Advertisement

ಬಜೆಟ್ ಅಧಿವೇಶನ ಆರಂಭ:ಪಕ್ಷಗಳಿಗಿಂತಲೂ ದೇಶ ದೊಡ್ಡದು; ಪ್ರಧಾನಿ ಮೋದಿ

11:01 AM Jan 29, 2018 | Team Udayavani |

ನವದೆಹಲಿ: ದೇಶದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ಅನ್ನು ಮಂಡಿಸಲಾಗುತ್ತಿದೆ. ಬಜೆಟ್ ದೇಶದ ಅರ್ಥ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಸಂಸತ್ ಬಜೆಟ್ ಅಧಿವೇಶನ ಸೋಮವಾರ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಸಂಸತ್ ಭವನದ ಬಳಿ ಪ್ರಧಾನಿ ಸುದ್ದಿಗಾರರ ಜತೆ ಮಾತನಾಡುತ್ತ ಈ ಪ್ರತಿಕ್ರಿಯೆ ನೀಡಿದರು.

ಬಜೆಟ್ ಅಧಿವೇಶನದಲ್ಲಿ ತ್ರಿವಳಿ ತಲಾಖ್ ವಿಧೇಯಕ ಅಂಗೀಕಾರವಾಗುವ ವಿಶ್ವಾಸ ಇದೆ ಎಂದು ಪ್ರಧಾನಿ ಹೇಳಿದರು, ಅಲ್ಲದೇ ತ್ರಿವಳಿ ತಲಾಖ್ ವಿಧೇಯಕ ಬೆಂಬಲಿಸುವಂತೆ ಪ್ರಧಾನಿ ಮೋದಿ ಎಲ್ಲಾ ಪ್ರತಿಪಕ್ಷಗಳ ಸದಸ್ಯರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ ಪ್ರಧಾನಿ, ಪಕ್ಷಗಳಿಗಿಂತಲೂ ದೇಶ ದೊಡ್ಡದು ಎಂದರು. ಭಾನುವಾರ ಸಂಸತ್ ಭವನದಲ್ಲಿ ಸರ್ವ ಪಕ್ಷಗಳ ಸಭೆ ನಡೆದಿದ್ದು, ಬೇರೆ, ಬೇರೆ ವಿಚಾರಗಳನ್ನೆತ್ತಿ ಅಧಿವೇಶನದ ವೇಳೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಿದ್ಧವಾಗಿವೆ. ಮತ್ತೊಂದೆಡೆ ತ್ರಿವಳಿ ತಲಾಖ್ ನಂತ ಪ್ರಮುಖ ವಿಧೇಯಕಗಳಿಗೆ ಹೇಗಾದರೂ ಅಂಗೀಕಾರ ಪಡೆಯಲೇಬೇಕು ಎಂಬ ಯತ್ನ ಸರ್ಕಾರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next