Advertisement

#Budget2024; ಹೊಸ ಆದಾಯ ತೆರಿಗೆ ಸ್ಲ್ಯಾಬ್ ಘೋಷಣೆ: ಇಲ್ಲಿದೆ ವಿವರ

12:43 PM Jul 23, 2024 | Team Udayavani |

ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ ಬಜೆಟ್ ನಲ್ಲಿ ಹೊಸ ಟ್ಯಾಕ್ಸ್ ಸ್ಲ್ಯಾಬ್ ಘೋಷಣೆ ಮಾಡಿದ್ದಾರೆ.

Advertisement

3 ಲಕ್ಷದ ವರೆಗೆ ವರೆಗೆ ಯಾವುದೇ ತೆರಿಗೆ ಇಲ್ಲ. 3 ಲಕ್ಷ ರೂ ನಿಂದ 7ಲಕ್ಷ- 5% , 7 ಲಕ್ಷ ರೂ. ನಿಂದ 10 ಲಕ್ಷ ರೂ.-10%, 10 ಲಕ್ಷ ರೂ ನಿಂದ 12 ಲಕ್ಷ ರೂ-15%, 12 ಲಕ್ಷ ರೂ ನಿಂದ 15 ಲಕ್ಷ ರೂ- 20% 15 ಲಕ್ಷಕ್ಕೂ ಮೇಲೆ 30% ತೆರಿಗೆ ಪಾವತಿಸಬೇಕಾಗುತ್ತದೆ.

ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ, ಸಂಬಳದ ಉದ್ಯೋಗಿಗಳಿಗೆ ಪ್ರಮಾಣಿತ ಕಡಿತವನ್ನು 50,000 ರೂ.ನಿಂದ 75,000 ರೂ.ಗೆ ಏರಿಕೆ ಮಾಡಲಾಗಿದೆ.

“ತೆರಿಗೆ ಮೇಲ್ಮನವಿ ಸಲ್ಲಿಸಲು ವಿತ್ತೀಯ ಮಿತಿಯನ್ನು ITATಗೆ 60 ಲಕ್ಷ ರೂ., ಹೈಕೋರ್ಟ್‌ಗಳಿಗೆ ರೂ. 2 ಕೋಟಿ ರೂ. ಮತ್ತು ಸುಪ್ರೀಂ ಕೋರ್ಟ್‌ಗೆ ರೂ. 5 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.ಎಲ್ಲಾ ವರ್ಗದ ಹೂಡಿಕೆದಾರರಿಗೆ ರದ್ದುಪಡಿಸಿದ Angel tax ರದ್ದುಗೊಳಿಸಲು ಪ್ರಸ್ತಾಪ. ಕಾರ್ಪೊರೇಟ್ ತೆರಿಗೆ ದರ ವಿದೇಶಿ ಕಂಪನಿಗಳ ಮೇಲೆ ಶೇಕಡಾ 40 ರಿಂದ 35 ಕ್ಕೆ ಇಳಿಕೆ” ಮಾಡಲಾಗಿದೆ.

“ಮುಂದಿನ 6 ತಿಂಗಳುಗಳಲ್ಲಿ customs duty ಯ ಸಮಗ್ರ ಪರಿಶೀಲನೆ. ಇ-ಕಾಮರ್ಸ್‌ನಲ್ಲಿ TDS ದರವನ್ನು 0.1% ಕ್ಕೆ ಇಳಿಸಲಾಗುವುದು. ದತ್ತಿ ಸಂಸ್ಥೆಗಳಿಗೆ ಎರಡು ತೆರಿಗೆ ವಿನಾಯಿತಿ ನಿಯಮಗಳು ಒಂದಾಗಿ ವಿಲೀನ ಮಾಡಲಾಗಿದೆ. ತೆರಿಗೆ ದಿನಾಂಕವನ್ನು ಸಲ್ಲಿಸುವವರೆಗೆ TDS ವಿಳಂಬವನ್ನು ಅಪರಾಧವಲ್ಲ’ ಎಂದು ಸಚಿವೆ ನಿರ್ಮಲಾ ಘೋಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next