Advertisement

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

10:30 PM Jun 05, 2023 | Team Udayavani |

ಹುಣಸೂರು: ಪರಿಸರ ಸಂರಕ್ಷಣೆ ಎಂದರೆ ಸಸಿನೆಡುವುದು ಮಾತ್ರವಲ್ಲದೆ ಪ್ರತಿ ಗ್ರಾಮಗಳಲ್ಲಿ ಮೂಕ ಪ್ರಾಣಿಗಳಿಗಾಗಿ ಕಲ್ಯಾಣಿ ನಿರ್ಮಿಸಬೇಕು, ಗಿಡ-ಮರ ಬೆಳೆಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಸಾಲುಮರದ ತಿಮ್ಮಕ್ಕ ಸೂಚಿಸಿದರು.

Advertisement

ತಾಲೂಕಿನ ಬಿಳಿಕೆರೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇಲ್ಲಿನ ಫ್ರೌಢಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಮಾರಂಭವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಹಿಂದೆ ಹಳ್ಳಿಗಳಲ್ಲಿ ಕಲ್ಯಾಣಿ, ಕೆರೆ-ಕಟ್ಟೆಗಳಿದ್ದವು, ಅಭಿವೃದ್ದಿ ನೆಪದಲ್ಲಿ ಮುಚ್ಚಿ ಹೋಗಿವೆೆ. ಇನ್ನಾದರೂ ಕಲ್ಯಾಣಿಗಳನ್ನು ನಿರ್ಮಿಸಿ, ಮೂಕಪ್ರಾಣಿಗಳ ದಾಹ ತಣಿಸಲು ಮುಂದಾಗಿ. ಬೋರ್‌ವೆಲ್ ಬದಲು ಹೆಚ್ಚು ತೆರೆದ ಬಾವಿಗಳನ್ನು ನಿರ್ಮಿಸಿಕೊಳ್ಳಿ, ಶಾಲಾ ಮಕ್ಕಳು ಹಾಗೂ ಸಂಘ-ಸAಸ್ಥೆಗಳು, ಸಾರ್ವಜನಿಕರು ಮರಗಳನ್ನು ಬೆಳೆಸುವ ಮೂಲಕ ಪರಿಸರಕ್ಕೆ ನಿಮ್ಮದೇ ಆದ ಕೊಡುಗೆ ನೀಡುವಂತೆ ಆಶಿಸಿದರು.

ವಿಶ್ವಕ್ಕೆ ಸಂಸ್ಕಾರ ಕಲಿಸಿದ ಭಾರತ
ಸಾಲುಮರದ ತಿಮ್ಮಕ್ಕರವರ ದತ್ತುಪುತ್ರ ಉಮೇಶ್ ಮಾತನಾಡಿ ಭೂಮಿಯ ತಾಪಮಾನವೆಂಬುದು ಇಂದು ಜಗತ್ತಿನ ಸಮಸ್ಯೆಯಾಗಿದ್ದು, ಜಗತ್ತಿಗೆ ಸಂಸ್ಕಾರ ಕಲಿಸಿಕೊಟ್ಟ ಭಾರತವು ಪರಿಸರಕ್ಕೆ ಆದ್ಯತೆ ನೀಡುವುದನ್ನು ಕಡೆಗಣಿಸಿದ್ದರಿಂದ ಮಲಿನ ನಗರಗಳೆಂಬ ಹಣೆಪಟ್ಟಿ ಹೊರುವಂತಾಗಿದೆ. ೨೫ವರ್ಷಗಳ ಹಿಂದೆ ಪರಿಸರ ದಿನಾಚರಣೆ ಆಚರಣೆಗೆ ಬಂದಿರಲಿಲ್ಲ. ಅಭಿವೃದ್ದಿ ಹೆಸರಿನಲ್ಲಿ ಪರಿಸರಕ್ಕೆ ಹಾನಿಯಾಗುತ್ತಿದೆ. ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಯದಿದ್ದಲ್ಲಿ ದೇಶ ದುಸ್ಥಿತಿಗೆ ತಲುಪಲಿದೆ.

