Advertisement

Building ನಿರ್ಮಾಣ ಕಾಮಗಾರಿ: ಕಾರ್ಮಿಕ ಇಲಾಖೆ ಸೂಚನೆ

12:31 AM Jul 05, 2024 | Team Udayavani |

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಸುರûಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದರಿಂದ ಅನೇಕ ಅಪಘಾತ/ಅವಘಡಗಳು ಸಂಭವಿಸುತ್ತಿದ್ದು, ಆಸ್ತಿಪಾಸ್ತಿಯೊಂದಿಗೆ ಜೀವಹಾನಿಗೆ ಎಡೆ ಮಾಡಿಕೊಡುತ್ತಿದೆ.

Advertisement

ಹಾಗಾಗಿ ಎಲ್ಲ ಕಟ್ಟಡ ಮತ್ತು ಇತರ ನಿರ್ಮಾಣ ಸ್ಥಳಗಳಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ (ಉದ್ಯೋಗ ಮತ್ತು ಕ್ರಮೀಕರಣ) ಕಾಯ್ದೆ, 1996 ಮತ್ತು ಕರ್ನಾಟಕ ನಿಯಮಗಳು, 2006ಗಳಡಿ ಕಾರ್ಮಿಕರಿಗೆ ತೆಗೆದುಕೊಳ್ಳಬೇಕಾದಂತಹ ಎಲ್ಲ ಸುರûಾ ಕ್ರಮಗಳನ್ನು ಕಾಯ್ದೆಯ ನಿಯಮ 50ರಿಂದ 251ರ ವರೆಗಿನ ನಿಯಮಗಳ ಅನ್ವಯ ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಲಾಗಿದೆ.

ಯಾವುದೇ ಕಟ್ಟಡ ಕಾಮಗಾರಿ ನಿರ್ಮಾಣ ಮಾಡುವ ಮಾಲಕರು/ ಗುತ್ತಿಗೆದಾರರು ಈ ನಿಯಮಗಳನ್ನು ಪಾಲಿಸದೆ ಅವಘಡಗಳು ಸಂಭವಿಸಿದಲ್ಲಿ ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದಿರುವ ಕಾರಣಕ್ಕಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಮತ್ತು ನಿರ್ಮಾಣ ಹಂತದಲ್ಲಿರುವ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಲು ಕಾಯ್ದೆಯ ನಿಯಮ 269ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಸಹಾಯಕ ಕಾರ್ಮಿಕ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next