Advertisement

ಬಜೆಟ್‌ -ವಿಲನ್‌ ಮತ್ತು ಶಿವಣ್ಣ

06:00 AM Oct 05, 2018 | |

500 ಥಿಯೇಟರ್‌ಗಳಲ್ಲಿ ಚಿತ್ರ ರಿಲೀಸ್‌ ಮಾಡ್ತೀವಿ, ಎರಡು ವಾರದಲ್ಲಿ ಹಣ ಬರುತ್ತೆ ಎಂದು ಸುಲಭವಾಗಿ ಹೇಳಬಹುದು. ಈ ತರಹ ಆದಾಗ ಸಿನಿಮಾಕ್ಕೆ ರಿಪೀಟ್‌ ಆಡಿಯನ್ಸ್‌ ಬರಲ್ಲ. ಒಂದು ಸಿನಿಮಾದ ನಿಜವಾದ ಗೆಲುವು ಚಿತ್ರವನ್ನು ಮತ್ತೆ ಮತ್ತೆ ಜನ ನೋಡಿದಾಗ ಸಿಗುತ್ತದೆ…

Advertisement

“15 ಲಕ್ಷದಿಂದ 30 ಕೋಟಿಗೂ ಅಧಿಕ ಬಜೆಟ್‌ನ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದೇನೆ. ಇವೆಲ್ಲವನ್ನು ಊಹಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ’
-ಹೀಗೆ ಹೇಳಿ ಒಂದು ಕ್ಷಣ ಸುಮ್ಮನಾದರು ಶಿವರಾಜ­ಕುಮಾರ್‌. ಅವರ ಹಿಂದೆ “ದಿ ವಿಲನ್‌’ ಚಿತ್ರದ ಕಲರ್‌ಫ‌ುಲ್‌ ಪೋಸ್ಟರ್‌ ರಾರಾಜಿಸುತ್ತಿತ್ತು. ಸದ್ಯ ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಚಿತ್ರ. ಜೊತೆಗೆ ಬಿಗ್‌ಬಜೆಟ್‌ ಬೇರೆ. ಈ ಕಾರಣದಿಂದಲೇ ಶಿವಣ್ಣ “15 ಲಕ್ಷದಿಂದ 30 ಕೋಟಿಗೂ ಅಧಿಕ ಬಜೆಟ್‌’ ಎಂದಿದ್ದು. “ಇಷ್ಟು ವರ್ಷದ ಜರ್ನಿಯಲ್ಲಿ ಇವೆಲ್ಲ ಹೇಗೆ ಸಾಧ್ಯವಾಯಿತೋ ಗೊತ್ತಿಲ್ಲ. ಎಲ್ಲಾ ತರಹದ, ಎಲ್ಲಾ ರೀತಿಯ ಬಜೆಟ್‌ನ ಚಿತ್ರಗಳಲ್ಲಿ ನಟಿಸುತ್ತಾ ಬಂದಿದ್ದೇವೆ. ಕೆಲವು ಸಿನಿಮಾಗಳನ್ನು ಮುಂಚಿತವಾಗಿ ಬಿಗ್‌ ಬಜೆಟ್‌ ಚಿತ್ರ ಎಂದು ಫ್ರೆàಮ್‌ ಮಾಡಿಬಿಡುತ್ತೀವಿ. ಸಹಜವಾಗಿ ಈ ತರಹ ಆದಾಗ ಸಣ್ಣ ಭಯ ಕಾಡುತ್ತದೆ. ಯಾವುದೇ ಕೆಲಸವನ್ನಾದರೂ ನಾನು ಭಯ-ಭಕ್ತಿಯಿಂದಲೇ ಮಾಡುತ್ತೇನೆ. ಸ್ಕೂಲ್‌ ಡೇಸ್‌ನಲ್ಲಿದ್ದಾಗ ಎಕ್ಸಾಂ ಭಯ, ಮದುವೆಯಾದ ನಂತರ ಫ್ಯಾಮಿಲಿ ಭಯ, ಈಗ ಸಿನಿಮಾ ಭಯ …’ ಎಂದು ನಕ್ಕರು ಶಿವಣ್ಣ.

