Advertisement
ವಿದ್ಯುತ್ ರಹಿತವಾದ 1.65 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದ ಮನೆಗಳನ್ನು ಈಗಾಗಲೇ ಗುರಿತಸಲಾಗಿದೆ. ಈ ಪೈಕಿ ಬೆಳಕು ಯೋಜನೆ ಅನ್ವಯ 98, 448 ಮನೆಗಳಿಗೆ ಸಂಪರ್ಕ ನೀಡಲಾಗಿದ್ದು, ಉಳಿದ ಮನೆಗಳಿಗೆ ಅತಿ ಶೀಘ್ರದಲ್ಲಿ ಸಂಪರ್ಕ ಕಲ್ಪಿಸುವುದಾಗಿ ಆಯವ್ಯಯದಲ್ಲಿ ಪ್ರಸ್ತಾಪಿಸಿದ್ದಾರೆ. ಬೆಳಕು ಯೋಜನೆಯ ಸಂಕಲ್ಪ ಸಿದ್ಧಿಗೆ ಇದರಿಂದ ಬಲ ಬಂದಂತಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Related Articles
Advertisement
ರಾಜ್ಯದ ನವೀಕರಿಸಬಹುದಾದ ಇಂಧನ ಮೂಲಗಳನ್ನು ಹೆಚ್ಚಿಸಲು ಶರಾವತಿ ಸಂಕೀರ್ಣದಲ್ಲಿ ೨೦೦೦ ಮೆ.ವ್ಯಾ ಸಾಮರ್ಥ್ಯದ ಭೂಗರ್ಭ ವಿದ್ಯುತ್ ಕೇಂದ್ರ ಸ್ಥಾಪನೆಗೆ 5391ಕೋಟಿ ರೂ, ಕೆಪಿಟಿಸಿಎಲ್ ವತಿಯಿಂದ ೬೪ ಹೊಸ ಉಪಕೇಂದ್ರಗಳ ಸ್ಥಾಪನೆ, ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್ ನೀತಿಗೆ ಕೈ ಜೋಡಿಸಲು ರಾಜ್ಯ ಗ್ರೀನ್ ಹೈಡ್ರೋಜನ್ ನೀತಿ ರೂಪಿಸಲು ಪ್ರಸ್ತಾಪಿಸಲಾಗಿದೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ೫೦೦೦ ಮೆಗಾ ವ್ಯಾಟ್ ಸಾಮರ್ಥ್ಯದ ಹೈಬ್ರಿಡ್ ಪಾರ್ಕ್ ಸ್ಥಾಪನೆಯ ಸಾಧ್ಯಾಸಾಧ್ಯತೆ ಬಗ್ಗೆ ಪರಿಶೀಲಿಸಲು ನಿರ್ಧರಿಸಲಾಗಿದೆ. ಪಿಎಂ-ಕುಸುಮ್ ಯೋಜನೆ ಅನ್ವಯ 227 ಕೋಟಿ ರೂ.ವೆಚ್ಚದಲ್ಲಿ 10,000 ಸೌರಶಕ್ತಿ ಆಧರಿತ ನೀರಾವರಿ ಪಂಪ್ ಸೆಟ್ ಗಳನ್ನು ಕ್ರೆಡಲ್ ಮೂಲಕ ಅನುಷ್ಠಾನ ಮಾಡಲಾಗುತ್ತದೆ ಎಂದು ಹೇಳಿದರು.
ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ೨೦ ಕೋಟಿ ರೂ. ಒದಗಿಸಲಾಗಿದ್ದು, ನೆರೆ ರಾಜ್ಯಗಳಲ್ಲೂ ಕನ್ನಡ ಭಾಷೆ ಹಾಗೂ ಸಂಸ್ಕ್ರತಿ ಬೆಳೆಗಿಸಲು ಕಾಸರಗೋಡಿನಲ್ಲಿ ಕೈಯ್ಯಾರ ಕಿಂಜ್ಞಣ್ಣ ರೈ ಹಾಗೂ ಅಕ್ಕಲಕೋಟೆಯಲ್ಲಿ ಜಯದೇವಿತಾಯಿ ಲಿಗಾಡೆ ಹೆಸರಿನಲ್ಲಿ ಹಾಗೂ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.
ಎಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ನಾಲ್ಕು ಕಡೆ ಮಹರ್ಷಿ ನಾರಾಯಣಗುರು ವಸತಿ ಶಾಲೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. ನಾರಾಯಣಗುರುಗಳ ಬಗ್ಗೆ ನಮ್ಮ ಸರಕಾರ ಹಾಗೂ ಪಕ್ಷಕ್ಕೆ ಇರುವ ಗೌರವ ಎಂಥದ್ದು ಎಂಬುದು ಇದರಿಂದ ಅನಾವರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.