ನವದೆಹಲಿ: ಬಜೆಟ್‌ನಲ್ಲಿ ನಮಗೆ ಏನು ಸಿಗಲಿದೆ ಎನ್ನುವುದು ಪ್ರತಿ ಬಾರಿ ವೈಯಕ್ತಿಕ ಆದಾಯ ತೆರಿಗೆ ಪಾವತಿಸುವ ವರ್ಗದ ಪ್ರಶ್ನೆಯಾಗಿರುತ್ತದೆ. 2014ರ ಬಳಿಕ ತೆರಿಗೆಯ ಹಂತ(ಸ್ಲ್ಯಾಬ್)ಗಳಲ್ಲಿ ಬದಲಾವಣೆ ಮಾಡಲಾಗಿಲ್ಲ.
ಕೆಲವು ಇಂಗ್ಲಿಷ್ ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ, ಈ ಬಾರಿ ವೈಯಕ್ತಿಕ ಆದಾಯ ತೆರಿಗೆ ಮಿತಿ ವಾರ್ಷಿಕ 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ. ಒಂದು ವೇಳೆ, ಅದು ಅನುಷ್ಠಾನಗೊಂಡರೆ, ಉದ್ಯೋಗಿಗಳಿಗೆ ಮತ್ತು ಸಣ್ಣ ಪ್ರಮಾಣದ ಉದ್ಯಮ ನಡೆಸುವವರಿಗೆ ಅನುಕೂಲವಾಗುತ್ತದೆ.
ಕೊರೊನಾ ನಂತರ ದೇಶದಲ್ಲಿ ಜೀವನ ವ್ಯವಸ್ಥೆ ಕೂಡ ಬದಲಾವಣೆ ಆಗಿರುವುದರಿಂದ ತೆರಿಗೆ ವ್ಯವಸ್ಥೆಯಲ್ಲಿಯೂ ಬದಲಾವಣೆ ಆಗಬೇಕು ಎನ್ನುವುದು ವೇತನದಾರರ ನಿರೀಕ್ಷೆ.