ಶಿವರಾಜಕುಮಾರ್‌ ಪ್ರಕಾರ, ಸಿನಿಮಾವೊಂದಕ್ಕೆ ಕೇವಲ ಬಜೆಟ್‌ ಅಷ್ಟೇ ಮುಖ್ಯವಾಗುವುದಿಲ್ಲ, ಕಥೆ ಕೂಡಾ ಮುಖ್ಯ ಎಂಬುದನ್ನು ಶಿವಣ್ಣ ಒಪ್ಪುತ್ತಾರೆ. “ನೀವು ಎಷ್ಟು ಬಜೆಟ್‌ನಲ್ಲಿ ಸಿನಿಮಾ ಮಾಡುತ್ತೀರಿ ಅನ್ನೋದು ಮುಖ್ಯವಲ್ಲ. ಆ ಸಿನಿಮಾವನ್ನು ಜನ ಹೇಗೆ ಸ್ವೀಕರಿಸಿದರು, ಅದರಿಂದ ಎಷ್ಟು ಬಿಝಿನೆಸ್‌ ಆಯಿತು ಅನ್ನೋದು ಮುಖ್ಯವಾಗುತ್ತದೆ. “ತವರಿಗೆ ಬಾ ತಂಗಿ’ ಚಿತ್ರ ತಯಾರಾಗಿದ್ದು ಒಂದು ಕೋಟಿ ರೂಪಾಯಿಯಲ್ಲಿ.

ಆದರೆ, ಆ ಕಾಲಕ್ಕೆ ಅದು ಒಳ್ಳೆಯ ಬಿಝಿನೆಸ್‌ ಮಾಡಿತು. ಇನ್ನು, ಏಳು ಕೋಟಿ ರೂಪಾಯಿಯಲ್ಲಿ ಸಿನಿಮಾ ಮಾಡಿಯೂ ದೊಡ್ಡ ಬಿಝಿನೆಸ್‌ ಮಾಡಬಹುದು’ ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ಗಳ ಸಿನಿಮಾ ವಿಷಯದಲ್ಲಿ ಒಂದು ಟ್ರೆಂಡ್‌ ಆರಂಭವಾಗಿದೆ. ಅದು ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಿ, ಎರಡೇ ವಾರಕ್ಕೆ ಹಾಕಿದ ಬಂಡವಾಳ ವಾಪಾಸ್‌ ಪಡೆಯುತ್ತಿರುವುದು. “500 ಥಿಯೇಟರ್‌ಗಳಲ್ಲಿ ಚಿತ್ರ ರಿಲೀಸ್‌ ಮಾಡ್ತೀವಿ, ಎರಡು ವಾರದಲ್ಲಿ ಹಣ ಬರುತ್ತೆ ಎಂದು ಸುಲಭವಾಗಿ ಹೇಳಬಹುದು. ಈ ತರಹ ಆದಾಗ ಸಿನಿಮಾಕ್ಕೆ ರಿಪೀಟ್‌ ಆಡಿಯನ್ಸ್‌ ಬರಲ್ಲ. ಒಂದು ಸಿನಿಮಾದ ನಿಜವಾದ ಗೆಲುವು ಚಿತ್ರವನ್ನು ಮತ್ತೆ ಮತ್ತೆ ಜನ ನೋಡಿದಾಗ ಸಿಗುತ್ತದೆ. ತುಂಬಾ ದಿನಗಳ ನಂತರ ಆ ತರಹ “ರಾಜ್‌ಕುಮಾರ’ ಹಾಗೂ “ಟಗರು’ ಚಿತ್ರವನ್ನು ಜನ ಮತ್ತೆ ಮತ್ತೆ ನೋಡಿದರು.  ಮೂರ್‍ನಾಲ್ಕು ವರ್ಷದ ಮಕ್ಕಳು ಕೂಡಾ “ಟಗರು ಟಗರು’ ಎನ್ನುತ್ತಿದ್ದಾರೆ, ಆ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಈ ತರಹ ಆದಾಗ ನಾವು ಸಿನಿಮಾ ಮಾಡಿದ್ದಕ್ಕೂ ಸಾರ್ಥಕ ಎನಿಸುತ್ತದೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ ಶಿವಣ್ಣ.

