Advertisement

28 ವರ್ಷಗಳ ಹಿಂದೆ ಕೋಣಕ್ಕೆ ಲಾರಿ ಡಿಕ್ಕಿ ಹೊಡೆದ ಪ್ರಕರಣ; ಮಾಜಿ ಚಾಲಕನಿಗೆ ಕೋರ್ಟ್‌ ಸಮನ್ಸ್!

11:57 AM Jun 29, 2023 | Team Udayavani |

ಲಕ್ನೋ: ದೇಶದಲ್ಲಿನ ಕಾನೂನು ಪ್ರಕ್ರಿಯೆ ಎಷ್ಟು ವಿಳಂಬವಾಗುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದ್ದು, ಸುಮಾರು 28 ವರ್ಷಗಳ ಹಿಂದೆ ಲಾರಿ ಡಿಕ್ಕಿ ಹೊಡೆದು ಕೋಣ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 83 ವರ್ಷದ ಅಜ್ಜನಿಗೆ ಉತ್ತರಪ್ರದೇಶದ ಕೋರ್ಟ್‌ ಸಮನ್ಸ್‌ ಜಾರಿಗೊಳಿಸಿದೆ.‌

Advertisement

ಇದನ್ನೂ ಓದಿ:Rajasthan; ಎರಡು ಟ್ರಕ್ ಗೆ ಡಿಕ್ಕಿ ಹೊಡೆದ ಲಾರಿ; ಐವರು ಸಜೀವ ದಹನ

ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅಚ್ಚನ್‌ ಎಂಬ ವ್ಯಕ್ತಿ ಎರಡು ದಶಕಗಳ ಹಿಂದೆ ನಿವೃತ್ತಿಯಾಗಿದ್ದರು. ಈಗ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಅನಿರೀಕ್ಷಿತ ಬೆಳವಣಿಗೆ ಎಂಬಂತೆ ಸೋಮವಾರ (ಜೂ.26) ಉತ್ತರಪ್ರದೇಶದ ಬರೇಲಿ ಪೊಲೀಸರು ಬಾರಾಬಂಕಿಯಲ್ಲಿರುವ ಅಚ್ಚನ್‌ ನಿವಾಸಕ್ಕೆ ಬಂದು ಕೋರ್ಟ್‌ ಸಮನ್ಸ್‌ ನೀಡಿರುವುದುಆಗಿ ವರದಿ ವಿವರಿಸಿದೆ.

ಅನಾರೋಗ್ಯ ಪೀಡಿತ ಅಚ್ಚನ್‌ ಅವರ ಸ್ಥಿತಿಯನ್ನು ಕಂಡು ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಪೊಲೀಸರಿಗೆ ಗೊಂದಲವಾಗಿತ್ತು. ಆದರೆ ಸಮನ್ಸ್‌ ಜಾರಿಯಾಗಿದ್ದರಿಂದ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ತಿಳಿಸಿರುವ ಪೊಲೀಸರು, ಒಂದು ವೇಳೆ ಗೈರುಹಾಜರಾದರೆ ಕಾನೂನು ಪ್ರಕಾರ ಬಂಧಿಸಬೇಕಾಗುತ್ತದೆ ಎಂದು ಹೇಳಿರುವುದಾಗಿ ವರದಿಯಾಗಿದೆ.

ಏನಿದು ಘಟನೆ:

Advertisement

1994ರಲ್ಲಿ ನಡೆದ ಘಟನೆಯ ಮೆಲುಕು ಹಾಕಿರುವ ಅಚ್ಚನ್‌ ಅವರು, ತಾನು ಉತ್ತರಪ್ರದೇಶ ಸಾರಿಗೆ ಇಲಾಖೆಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಅಂದು ಸರಕನ್ನು ತರುವ ನಿಟ್ಟಿನಲ್ಲಿ ಬರೇಲಿಗೆ ಹೋಗಿದ್ದೆ, ಅಲ್ಲಿಂದ ಫರಿದ್‌ ಪುರಕ್ಕೆ ತೆರಳಿದ್ದಾಗ ರಾತ್ರಿಯಾಗಿತ್ತು. ಆ ಸಂದರ್ಭದಲ್ಲಿ ಕೋಣವೊಂದು ದಿಢೀರನೆ ಅಡ್ಡಬಂದಿದ್ದು, ಬ್ರೇಕ್‌ ಹಾಕಿದ್ದೆ, ಆದರೆ ಬ್ರೇಕ್‌ ಫೇಲ್‌ ಆಗಿದ್ದ ಪರಿಣಾಮ ಕೋಣಕ್ಕೆ ಲಾರಿ ಡಿಕ್ಕಿ ಹೊಡೆದು, ಅದು ಸಾವನ್ನಪ್ಪಿತ್ತು. ಕೂಡಲೇ ನಾನು ಫರಿದ್‌ ಪುರ್‌ ಪೊಲೀಸ್‌ ಠಾಣೆಗೆ ತೆರಳಿ ಮಾಹಿತಿ ನೀಡಿದ್ದೆ. ಅದಾದ ನಂತರ ಎರಡು ಬಾರಿ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದ್ದು, ಜಾಮೀನು ಕೂಡಾ ಸಿಕ್ಕಿತ್ತು. ಆದರೆ ಇದೀಗ 28 ವರ್ಷಗಳ ನಂತರ ಮತ್ತೆ ಸಮನ್ಸ್‌ ಜಾರಿಯಾಗಿರುವುದು ಆಘಾತಕ್ಕೊಳಗಾಗುವಂತೆ ಮಾಡಿದೆ ಎಂದು ಅಚ್ಚನ್‌ ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next