Advertisement

ಬಜೆಟ್ ಅಧಿವೇಶನಕ್ಕೆ ಪ್ರಣಬ್ ಚಾಲನೆ; ದೇಶದ ಜನಶಕ್ತಿಗೆ ಸರ್ಕಾರದ ಸಲಾಂ

11:19 AM Jan 31, 2017 | Sharanya Alva |

ನವದೆಹಲಿ: ಲೋಕಸಭೆಯ ಉಭಯ ಸದನಗಳ ಬಜೆಟ್ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದರು.

Advertisement

ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್ ನಲ್ಲಿ ವಿಲೀನ ಆಗಿದೆ. ಅ ನಿಟ್ಟನಲ್ಲಿ ಮೊದಲ ಬಾರಿಗೆ ಏಕಕಾಲದಲ್ಲಿ ರೈಲ್ವೆ ಮತ್ತು ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.

2017-18ನೇ ಸಾಲಿನ ಬಜೆಟ್ ಫೆ.1ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಬಜೆಟ್ ಅಧಿವೇಶಕ್ಕೆ ಚಾಲನೆ ದೊರಕಿದೆ. ನಾಳೆ 11ಗಂಟೆಗೆ ಲೋಕಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಲಿದ್ದಾರೆ.

ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಾರೋಟಿನಲ್ಲಿ ಸಂಸತ್ ಗೆ ಆಗಮಿಸಿದರು. 

ರಾಷ್ಟ್ರಪತಿ ಭಾಷಣದ ಹೈಲೈಟ್ಸ್:
*ಮೊದಲ ಬಾರಿಗೆ ಏಕಕಾಲದಲ್ಲಿ ರೈಲ್ವೆ ಮತ್ತು ಸಾಮಾನ್ಯ ಬಜೆಟ್ ಮಂಡನೆ
*26ಕೋಟಿ ಜನ್ ಧನ್ ಖಾತೆ ತೆರೆಯಲಾಗಿದೆ
*2.2 ಕೋಟಿ ಜನರು ಎಲ್ ಪಿಜಿ ಸಬ್ಸಿಡಿಯನ್ನು ತ್ಯಜಿಸಿದ್ದಾರೆ
*ಬಡವರು, ಹಿಂದುಳಿದವರ ಅಭಿವೃದ್ಧಿಯೇ ಸರ್ಕಾರದ ಗುರಿ
*ಸಂಸತ್ ನ ಉಭಯ ಸದನಗಳ ಸದಸ್ಯರನ್ನು ನಾನು ಈ ಸಂದರ್ಭದಲ್ಲಿ ಸ್ವಾಗತಿಸುತ್ತೇನೆ
*1.2ಕೋಟಿ ಗ್ರಾಹಕರು ಎಲ್ ಪಿಜಿ ಸಬ್ಸಿಡಿ ತ್ಯಜಿಸಿದ್ದಾರೆ. 
*ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಕೇಂದ್ರದ ಗುರಿ
*ಮುದ್ರಾ ಯೋಜನೆಯಡಿ ಜನರಿಗೆ ಸಾಲ, ಸೌಲಭ್ಯ
*ಮೂರು ರಾಜ್ಯಗಳು ಬಯಲು ಶೌಚ ಮುಕ್ತ ರಾಜ್ಯ ಎಂದು ಘೋಷಿಸಿಕೊಂಡಿವೆ
*ಸ್ವಚ್ಚ ಭಾರತ್ ಆಂದೋಲನ ಜನಾಂದೋಲನವಾಗಿ ಪರಿವರ್ತನೆಗೊಂಡಿದೆ
*ಕಪ್ಪು ಹಣದ ವಿರುದ್ಧ ಹೋರಾಟ ಮುಂದುವರಿಯಲಿದೆ
*ರೈತರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಎಲ್ಲಾ ರೀತಿಯ ಕ್ರಮ
*ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಿಂದ ಲಾಭ
*ಸೇನೆಯಲ್ಲಿರುವ ಮಹಿಳೆಯರಿಗೂ ಸಮಾನ ಅವಕಾಶ
*ಮಹಿಳೆಯರ ಅಭಿವೃದ್ಧಿ ಸರ್ಕಾರದ ಗುರಿ
*ಸ್ಕಿಲ್ ಡೆವಲಪ್ ಮೆಂಟ್ ಗಾಗಿ ಹಲವು ಯೋಜನೆ ಜಾರಿ
*ಯುಎನ್ ಐ ನಂಬರ್ ನಿಂದ ದೇಶದ ಕಾರ್ಮಿಕರಿಗೆ ಲಾಭವಾಗಿದೆ
*ಜನಶಕ್ತಿಗೆ ಸರ್ಕಾರದ ಸಲಾಂ
*ದೇಶದ ಗ್ರಾಮಗಳಲ್ಲಿನ ಬ್ಯಾಂಕಿಂಗ್ ಅಭಿವೃದ್ಧಿ
*ಮನೆ ಇಲ್ಲದವರಿಗೆ ಮನೆ ಕಟ್ಟಿಸುವುದು ಸರ್ಕಾರದ ಸಂಕಲ್ಪ
*5 ಕೋಟಿ ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ
*ಗ್ರಾಮಸ್ಥರ ಜೀವನ ಮಟ್ಟ ಕೇಂದ್ರ ಸರ್ಕಾರ ಸುಧಾರಿಸಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next