ಸದ್ಯ ಶಿವರಾಜಕುಮಾರ್‌ ಅವರಿಗೆ ಒಂದು ಭಯ ಕಾಡುತ್ತಿದೆ. ಅದು ಅಭಿಮಾನಿಗಳು “ದಿ ವಿಲನ್‌’ ಸಿನಿಮಾವನ್ನು ಯಾವ ರೀತಿ ಬ್ರಾಂಡ್‌ ಮಾಡಿಬಿಡುತ್ತಾರೋ ಎಂದು. “ಅಭಿಮಾನಿಗಳು,  “ಅವರಾ-ಇವರಾ’, “ನೀನಾ-ನಾನಾ’ ಎಂದು ಬ್ರಾಂಡ್‌ ಮಾಡುತ್ತಿದ್ದಾರೆ. ಸಿನಿಮಾವನ್ನು ಸಿನಿಮಾವಾಗಿ ನೋಡಿ ಎಂಬುದೇ ನನ್ನ ವಿನಂತಿ. ಅಭಿಮಾನಿಗಳ ಚರ್ಚೆ, ಜಗಳ “ವಿಲನ್‌’ ಸಿನಿಮಾಕ್ಕೆ ವಿಲನ್‌ ಆಗಬಾರದು. ಕಾಂಬಿನೇಶನ್‌ ಸಿನಿಮಾಗಳಲ್ಲಿ ಬರೀ ಒಬ್ಬನ ಮುಖನೇ ತೋರಿಸಿ, ಜನಕ್ಕೆ ಬೇಸರವಾಗಿ, “ಇವನ ಮುಖನೇ ಎಷ್ಟ್ ತೋರಿಸ್ತಾರೆ’ ಅಂದರೂ ಕಷ್ಟ. ಅದರ ಬದಲು ಯಾವಾಗ ಇಬ್ಬರು ನಟರು ಒಟ್ಟಾಗುತ್ತಾರೆ, ಒಟ್ಟಾಗಿ ಏನು ಮಾಡುತ್ತಾರೆಂಬ ಕುತೂಹಲವನ್ನು ಸೃಷ್ಟಿಸುತ್ತಾ ಸಿನಿಮಾ ಸಾಗಬೇಕು’ ಎನ್ನುವುದು ಶಿವರಾಜ ಕುಮಾರ್‌ ಮಾತು. ಶಿವರಾಜಕುಮಾರ್‌ ಹಾಗೂ ಪ್ರೇಮ್‌ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಮೂರನೇ ಸಿನಿಮಾ “ದಿ ವಿಲನ್‌’. ಶಿವರಾಜಕುಮಾರ್‌ ಗಮನಿಸಿರುವಂತೆ, ಪ್ರೇಮ್‌ ಸಾಕಷ್ಟು ಅಪ್‌ಡೇಟ್‌ ಆಗಿದ್ದಾರೆ. ನಿರೂಪಣೆಯ ಶೈಲಿಯೂ ಬದಲಾಗಿದೆ. ಹತ್ತು ದೃಶ್ಯಗಳಲ್ಲಿ ಹೇಳುವುದನ್ನು ಒಂದು ದೃಶ್ಯದಲ್ಲಿ ಕಟ್ಟಿಕೊಡುವ ಮಟ್ಟಿಗೆ ಪ್ರಮ್‌ ಬದಲಾಗಿದ್ದಾರೆ. “ಪ್ರೇಮ್‌ ಚಿಕ್ಕ ಹುಡುಗ ಅಲ್ಲ, ಅವರಿಗೆ ವಯಸ್ಸಾಗಿದೆ, ಅವರ ಆಲೋಚನೆಗಳು ಬದಲಾಗಿದೆ. ನಾನಂತೂ ಯಂಗ್‌ ಅಲ್ವೇ ಅಲ್ಲ. ಸೋ, ತುಂಬಾ ಭಿನ್ನವಾಗಿ ಯೋಚಿಸುವುದನ್ನು ಪ್ರೇಮ್‌ ಕಲಿತಿದ್ದಾರೆ’ ಎನ್ನುತ್ತಾರೆ. ‘

