ದೇಶದ ಪ್ರಾಮಾಣಿಕ ತೆರಿಗೆ ಪಾವತಿ ದಾರರಿಗೆ ಅನುಕೂಲವಾಗುವಂಥ ಹಲವು ಕ್ರಮಗಳನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ಮುಂದಿನ 2 ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀ ಕರಣಗೊಳಿಸಲಾಗುತ್ತದೆ. ಸದ್ಯ ಇರುವ ವ್ಯವಸ್ಥೆಯಲ್ಲಿಯೇ ಕಾಗದ ರಹಿತ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಪಡಿ ಸಲಾಗುತ್ತದೆ ಎಂದು ಕೇಂದ್ರ ಸರಕಾರ ಪ್ರಕಟಿಸಿದೆ. 8.2 ಕೋಟಿ ತೆರಿಗೆ ಪಾವತಿ ಮಾಡುವವರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸರಕಾರ ಯಾವತ್ತೂ ಬದ್ಧವಾಗಿದೆ ಎಂದಿದೆ.
ಡಿಜಿಟಲೀಕರಣ ವ್ಯವಸ್ಥೆಯನ್ನು ಕೇಂದ್ರೀಯ ಅಬಕಾರಿ ಸುಂಕ ಪಾವತಿ, ಜಿಎಸ್‌ಟಿ ವ್ಯವಸ್ಥೆಗೂ ವಿಸ್ತರಿಸಲಾಗುತ್ತದೆ. ಇದರಿಂದಾಗಿ ತೆರಿಗೆ ಪಾವತಿದಾರರಿಗೆ ಅನುಕೂಲವಾಗಿರುವ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ ಎಂದಿದೆ.
“ವಿವಾದೆ ಸೆ ವಿಶ್ವಾಸ್’ ಭಾಗ2: ಆದಾಯ ತೆರಿಗೆ ಇಲಾಖೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ವಿವಿಧ ರೀತಿಯ ಖಟ್ಲೆಗಳ ಪ್ರಮಾಣ ಮತ್ತು ನ್ಯಾಯಾಲಯ ಗಳಲ್ಲಿ ವಿಚಾರಣೆಗಳಿಂದಾಗಿಯೇ ಸಮಯ ವ್ಯರ್ಥ ತಪ್ಪಿಸಲು ನಿಟ್ಟಿನಲ್ಲಿ ಕೇಂದ್ರ ಸರಕಾರ ಮುಂದಾಗಿದೆ. ಅದಕ್ಕಾಗಿ 2020ರಲ್ಲಿ ಜಾರಿಗೊಳಿಸಲಾಗಿದ್ದ ವಿವಾದ್ ಸೆ ವಿಶ್ವಾಸ್ ಯೋಜನೆಯನ್ನು ಮತ್ತೆ ಜಾರಿಗೆ ತರುವ ಬಗ್ಗೆ ಸರಕಾರ ಮುಂದಾಗಿದೆ.
ಏನಿದು ಯೋಜನೆ?: “ಯಾವುದೇ ವಿವಾದ ಇಲ್ಲ, ನಂಬಿಕೆ ಮಾತ್ರ’ ಯೋಜನೆಯನ್ನು 2020ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಕೋರ್ಟ್‌ಗಳಲ್ಲಿ ಮತ್ತು ನ್ಯಾಯಾಧಿಕರಣಗಳಲ್ಲಿ ವಿವಿಧ ಹಂತಗಳಲ್ಲಿ ಇರುವ ವಿವಾದಗಳಿಗೆ ಒಂದೇ ಹಂತದಲ್ಲಿ ಪರಿಹಾರ ಕಲ್ಪಿಸಿಕೊಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. 4.83 ಲಕ್ಷಕ್ಕೂ ಅಧಿಕ ತೆರಿಗೆ ವಿವಾದಗಳು ಕೋರ್ಟ್ ಗಳಲ್ಲಿ ಮತ್ತು ನ್ಯಾಯಮಂಡಳಿಗಳಲ್ಲಿ ವಿಚಾರಣೆ ಹಂತದಲ್ಲಿದೆ. ಅವುಗಳನ್ನು ಸೌಹಾರ್ದದಿಂದ ಪರಿಹರಿಸುವ ನಿಟ್ಟಿಲ್ಲಿ ಈ ಯೋಜನೆ ಜಾರಿಗೊಳಿಸ ಲಾಗಿತ್ತು. ಅದರ ಮೂಲಕ ಕೋರ್ಟ್ ವೆಚ್ಚ, ಸಮಯ ಉಳಿತಾಯ ಮಾಡುವುದು ಸರಕಾರದ ಉದ್ದೇಶ.
1.13 ಕೋಟಿ ವಿವಾದ ಪರಿಹಾರ
2020ರಲ್ಲಿ ಜಾರಿಯಾಗಿದ್ದ “ವಿವಾದ್ ಸೆ ವಿಶ್ವಾಸ್’ ಯೋಜನೆಯ ಮೊದಲ ಆವೃತ್ತಿಯಲ್ಲಿ 1.13 ಕೋಟಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಜತೆಗೆ 75788 ಕೋಟಿ ರೂ. ಮೊತ್ತವನ್ನು ಪರಿಹಾರವಾಗಿ ಪಡೆದುಕೊಳ್ಳಲಾಗಿದೆ.