Advertisement

ಏಪ್ರಿಲ್‌ನಿಂದ ಆನ್‌ಲೈನ್‌ನಲ್ಲೇ ದೊರೆಯಲಿದೆ ಕಟ್ಟಡ ನಕ್ಷೆ

12:10 PM Mar 20, 2018 | |

ಬೆಂಗಳೂರು: ನಗರದ ಜನರಿಗೆ ಶೀಘ್ರವಾಗಿ ಕಟ್ಟಡ ನಕ್ಷೆ ಮಂಜೂರು ಮಾಡುವ “ಸ್ವಯಂಚಾಲಿತ ಕಟ್ಟಡ ನಕ್ಷೆ ಮಂಜೂರಾತಿ ವ್ಯವಸ್ಥೆ’ಗೆ ಸಚಿವ ಕೆ.ಜೆ.ಜಾರ್ಜ್‌ ಸೋಮವಾರ ಚಾಲನೆ ನೀಡಿದ್ದು, ಏ. 1 ರಿಂದ ಸಾರ್ವಜನಿಕರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Advertisement

ಕಟ್ಟಡ ನಕ್ಷೆಗಾಗಿ ಹತ್ತಾರು ದಿನಗಳು ಪಾಲಿಕೆಯ ಕಚೇರಿಗೆ ಅಲೆಯುವುದನ್ನು ತಪ್ಪಿಸಲು, ಪಾಲಿಕೆ ಈ ಕ್ರಮಕ್ಕೆ ಮುಂದಾಗಿದೆ. ಆ ಹಿನ್ನೆಲೆಯಲ್ಲಿ ನಾಗರಿಕರು ಮನೆಯಲ್ಲಿ ಕುಳಿತು ಕಟ್ಟಡ ನಕ್ಷೆ, ಆರಂಭಿಕ ಪ್ರಮಾಣಪತ್ರ (ಸಿಸಿ), ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯಬಹುದಾಗಿದೆ. 

ಆನ್‌ಲೈನ್‌ ವ್ಯವಸ್ಥೆಗೆ ಚಾಲನೆ ಕೊಟ್ಟು ಮಾತನಾಡಿದ ಕೆ.ಜೆ.ಜಾರ್ಜ್‌, ನಕ್ಷೆ ಪಡೆಯುವಲ್ಲಿ ನಾಗರಿಕರಿಗೆ ಆಗುತ್ತಿದ್ದ ತೊಂದರೆ ಕಡಿಮೆ ಮಾಡಲು ಬಿಬಿಎಂಪಿ ವ್ಯವಸ್ಥೆ ಜಾರಿಗೊಳಿಸಿದೆ. ಆ ಮೂಲಕ ನಾಗರಿಕರಿಗೆ ಸುಲಭ ಹಾಗೂ ಶೀಘ್ರವಾಗಿ ನಕ್ಷೆ ದೊರೆಯಲಿದೆ ಎಂದರು.

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ , ನೂತನ ಆನ್‌ಲೈನ್‌ ವ್ಯವಸ್ಥೆ ಏಪ್ರಿಲ್‌ 1 ರಿಂದ ಸಾರ್ವಜನಿಕರಿಗೆ ಲಭ್ಯವಾಗಲಿದ್ದು, ಜತೆಗೆ ಅಧಿಕಾರಿಗಳಿಗೆ ಕಡತಗಳ ವಿಲೇವಾರಿಗೆ ಕಾಲಮಿತಿ ನೀಡಲಾಗಿದೆ. ಒಂದೊಮ್ಮೆ ಕಾಲಮಿತಿಯೊಳಗೆ ಅಧಿಕಾರಿಗಳು ಕಾರಣ ನೀಡಿದೆ ವಿಳಂಬ ಮಾಡಿದರೆ ಅರ್ಜಿಗೆ ಸ್ವಯಂ ಚಾಲಿತವಾಗಿ ಮುಂದಿನ ಹಂತಕ್ಕೆ ಹೋಗಲಿದೆ ಎಂದರು.

ನಕ್ಷೆ ಮಂಜೂರಾತಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ದಾಖಲೆಗಳು ಬೇಕಾದರೆ, ಈ-ಮೇಲ್‌/ ಎಸ್‌ಎಂಎಸ್‌ ಮೂಲಕ ನಾಗರಿಕರಿಗೆ ಸಂದೇಶ ಕಳುಹಿಸಲಾಗುವುದು. ಅರ್ಜಿದಾರರು ದಾಖಲೆಗಳನ್ನು ಕೊರಿಯರ್‌ ಮೂಲಕ ಕಳುಹಿಸಲು ಅವಕಾಶವಿದೆ ಎಂದು ಹೇಳಿದರು.

