Advertisement
ಅವರು ಮೂಲ್ಕಿ ಸೀಮೆಯ ಅರಸು ಕಂಬಳ ಸಮಿತಿಯ ಸಂಯೋಜನೆಯಲ್ಲಿ ಶನಿವಾರ ನಡೆದ ಮೂಲ್ಕಿ ಸೀಮೆ ಅರಸು ಕಂಬಳದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
Related Articles
Advertisement
ಪಕ್ಷಿಕೆರೆ ಸೈ.ಜೂಡ್ ಚಚರ್್ನ ಮೆಲ್ಪಿನ್ ನೊರೊನ್ಹಾ, ಹಳೆಯಂಗಡಿಯ ಉದ್ಯಮಿ ಬಿ. ಸೂರ್ಯಕುಮಾರ್, ಉಳೆಪಾಡಿ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ಮೋಹನ್ದಾಸ ಸುರತ್ಕಲ್, ಎಂ.ಗೌತಮ್ ಜೈನ್, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್.ಶೆಟ್ಟಿ, ಬಳ್ಕುಂಜೆಗುತ್ತು ನಾರಾಯಣ ಮಾಣಿ, ಸಮಿತಿಯ ಪಂಜದ ಗುತ್ತು ಶಾಂತಾರಾಮ ಶೆಟ್ಟಿ, ಎಂ.ಎಚ್.ಅರವಿಂದ ಪೂಂಜಾ ಕಾರ್ನಾಡು, ಕೊಲ್ನಾಡು ಉತ್ರುಂಜೆ ಭುಜಂಗ ಎಂ. ಶೆಟ್ಟಿ, ಶಶೀಂದ್ರ ಮುದ್ದು ಸಾಲ್ಯಾನ್, ಚಂದ್ರಶೇಖರ್ ಜಿ., ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಅಧ್ಯಕ್ಷ ಕೋಲ್ನಾಡುಗುತ್ತು ರಾಮಚಂದ್ರ ನಾಯ್ಕ್, ನವೀನ್ಕುಮಾರ್ ಶೆಟ್ಟಿ ಎಡ್ಮೆಮಾರ್ ಇದ್ದರು.
ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ಕಾಂತಾಬಾರೆ ಬೂದಾಬಾರೆಯರ ಧರ್ಮ ಚಾವಡಿಯಲ್ಲಿ ಕಂಬಳವನ್ನು ನಡೆಸಲು ಸಮಿತಿಗೆ ಅನುಮತಿ ನೀಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ನಾಗದೇವರಲ್ಲಿ ಅರಮನೆಯ ಪುರೋಹಿತರಾದ ಅತ್ತೂರು ಬೈಲು ಉಡುಪರು ವಿಶೇಷವಾಗಿ ಪ್ರಾರ್ಥಿಸಿ, ಅರಮನೆಯ ಚಂದ್ರನಾಥ ಸ್ವಾಮಿ ಬಸದಿ, ಪದ್ಮಾವತಿ ಅಮ್ಮನವರ ಬಸದಿಗಳಲ್ಲಿ ವಿಧಿ ವಿಧಾನ ನಡೆಸಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪ್ರಾರ್ಥಿಸಿಕೊಂಡು ಬಂದಿರುವ ಕಂಬಳ ಕರೆಯಲ್ಲಿ ಪರಂಪರೆಯಿಂದ ನಡೆದುಕೊಂಡು ಬಂದಿರುವ ಬಪ್ಪನಾಡು ಬಡುಗುಹಿತ್ಲುವಿನ ದಿ.ಕಾಂತು ಪೂಜಾರಿ ಅವರ ಮನೆತನದ ಕಂಬಳದ ಕೋಣಗಳು ಕರೆಯಲ್ಲಿ ಇಳಿಯಲು ಸೂಚನೆ ನೀಡಿ, ಕೋಣಗಳ ಮೈಗೆ ಹಚ್ಚಲು ಅರಮನೆಯಿಂದ ಎಣ್ಣೆಯನ್ನು ನೀಡುವ ಸಂಪ್ರದಾಯ ನಡೆಸಿದರು. ಕಂಬಳದ ಕರೆಯಲ್ಲಿ ಮೂರು ಬಾರಿ ಸಾಂಪ್ರದಾಯಿಕ ಓಟ ನಡೆಸಿದ ಕೋಣಗಳಿಗೆ ವಿಶೇಷ ಪೂಜೆ ನಡೆಸಲಾಯಿತು.
