಚಿವರು ಪ್ರತಿಜಿಲ್ಲೆಗೆ ನಾಡ ಕಚೇರಿ ಆಗಲೇಬೇಕು ಎಂಬ ಉದೇಶವನ್ನಿಟ್ಟುಕೊಂಡು ಈ ನಿಟ್ಟಿನಲ್ಲಿ ಸಮಾನ ಯೋಜನೆಯಡಿಯಲ್ಲಿ ಅನು ದಾನ ಬಿಡುಗಡೆ  ಮಾಡಲಾಗುತ್ತದೆ.
– ಗುರುಪ್ರಸಾದ್‌,
ತಹಶೀಲ್ದಾರ್‌

ಪಂ.ನ ಪತ್ರ ಗಮನಕ್ಕೆ ಬಂದಿದೆ
ಪಂಚಾಯತ್‌ನ ಪತ್ರದ ಬಗ್ಗೆ ತಹಶೀಲ್ದಾರರ ಗಮನಕ್ಕೆ ಬಂದಿದೆ. ಕಂದಾವರ ಗ್ರಾಮ ಪಂಚಾಯತ್‌ನ ರೈತ ಸಂಪರ್ಕ ಕೇಂದ್ರದ ಸಮೀಪ ನಾಡಕಚೇರಿಗೆ 18 ಸೆಂಟ್ಸು ಜಾಗ ಇದೆ.
– ಶಿವಪ್ರಸಾದ್‌, ಉಪತಹಶೀಲ್ದಾರ್‌, ಗುರುಪುರ ಹೋಬಳಿ

-ಸುಬ್ರಾಯ ನಾಯಕ್‌, ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next