Advertisement

ಸದ್ಯ ಶಿವರಾಜಕುಮಾರ್‌ ಎಲ್ಲೇ ಹೋದರೂ ಕೇಳುವ ಒಂದು ಪ್ರಶ್ನೆ ಎಂದರೆ “ದಿ ವಿಲನ್‌’ನಲ್ಲಿ “ಜೋಗಿ’ ಸೆಂಟಿಮೆಂಟ್‌ ಇದೆಯಾ ಎಂದು. ಇದಕ್ಕೆ ಶಿವರಾಜಕುಮಾರ್‌ ನೇರವಾಗಿ ಉತ್ತರಿಸುತ್ತಾರೆ. “”ಜೋಗಿ ಯಾವತ್ತೂ “ಜೋಗಿ’ನೇ. ಅದನ್ನು ಮತ್ತೆ ಟಚ್‌ ಮಾಡೋಕೆ ಸಾಧ್ಯವಿಲ್ಲ. ತೆಲುಗು ನಟ ಬಾಲಕೃಷ್ಣ ಅವರು ಸಿನಿಮಾ ನೋಡಿ ಖುಷಿಯಾಗಿ, “ತುಂಬಾ ಚೆನ್ನಾಗಿದೆ. ಇದನ್ನು ತೆಲುಗಿಗೆ ರೀಮೇಕ್‌ ಮಾಡುವ ಬದಲು ಡಬ್‌ ಮಾಡಿ’ ಎಂದರು. “ಜೋಗಿ’ ಚಿತ್ರದ ಬಗ್ಗೆ ನನಗೆ ಫ‌ಸ್ಟ್‌ರಿಪೋರ್ಟ್‌ ಹೇಳಿದ್ದು, ವಿಕ್ಟರಿ ವೆಂಕಟೇಶ್‌. ಸಿನಿಮಾ ನೋಡಿ ಖುಷಿಯಿಂದ ಮಾತನಾಡಿದರು. ಕೆಲವು ಸಿನಿಮಾಗಳೇ ಹಾಗೆ. ಅದನ್ನು ದೂರದಿಂದಲೇ ನೋಡಬೇಕು. ಮತ್ತೆ ಮುಟ್ಟೋಕೆ ಹೋಗಬಾರದು’ ಎಂದು “ಜೋಗಿ’ ಸಿನಿಮಾವನ್ನು ನೆನಪಿಸಿಕೊಳ್ಳುತ್ತಾರೆ ಶಿವಣ್ಣ.

ಸದ್ಯ ಶಿವಣ್ಣ “ರುಸ್ತುಂ’ನಲ್ಲಿ ಪೊಲೀಸ್‌ ಆಫೀಸರ್‌ ಆಗಿ ನಟಿಸುತ್ತಿದ್ದಾರೆ. ಈ ಹಿಂದೆಯೂ ಶಿವಣ್ಣ ಕೆಲವು ಚಿತ್ರಗಳಲ್ಲಿ ಪೊಲೀಸ್‌ ಆಫೀಸರ್‌ ಆಗಿ ನಟಿಸಿದ್ದಾರೆ. ಆ ಚಿತ್ರಗಳು ಹಿಟ್‌ ಆಗಿವೆ. ಅದೇ ಕಾರಣದಿಂದ ಅವರಿಗೆ ಪೊಲೀಸ್‌ ಪಾತ್ರ ತನಗೆ ಲಕ್ಕಿ ಪಾತ್ರ ಎನಿಸಿದೆ. 

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next