Advertisement

Budget2024; 40,000 ಕೋಚ್‌ಗಳು ವಂದೇ ಭಾರತ್ ಗುಣಮಟ್ಟಕ್ಕೆ; ಬಜೆಟ್ ನಲ್ಲಿ ರೈಲ್ವೇಗೆ ಏನಿದೆ?

12:33 PM Feb 01, 2024 | Team Udayavani |

ನವದೆಹಲಿ: ಸಂಪರ್ಕ ಮತ್ತು ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವಲ್ಲಿ ಕೇಂದ್ರವು ತನ್ನ ಗಮನವನ್ನು ಉಳಿಸಿಕೊಳ್ಳುತ್ತದೆ ಎಂದು ಒತ್ತಿಹೇಳಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 40,000 ಸಾಮಾನ್ಯ ರೈಲು ಬೋಗಿಗಳನ್ನು ವಂದೇ ಭಾರತ್ ಮಾನದಂಡಕ್ಕೆ ಪರಿವರ್ತಿಸಲಾಗುವುದು ಎಂದು ಕೇಂದ್ರ ಮಧ್ಯಾಂತರ ಬಜೆಟ್ ಮಂಡನೆಯಲ್ಲಿ ಹೇಳಿದರು.

Advertisement

“ಪ್ರಯಾಣಿಕರ ಸುರಕ್ಷತೆ, ಅನುಕೂಲ ಮತ್ತು ಆರಾಮದಾಯಕತೆಯನ್ನು ಹೆಚ್ಚಿಸಲು ಇದು ಉಪಯೋಗವಾಗಲಿದೆ” ಎಂದು ನಿರ್ಮಲಾ ಹೇಳಿದರು.

ಇಂಧನ ಖನಿಜ ಮತ್ತು ಸಿಮೆಂಟ್ ಕಾರಿಡಾರ್, ಬಂದರು ಸಂಪರ್ಕ ಕಾರಿಡಾರ್ ಮತ್ತು ಹೆಚ್ಚಿನ ಸಂಚಾರ ಸಾಂದ್ರತೆ ಕಾರಿಡಾರ್ ಹೀಗೆ ಮೂರು ಪ್ರಮುಖ ರೈಲ್ವೆ ಕಾರಿಡಾರ್ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.

ಇದನ್ನೂ ಓದಿ:Budget 2024: ತೆರಿಗೆ ಪಾವತಿದಾರರಿಗೆ ಅಭಿನಂದನೆ…57 ನಿಮಿಷಗಳಲ್ಲಿ ಬಜೆಟ್‌ ಭಾಷಣ ಅಂತ್ಯ

ಪಿಎಂ ಗತಿಶಕ್ತಿ ಅಡಿಯಲ್ಲಿ ಗುರುತಿಸಲ್ಪಟ್ಟಿರುವ ಈ ಯೋಜನೆಗಳು ಬಹು-ಮಾದರಿ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ, ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು.

Advertisement

ಹೆಚ್ಚಿನ ದಟ್ಟಣೆಯ ಕಾರಿಡಾರ್‌ ಗಳ ದಟ್ಟಣೆಯು ಪ್ರಯಾಣಿಕರ ರೈಲುಗಳ ಕಾರ್ಯಾಚರಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದರ ಪರಿಣಾಮವಾಗಿ ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಹೆಚ್ಚಿನ ವೇಗದ ಪ್ರಯಾಣವನ್ನು ನೀಡುತ್ತದೆ. ಸರಕು ಸಾಗಣೆ ಕಾರಿಡಾರ್‌ ಗಳೊಂದಿಗೆ, ಮೂರು ಕಾರಿಡಾರ್ ಕಾರ್ಯಕ್ರಮಗಳು ಭಾರತದ ಜಿಡಿಪಿ ಬೆಳವಣಿಗೆಯನ್ನು ವೇಗಗೊಳಿಸುತ್ತವೆ ಎಂದು ಸಚಿವರು ಹೇಳಿದರು.

ವಾಯುಯಾನದ ಬಗ್ಗೆ ಹೇಳಿದ ಸಚಿವೆ, ಕಳೆದ ಹತ್ತು ವರ್ಷಗಳಲ್ಲಿ ಉಡಾನ್ ಯೋಜನೆಯಡಿಯಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆಯು 149ಕ್ಕೆ ದ್ವಿಗುಣ ಮಾಡಲಾಗಿದೆ. ಈ ಯೋಜನೆಯು ಎರಡು ಮತ್ತು ಮೂರನೇ ದರ್ಜೆಯ ನಗರಗಳಿಗೂ ವಿಸ್ತರಣೆಯಾಗಿದೆ. ಪ್ರಸ್ತುತ ಇರುವ ವಿಮಾನ ನಿಲ್ದಾಣಗಳ ವಿಸ್ತರಣೆ ಮತ್ತು ಹೊಸ ವಿಮಾನ ನಿಲ್ದಾಣಗಳ ಅಭಿವೃದ್ಧಿಯನ್ನು ತ್ವರಿತವಾಗಿ ಮುಂದುವರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next