ನವದೆಹಲಿ: 2023-24ರ ಕೇಂದ್ರ ಬಜೆಟ್ ರೈತರು, ಮಹಿಳೆಯರು, ಅಂಚಿನಲ್ಲಿರುವ ವರ್ಗಗಳು ಮತ್ತು ಮಧ್ಯಮ ವರ್ಗದವರಿಗೆ ಬೆಂಬಲ ನೀಡಲು ಆದ್ಯತೆಯೊಂದಿಗೆ ಬೆಳವಣಿಗೆ ಮತ್ತು ಕಲ್ಯಾಣದ ಮೇಲೆ ಕೇಂದ್ರೀಕ್ರತವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ.
ಬಜೆಟ್ ಪ್ರಸ್ತಾವನೆಗಳು ದೇಶವು USD 5 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ಸಾಧಿಸಲು ಮತ್ತು ಕೆಲವೇ ವರ್ಷಗಳಲ್ಲಿ ಜಾಗತಿಕವಾಗಿ “ಟಾಪ್ ಮೂರು” ಆರ್ಥಿಕತೆಯಾಗುವತ್ತ ಕೊಂಡೊಯ್ಯುತ್ತದೆ ಎಂದು ಸಿಂಗ್ ಹೇಳಿದರು.
ಸಣ್ಣ ಉದ್ದಿಮೆದಾರರು, ರೈತರು ಮತ್ತು ವೃತ್ತಿಪರರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳಿಗೆ ಅನುಕೂಲವಾಗುವ ಬೆಳವಣಿಗೆ ಮತ್ತು ಕಲ್ಯಾಣ ಆಧಾರಿತ ನೀತಿಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಸರ್ಕಾರದ ಬದ್ಧತೆಯನ್ನು ಬಜೆಟ್ ಪ್ರದರ್ಶಿಸಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ರೈತರು, ಮಹಿಳೆಯರು, ಅಂಚಿನಲ್ಲಿರುವ ವರ್ಗಗಳು ಮತ್ತು ಮಧ್ಯಮ ವರ್ಗದವರಿಗೆ ಬೆಂಬಲ ನೀಡಲು ಆದ್ಯತೆಯೊಂದಿಗೆ ಬೆಳವಣಿಗೆ ಮತ್ತು ಕಲ್ಯಾಣದ ಮೇಲೆ ಕೇಂದ್ರೀಕರಿಸಿದ್ದಾರೆ, ”ಎಂದು ಅವರು ಟ್ವೀಟ್ ಮಾಡಿದ್ದಾರೆ.