ವಿಶ್ವಕ್ಕೆ ಪರಿಸರ ಪಾಠ
ಅನಕ್ಷರಸ್ಥೆ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಮರಗಳನ್ನು ಮಕ್ಕಳಂತೆ ಪೋಷಿಸಿದ್ದು, ವಿಶ್ವಕ್ಕೆ ಪರಿಸರಸಂರಕ್ಷಣೆಯ ಪಾಠಕಲಿಸಿದ್ದಾರೆ. ಅವರಂತೆ ಇಂದಿನ ಮಕ್ಕಳು, ಸಾರ್ವಜನಿಕರು ಕನಿಷ್ಟ ೧೦ಸಸಿ ನೆಟ್ಟು ಪೋಷಿಸಬೇಕಿದೆ. ಪ್ಲಾಸ್ಟಿಕ್ ಬಳಕೆಯಿಂದ ದೂರವಾಗಬೇಕಿದೆ. ಸರಕಾರ ರೋಗ ಪೀಡಿತ ಕಳೆನಾಶಕವನ್ನು ನಿಷೇಧಿಸಬೇಕಿದೆ. ಈ ಬಗ್ಗೆ ಶಾಸಕರು ಸದನದಲ್ಲಿ ಚರ್ಚಿಸಬೇಕೆಂದು ಮನವಿ ಮಾಡಿ, ಪರಿಸರ ಸಂರಕ್ಷಣೆಯ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕಿದೆ ಎಂದರು.

ಪ್ರಕೃತಿ ಆರಾಧಿಸುವ ಏಕೈಕ ದೇಶ
ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ ಮಕ್ಕಳಂತೆ ಸಸಿನೆಟ್ಟು ಬೆಳೆಸಿ ವಿಶ್ವದ, ಬಿಬಿಸಿಯ ಪ್ರಭಾವಶಾಲಿ ಮಹಿಳೆ ಶತಾಯುಷಿ ಸಾಲುಮರದ ತಿಮ್ಮಕ್ಕ ನಮ್ಮ ನಾಡಿನಹೆಮ್ಮೆ. ಇವರ ಸಾಧನೆಯು ಮಕ್ಕಳಿಗೆ ಪ್ರೇರೇಪಣೆಯಾಗಿ ಇವರಂತೆ ಗಿಡಮರ ಬೆಳೆಸಿ ಪರಿಸರಕ್ಕೆ ದೊಡ್ಡ ಕಾಣಿಕೆ ನೀಡಬೇಕಿದೆ. ಭಾರತ ಮಾತ್ರ ಪ್ರಕೃತಿಯನ್ನು ಆರಾಧಿಸಲಿದೆ. ಅಂತ ಪ್ರಕೃತಿಯನ್ನೇ ಕಲುಷಿತಗೊಳಿಸಿರುವ ಪರಿಣಾಮ ಪ್ರತಿ ಗ್ರಾಮದಲ್ಲೂ ಕನಿಷ್ಟ ೧೦ಮಂದಿಗೆ ಕ್ಯಾನ್ಸರ್, ಸ್ಟೊçÃಕ್, ಹೃದಯ ಕಾಯಿಲೆಗಳು ಹೆಚ್ಚುತ್ತಿದೆ ಎಂದು ಆತಂಕವ್ಯಕ್ತಪಡಿಸಿ, ಪರಿಸರ ಸಂರಕ್ಷಣೆಯಲ್ಲಿ ಸಮುದಾಯದ ಸಹಭಾಗಿತ್ವ ಇದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯವೆಂದರು.

Advertisement

ಗ್ರಾ.ಪಂ.ಅಧ್ಯಕ್ಷ ಶಿವಶಂಕರ್, ಪದವಿ ಕಾಲೇಜು ಪ್ರಾಚಾರ್ಯ ನಾಗರಾಜ್, ಪಿಡಿಓ ಮಹದೇವಸ್ವಾಮಿ ಮಾತನಾಡಿದರು. ವೇದಿಕೆಯಲ್ಲಿ ತಾ.ಪಂ.ಇಓ ಮನು ಬಿ.ಕೆ, ಆರ್.ಎಫ್.ಓ ರುದ್ರೇಶ್, ಗ್ರಾ.ಪಂ.ಉಪಾಧ್ಯಕ್ಷೆ ಮಂಚಮ್ಮ, ಸದಸ್ಯರಾದ ಯೋಗೇಶ್, ಮಹೇಶ್, ಎಸ್‌ಡಿಎಂಸಿ ಅಧ್ಯಕ್ಷ ದೀಪು, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಭಾಗವಹಿಸಿದ್ದರು. ಪರಿಸರ ಸಂರಕ್ಷಿಸುವ ಕುರಿತು ಪ್ರತಿಜ್ಞಾವಿಧಿ ಭೋದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next