Advertisement

ಶಿಸ್ತುಕ್ರಮ: ಕೇಂದ್ರ ಕಚೇರಿಯಲ್ಲಿ ಸಹಾಯಕ ಹಾಗೂ ಕಿರಿಯ ಎಂಜಿನಿಯರ್‌ಗಳು ಮತ್ತು ಸಹಾಯಕ ನಿರ್ದೇಶಕರು 14 (10+4) ದಿನಗಳಲ್ಲಿ ಅರ್ಜಿ ವಿಲೇವಾರಿ ಮಾಡಬೇಕು. ಅದೇ ರೀತಿ ಉಪ ನಿರ್ದೇಶಕರು 4 ದಿನಗಳು, ಜಂಟಿ ನಿರ್ದೇಶಕರು 3 ದಿನ, ಹೆಚ್ಚುವರಿ ನಿರ್ದೇಶಕರು 3 ದಿನ, ವಿಶೇಷ ಆಯುಕ್ತರು 3 ದಿನ ಸೇರಿ ಒಟ್ಟು 30 ದಿನಗಳಲ್ಲಿ ಅರ್ಜಿ ವಿಲೇವಾರಿಯಾಗಬೇಕು. ನಿಗದಿತ ಅವಧಿಯಲ್ಲಿ ಅರ್ಜಿ ವಿಲೇವಾರಿ ಮಾಡದಿದ್ದರೆ, ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು. 

ನಾಗರಿಕರು ಯಾವುದೇ ಕಾರಣಕ್ಕೂ ಕಟ್ಟಡ ಉಪವಿಧಿಗಳನ್ನು ಉಲ್ಲಂ ಸಿ ಕಟ್ಟಡ ನಿರ್ಮಿಸಬಾರದು. ನಿಯಮ ಉಲ್ಲಂಘನೆಯಿಂದ ಒಂದಲ್ಲ ಒಂದು ದಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಪಾಲಿಕೆ ವಿಧಿಸಿದ ನಿಯಮಗಳಂತೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು. 
-ಕೆ.ಜೆ.ಜಾರ್ಜ್‌, ಬೆಂಗಳೂರು ನಗರಾಭಿವೃದ್ಧಿ ಸಚಿವ 

ಸ್ವಯಂ ಘೋಷಣೆ ಮೇರೆಗೆ 40*60 ವಿಸ್ತೀರ್ಣದವರೆಗೆ ಆಸ್ತಿಗಳಿಗೆ ಮಾತ್ರ ಆನ್‌ಲೈನ್‌ನಲ್ಲಿ ಸ್ವಯಂ ಘೋಷಣೆ ಮೇರೆಗೆ ಕಟ್ಟಡ ನಕ್ಷೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿಸ್ತೀರ್ಣವಿರುವ ಕಟ್ಟಡಗಳಿಗೂ ಸ್ವಯಂ ಘೋಷಣೆ ಮೇರೆಗೆ ನಕ್ಷೆ ಮಂಜೂರಾತಿ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು. 
-ಮಹೇಂದ್ರ ಜೈನ್‌, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ 

ಅರ್ಜಿ ಸಲ್ಲಿಕೆ ಹೇಗೆ?: ಬಿಬಿಎಂಪಿ ವೆಬ್‌ಸೈಟ್‌ ಡಿಡಿಡಿ.ಚಿಚಿಞಟ.ಜಟvಜಿ.ಜಿn ಭೇಟಿ ನೀಡಿ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಬೇಕು. ಈ ವೇಳೆ ನಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಅಲ್ಲಿಯೇ ಪರಿಶೀಲನಾ ಶುಲ್ಕ ಪಾವತಿಸಬೇಕು. ಇದಾದ ಬಳಿಕ ಅಧಿಕಾರಿಗಳು ಸ್ಥಳ ಪರಿಶೀಲಿಸಿ ವರದಿಯನ್ನು ಅಪ್‌ಲೋಡ್‌ ಮಾಡಲಿದ್ದು, ಕೂಡಲೇ ಅರ್ಜಿದಾರರಿಗೆ ನಕ್ಷೆ ದೊರೆಯಲಿದೆ.

ವಲಯ ಕಚೇರಿ ಕಾಲಮಿತಿಯ ಪಟ್ಟಿ
ಅಧಿಕಾರಿಗಳು    ಸುವರ್ಣ ಪರವಾನಗಿ (ದಿನ)    ಸಾಮಾನ್ಯ ಪರವಾನಗಿ (ದಿನಗಳಲ್ಲಿ)
ಸಹಾಯಕ/ಕಿರಿಯ ಎಂಜಿನಿಯರ್‌    5    7
ಸಹಾಯಕ ನಿರ್ದೇಶಕ    2    4
ಮುಖ್ಯ ಎಂಜಿನಿಯರ್‌    –    2
ಜಂಟಿ ಆಯುಕ್ತರು    –    2
ಒಟ್ಟು    7    15

Advertisement

Udayavani is now on Telegram. Click here to join our channel and stay updated with the latest news.

Next