ಎರುಬಂಟ ದೈವಗಳ ಜೊತೆಗೆ ಅರಮನೆಯ ಕೋಣಗಳನ್ನು ಡೋಲು, ತಾಸೆ , ಚಂಡೆಯ ನೀನಾದದೊಂದಿಗೆ ಅರಮನೆಯಿಂದ ಭವ್ಯ ಮೆರವಣಿಗೆಯಲ್ಲಿ ಕಂಬಳದ ಗದ್ದೆಗೆ ತೆರಳಿ ಜೋಡುಕರೆಯಲ್ಲಿ ತೆಂಗಿನಕಾಯಿ, ಹಾಲು ಅಭಿಷೇಕವನ್ನು ನಡೆಸಿ, ಹಿಂಗಾರದೊಂದಿಗೆ ಕಂಬಳದ ಕರೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅರಮನೆಯ ಗೌರವದ ಸಂಕೇತವಾಗಿ ಅಲ್ಲಿನ ಜೋಡಿ ಕೋಣಗಳು ಕಂಬಳದ ಕರೆಯಲ್ಲಿ ಓಡಿದ ನಂತರ ಸ್ಪರ್ಧೆಗೆ ಆಗಮಿಸಿದ ಪ್ರತಿ ಕಂಬಳದ ಯಜಮಾನರಿಗೆ ಕಂಬಳ ಸಮಿತಿಯಿಂದ ವಿಶೇಷ ಗೌರವ ಸಲ್ಲಿಸಲಾಯಿತು. ಸುಮಾರು 100ಕ್ಕೂ ಹೆಚ್ಚು ಜೋಡಿ ಕೋಣಗಳು ಕನೆ ಹಲಗೆ, ಹಗ್ಗ ಕಿರಿಯ, ಹಿರಿಯ, ನೇಗಿಲು ಹಿರಿಯ, ಕಿರಿಯ, ಅಡ್ಡ ಹಲಗೆ ವಿಭಾಗದಲ್ಲಿ ಸ್ಪಧರ್ೆಯಲ್ಲಿ ಭಾಗವಹಿಸಿದೆವು. ಒಟ್ಟು 7.5 ಪವನ್ ಚಿನ್ನದ ಪದಕಗಳು ಬಹುಮಾನವಾಗಿ ಸಮಿತಿಯು ವಿಜೇತರಿಗೆ ನೀಡಲಿದೆ. ಬಪ್ಪನಾಡು ಕಾಂತು ಪೂಜಾರಿ ಮನೆತನದಿಂದ…
ಬಪ್ಪನಾಡು ಬಡಗುಹಿತ್ಲು ಮನೆತನ ದಿ.ಕಾಂತು ಪೂಜಾರಿ ಮನೆತನದ ಕೋಣಗಳಿಗೆ ವಿಶೇಷ ಗೌರವ ಮೂಲ್ಕಿ ಸೀಮೆ ಅರಸು ಕಂಬಳಕ್ಕಿದೆ. ಬಪ್ಪನಾಡು ಶೇಖರ ಕೋಟ್ಯಾನ್ ಮನೆಯಿಂದ ಹೊರಟು, ಧೂಮಾವತಿ ಪಂಜುರ್ಲಿ ದೈವಸ್ಥಾನದಲ್ಲಿ ಪ್ರಾರ್ಥಿಸಿ, ಕಾಂತು ಪೂಜಾರಿಯವರ ಮನೆಯ ದೈವಗಳಲ್ಲಿ ಅಪ್ಪಣೆ ಕೇಳಿಕೊಂಡು, ಗ್ರಾಮದ ಕೋರ್ದಬ್ಬು ಹಾಗೂ ನಾಗದೇವರಲ್ಲಿ ಪ್ರಾರ್ಥಿಸಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿಕೊಂಡು ಪಡುಪಣಂಬೂರಿನ ಪೂವಪ್ಪ ಪೂಜಾರಿಯವರ ಮನೆಯಲ್ಲಿ ಆಶ್ರಯ ಪಡೆದುಕೊಂಡು ಮೂಲ್ಕಿ ಸೀಮೆಯ ಅರಮನೆಗೆ ಬಂದು ಅಲ್ಲಿಂದ ಅರಸರ ಸೂಚನೆಯಂತೆ ಕಂಬಳದ ಕರೆಯಲ್ಲಿ ಜೋಡಿ ಕೋಣಗಳನ್ನು ಓಡಿಸಿದ ನಂತರವೇ ಉಳಿದ ಕೋಣಗಳು ಕರೆಗೆ ಇಳಿಯುವ ಸಂಪ್ರದಾಯ ನಡೆಯಿತು.